ಫ್ರೆಂಡ್ಸ್, ಫ್ಯಾಮಿಲಿಯವರ ಹುಟ್ಟುಹಬ್ಬ ಆಚರಿಸುವುದನ್ನು ನೋಡಿದ್ದೇವೆ, ಇದಲ್ಲದೇ ಕೆಲವರು ತಮ್ಮ ಮನೆಯ ಸಾಕು ಪ್ರಾಣಿಯ ಹುಟ್ಟುಹಬ್ಬವನ್ನೂ ಆಚರಿಸುವುದುಂಟು. ಆದರೆ ಎಂದಾದರೂ ಬೈಕ್ ಬರ್ತ್‌ಡೇ ಸೆಲೆಬ್ರೇಷನ್ ನೋಡಿದ್ದೀರಾ? ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕೇಕ್ ಕಟ್ಟಿಂಗ್ ನೋಡಿದ್ರೆ ಒಂದು ಕ್ಷಣ ಈತನ ಕ್ರಿಯೇಟಿವಿಗೆ ನೀವು ಫಿದಾ ಆಗುವುದಂತೂ ಖಂಡಿತಾ.
shivamurthy3893 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆಗಸ್ಟ್ 6ರಂದು ಹಂಚಿಕೊಂಡಿರುವ ವಿಡಿಯೋ ಇಲ್ಲಿಯವರೆಗೆ 8ಮಿಲಿಯನ್ ಅಂದರೆ 8ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ವಿಪರೀತ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಮಹಿಳೆಯ CT ಸ್ಕ್ಯಾನ್ ಕಂಡು ಬೆಚ್ಚಿಬಿದ್ದ ವೈದ್ಯರು
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್‌ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದನ್ನು ಕಾಣಬಹುದು. ಬೈಕ್ ಅನ್ನು ಸ್ವಚ್ಛವಾಗಿ ತೊಳೆದು ಹೂವಿನ ಹಾರ ಹಾಕಿ, ಅಕ್ಕಪಕ್ಕದ ಮನೆಯವರನ್ನು ಬೈಕ್ ಬರ್ತ್ ಡೇ ಆಚರಣೆಗೆ ಆಹ್ವಾನಿಸಿದ್ದಾನೆ. ಇದಲ್ಲದೇ ಬೈಕ್‌ನ ಮುಂದೆ ಒಬ್ಬಾತ ಕೇಕ್ ಹಿಡಿದುಕೊಂಡು ನಿಂತಿದ್ದು, ಬೈಕ್ ಮುಂದಿನ ಟಯರ್‌ಗೆ ಚಾಕು ಕಟ್ಟಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. “ಪೆಟ್ರೋಲ್ ಟ್ಯಾಂಕ್ ಒಳಗೆ ಒಂದು ಕ್ಯಾಂಡೆಲ್ ಹಚ್ಬೇಕಿತ್ತು..ಅದೊಂದು ಮಿಸ್ ಆಯ್ತು..” ಎಂದು ನೆಟ್ಟಿಗರೊಬ್ಬರು ಹಾಸ್ಯಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Thu, 12 September 24