Viral : ದಿನಕ್ಕೆ ನೂರು ಬಾರಿ ಕರೆ ಮಾಡಿ ಗೆಳೆಯನಿಗೆ ಹಿಂಸೆ ನೀಡುತ್ತಿದ್ದ ಹುಡುಗಿ, ವೈದ್ಯರ ಮಾತು ಕೇಳಿ ಬೆಚ್ಚಿಬಿದ್ದ ಸ್ನೇಹಿತ
Love Brain: ಚೀನಾದ 18 ವರ್ಷದ ಹುಡುಗಿಯೊಬ್ಬಳು ಲವ್ ಬ್ರೈನ್ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಆಕೆ ದಿನಕ್ಕೆ ನೂರಕ್ಕೂ ಹೆಚ್ಚು ಬಾರಿ ತನ್ನ ಬಾಯ್ ಫ್ರೆಂಡ್ ಗೆ ಕರೆ ಮಾಡುತ್ತಿದ್ದಳಂತೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಪ್ರೀತಿ ಎನ್ನುವುದು ಮಾಯೆ. ಆ ಮಾಯೆ ಇಲ್ಲದೆ ಬದುಕಿಲ್ಲ, ಬದುಕು ಸುಂದರವಾಗಿರಬೇಕೆಂದರೆ ಪ್ರೀತಿಯ ಮಾಯೆ ನಮ್ಮನ್ನು ಸುತ್ತುತ್ತಿರಬೇಕು ಎಂದು ಹಲವರು ಹೇಳುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಹುಡುಗನಿಗೆ ಈ ಪ್ರೀತಿಯ ಮಾಯೆಯೇ ಕಂಟಕವಾಗಿ ಪರಿಣಮಿಸಿದೆ. ಹೌದು ಚೀನಾದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇಲ್ಲಿನ 18 ವರ್ಷದ ಹುಡುಗಿಯೊಬ್ಬಳು ದಿನಕ್ಕೆ ನೂರಕ್ಕೂ ಹೆಚ್ಚು ಬಾರಿ ತನ್ನ ಬಾಯ್ ಫ್ರೆಂಡ್ ಗೆ ಕರೆ ಮಾಡಿ ಮಾತನಾಡುತ್ತಿದ್ದಳಂತೆ, ಏನಾದರೂ ಆತನ ಆಕೆಯೆ ಕರೆಗೆ ಸ್ಪಂದಿಸದಿದ್ದರೆ ಆಕೆಯ ವರ್ತನೆ ಅತಿರೇಕಕ್ಕೆ ಹೋಗುತ್ತಿತ್ತು. ಗೆಳತಿಯ ಈ ವರ್ತನೆ ಆ ಹುಡುಗನಿಗೂ ಉಸಿರುಗಟ್ಟಿಸುವಂತೆ ಮಾಡಿತ್ತು. ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಮಾಧ್ಯಮ ವರದಿಗಳ ಪ್ರಕಾರ ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ನಿವಾಸಿಯಾಗಿರುವ 18 ವರ್ಷ ವಯಸ್ಸಿನ ಕ್ಸಿಯಾಯು ಎಂಬ ಹುಡುಗಿ ತನ್ನ ಕಾಲೇಜು ಸ್ನೇಹಿತನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾಳೆ. ಇವರಿಬ್ಬರು ಪ್ರೀತಿಯಲ್ಲಿ ಬಿದ್ದ ನಂತರ ಕ್ಸಿಯಾಯು ತನ್ನ ಗೆಳೆಯನ ಮೇಲೆ ಹೆಚ್ಚು ಅವಳಂಬಿತವಾಗುತ್ತಾಳೆ. ಆಕೆಗೆ ಪ್ರತಿ ಕ್ಷಣವೂ ತನ್ನ ಬಾಯ್ ಫ್ರೆಂಡ್ ನನ್ನ ಜೊತೆಯಲ್ಲಿಯೇ ಇರಬೇಕು ಎಂದು ಅನಿಸುತ್ತಿತ್ತು. ಇದಕ್ಕಾಗಿ ಆಕೆ ಹಗಲು ರಾತ್ರಿ ಎನ್ನದೆ ದಿನಕ್ಕೆ ನೂರಕ್ಕಿಂತಲೂ ಹೆಚ್ಚು ಬಾರಿ ಗೆಳೆಯನಿಗೆ ಕರೆ ಮಾಡುತ್ತಿದ್ದಳು. ಜೊತೆಗೆ ಪ್ರತಿ ಕ್ಷಣವೂ ಆತನಿಗೆ ಮೆಸೇಜ್ ಮಾಡುತ್ತಿದ್ದಳು. ಆತನ ಏನಾದರೂ ಆಕೆಯ ಮೆಸೆಜ್ ಗೆ ಸ್ಪಂದಿಸದಿದ್ದರೆ ಆಕೆ ಕೋಪಗೊಂಡು ಮನೆಯ ವಸ್ತುಗಳನ್ನೆಲ್ಲಾ ಬಿಸಾಡುತ್ತಿದ್ದಳು. ಕ್ಸಿಯಾಯುಳ ಈ ವರ್ತನೆ ಆಕೆ ಬಾಯ್ ಫ್ರೆಂಡ್ ಗೂ ಉಸಿರುಗಟ್ಟಿಸಿದಂತಾಗಿದ್ದು.
ಇದನ್ನೂ ಓದಿ: ಇದಂತೂ ಗುಟ್ಕಾ ಪ್ರಿಯರ ಫೇವರಿಟ್; ವೈರಲ್ ಆಗುತ್ತಿದೆ ವಿಮಲ್ ಪಾನ್ ಮಸಾಲ ಐಸ್ ಕ್ರೀಮ್ ರೋಲ್
ಆಕೆಯ ಈ ವಿಚಿತ್ರ ವರ್ತನೆ ಅತಿರೇಕಕ್ಕೆ ಏರಿದಾಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತು. ನಂತರ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ ʼಲವ್ ಬ್ರೈನ್ʼ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಈ ಕಾಯಿಲೆಯು ಪರಿಹರಿಸಲಾಗದ ಬಾಲ್ಯದ ಮಾನಸಿಕ ಆಘಾತಗಳಿಂದ ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ