ದೆಹಲಿ: ಶ್ರೀರಾಮನ ಚಿತ್ರವಿರುವ ಕಾಗದದ ಪ್ಲೇಟ್‌ಗಳಲ್ಲಿ ಬಿರಿಯಾನಿ ಬಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಜಹಾಂಗೀರ್‌ಪುರಿಯಲ್ಲಿರುವ ಬಿರಿಯಾನಿ ಹೋಟೆಲ್ ಒಂದರಲ್ಲಿ ನಡೆದಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಪೊಲೀಸರು ಹೋಟೆಲ್ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಶ್ರೀ ರಾಮನ ಚಿತ್ರಗಳನ್ನು ಒಳಗೊಂಡಿರುವ ಕಾಗದದ ಪ್ಲೇಟ್ಗಳನ್ನು ಕಾಣಬಹುದು. ಸ್ಥಳೀಯ ಬಜರಂಗದಳದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಇದಲ್ಲದೇ ಬಿರಿಯಾನಿ ಮಾರಾಟ ಮಾಡುವುದನ್ನು ವಿರೋಧಿಸಿ ಗಲಾಟೆ ನಡೆದಿದೆ. ತಕ್ಷಣ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಅಲ್ಲಿನ ಅವ್ಯವಸ್ಥೆಯನ್ನು ನಿಭಾಯಿಸಿ ಅಂಗಡಿ ಮಾಲೀಕರನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
Jahangirpuri, Delhi: Biriyani was being served on paper plates with images of Lord Rama, locals and Bajrang dal object and complained to Police.
Investigation on…..https://t.co/gcojcxZYgU pic.twitter.com/HgxcgFEnke
— Megh Updates 🚨™ (@MeghUpdates) April 23, 2024
ಇದನ್ನೂ ಓದಿ: Acid Attack: ಪ್ರೀತಿಸಿ ಮೋಸ ಮಾಡಿದ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ ಯುವತಿ!
ವರದಿಗಳ ಪ್ರಕಾರ, ಪೇಪರ್ ಪ್ಲೇಟ್‌ಗಳ ಬಂಡಲ್‌ನಲ್ಲಿದ್ದ ಒಂದು ಅಥವಾ ಎರಡು ಪ್ಲೇಟ್‌ಗಳು ಭಗವಾನ್ ರಾಮನ ಫೋಟೋಗಳನ್ನು ಹೊಂದಿದ್ದವು. ಪ್ರಸ್ತುತ, ಜಹಾಂಗೀರ್ಪುರಿ ಪೊಲೀಸ್ ಠಾಣೆ ಸಂಪೂರ್ಣ ಘಟನೆಯ ತನಿಖೆ ನಡೆಸುತ್ತಿದೆ.ಆರೋಪಿಗಳು ಮಾರ್ಕೆಟಿಂಗ್ ಉದ್ದೇಶಕ್ಕಾಗಿ ಇದನ್ನು ಮಾಡಿದ್ದಾರೆಯೇ ಅಥವಾ ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಇದನ್ನು ಮಾಡಿದ್ದಾರೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.ಆಹಾರ ಮಾರಾಟಕ್ಕಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವ ಘಟನೆ ಬೆಳಕಿಗೆ ಬಂದ ನಂತರ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ