ಖ್ಯಾತ ಕಥಕ್ ನೃತ್ಯಪಟು, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಿರ್ಜೂ ಮಹರಾಜ್ (Birju Maharaj )ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಕಲಾ ಸೇವೆ, ಅವರ ಆದರ್ಶಗಳು ಸದಾ ಜೀವಂತವಾಗಿರುತ್ತವೆ. ಪಂಡಿತ್ ಬಿರ್ಜೂ ಮಹಾರಾಜ್ (Pandith Birju Maharaj) ಅವರ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿದಿದೆ. ಈ ನಡುವೆ ಬಿರ್ಜೂ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಟ್ಟ ಬಾಲಕಿಗೆ ಕಥಕ್ (Kathak) ಕಲಿಸುವ ವೇಳೆ ಆಕೆಯ ಕಾಲುಗಳನ್ನು ಮುಟ್ಟಿ ಪ್ರೀತಿಯಿಂದ ಕಲಾಭ್ಯಾಸ ಮಾಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇದು ಪಂಡಿತ್ ಬಿರ್ಜೂ ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಎಂದು ನೆಟ್ಟಿಗರು ಬಿರ್ಜೂ ಅವರನ್ನು ಕಳೆದುಕೊಂಡಿದುದರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
Great respect to beloved #birjumaharaj ji you and #Kathak aren’t two different things to me. #rip pic.twitter.com/JeTPGz9aYn
— Sarvan_K86?? (@go3ram) January 17, 2022
ಈ ವಿಡಿಯೋವನ್ನು ಟ್ವಿಟರ್ನಲ್ಲಿ Sarvan_K86 ಎನ್ನುವವರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೊದಲು ಬಿರ್ಜೋ ಪುಟ್ಟ ಬಾಲಕಿಗೆ ಒಂದು ಜೋಡಿ ಗೆಜ್ಜೆಯನ್ನು ನೀಡುತ್ತಾರೆ ನಂತರ ಆಕೆಯ ಹಣೆಗೆ ತಿಲಕವನ್ನು ಇಡುತ್ತಾರೆ. ಆ ಬಳಿಕ ನೃತ್ಯದ ಆರಂಭದಲ್ಲಿ ಹೆಗೆ ನಮಸ್ಕರಿಸಬೇಕು ಎನ್ನುವುದನ್ನು ಬಾಲಕಿಯ ಕಾಲನ್ನು ಮುಟ್ಟಿ ನಮಸ್ಕರಿಸಿಯೇ ತೋರಿಸುತ್ತಾರೆ. ಕಥಕ್ ವಿದ್ವಾಂಸ ಬಿರ್ಜೂ ಮಹಾರಾಜ್ ಅವರ ಈ ಸರಳ ವ್ಯಕ್ತಿತ್ವಕ್ಕೆ ನೋಡುಗರು ಮಾರುಹೋಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕಥಕ್ ಮಾಂತ್ರಿಕ ಬಿರ್ಜೂ ಮಹಾರಾಜ್ ಅವರ ಮೂಲ ಹೆಸರು ಬ್ರಿಜ್ ಮೋಹನ್ ನಾಥ್ ಮಿಶ್ರಾ. ಅವರು 1937ರ ಫೆಬ್ರವರಿ 4ರಂದು ಉತ್ತರ ಪ್ರದೇಶದ ಹಂಡಿಯಾದಲ್ಲಿ ಜನಿಸಿದ್ದರು. ಬಾಲ್ಯದಲ್ಲೇ ನೃತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು ಕಥಕ್ ಮಾಂತ್ರಿಕ ಎಂದೇ ಹೆಸರು ಪಡೆದರು. ಬಿರ್ಜೂ ಅವರ ಕಲಾ ಸೇವೆಗೆ 1986 ರಲ್ಲಿ ಭಾರತದ ಅತ್ಯನ್ನತ ಗೌರವಗಳಲ್ಲಿ ಒಂದಾದ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 83 ವರ್ಷದ ಬಿರ್ಜೂ ಮಹಾರಾಜ್ ಭಾನುವಾರ (ಜ. 16)ರಂದು ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ:
ಗೂಗಲ್ ಮೀಟ್ನಲ್ಲಿ ಸಂಬಂಧಿಗಳಿಗೆ ಆಹ್ವಾನ; ಜೊಮಾಟೋ ಮೂಲಕ ಊಟ: ಇದು ಕೊರೋನಾ ಕಾಲದ ವಿಭಿನ್ನ ಮದುವೆ
Published On - 12:02 pm, Tue, 18 January 22