Viral: ಬಾಯ್ಲಿಂಗ್‌ ವಾಟರ್‌ ಇಂಟು ಐಸ್‌ ಚಾಲೆಂಜ್‌ ಮಾಡೋಕೆ ಹೋಗಿ ಮೈ ಸುಟ್ಟುಕೊಂಡ ಯುವತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 25, 2024 | 6:26 PM

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವಂತ ಕೆಲವೊಂದಿಷ್ಟು ಚಾಲೆಂಜ್ ವಿಡಿಯೋಗಳನ್ನು ತಾವು ಕೂಡಾ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡವರು ಹಲವರಿದ್ದಾರೆ. ಅದೇ ರೀತಿ ಇಲ್ಲೊಬ್ಳು ಯುವತಿ ಕೂಡಾ ಹಿಮರಾಶಿಯ ಮಧ್ಯೆ ಕೊತ ಕೊತ ಕುದಿಯೋ ನೀರನ್ನು ಎರಚುವ ಬಾಯ್ಲಿಂಗ್‌ ವಾಟರ್‌ ಇಂಟು ಐಸ್‌ ಚಾಲೆಂಜ್‌ ಮಾಡೋಕೆ ಹೋಗಿ ಪಜೀತಿಗೆ ಸಿಲುಕಿದ್ದಾಳೆ. ಹೌದು ಮೇಲೆ ಎರಚಿದ ನೀರು ಆಕೆಯ ಮೇಲೆ ಬಿದ್ದ ಪರಿಣಾಮ ಮೈ ಕೈ ಸುಟ್ಟು ಹೋಗಿದೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

Viral: ಬಾಯ್ಲಿಂಗ್‌ ವಾಟರ್‌ ಇಂಟು ಐಸ್‌ ಚಾಲೆಂಜ್‌ ಮಾಡೋಕೆ ಹೋಗಿ ಮೈ ಸುಟ್ಟುಕೊಂಡ ಯುವತಿ
ವೈರಲ್​ ವಿಡಿಯೋ
Follow us on

ಸೋಷಿಯಲ್‌ ಮೀಡಿಯಾದಲ್ಲಿ ಯಾವುದಾದರೂ ಒಂದು ಚಾಲೆಂಜ್ ವಿಡಿಯೋ ಟ್ರೆಂಡ್‌ ಆದರೆ ಸಾಕು ಹೆಚ್ಚಿನವರು ಅದೇ ಚಾಲೆಂಜ್‌ ವಿಡಿಯೋಗಳನ್ನು ಮಾಡ್ತಾರೆ. ಅವುಗಳಲ್ಲಿ ಕೆಲವೊಂದು ಚಾಲೆಂಜಸ್‌ ತುಂಬಾನೇ ಡೇಂಜರ್‌ ಆಗಿರುತ್ತವೆ. ಇಂತಹ ಚಾಲೆಂಜ್ ಮಾಡಲು ಹೋಗಿ ಪಜೀತಿಗೆ ಸಿಲುಕಿದವರು ಹಲವರಿದ್ದಾರೆ. ಅದೇ ರೀತಿ ಇಲ್ಲೊಬ್ಳು ಯುವತಿ ಕೂಡಾ ಹಿಮರಾಶಿಯ ಮಧ್ಯೆ ಕೊತ ಕೊತ ಕುದಿಯೋ ನೀರನ್ನು ಎರಚುವ ಬಾಯ್ಲಿಂಗ್‌ ವಾಟರ್‌ ಇಂಟು ಐಸ್‌ ಚಾಲೆಂಜ್‌ ಮಾಡೋಕೆ ಹೋಗಿ ಮೈ ಕೈ ಸುಟ್ಟುಕೊಂಡಿದ್ದಾಳೆ. ಹೌದು ಮೇಲೆ ಎರಚಿದ ನೀರು ಆಕೆಯ ಮೈ ಮೇಲೆ ಬಿದ್ದ ಪರಿಣಾಮ, ಮೈ ಸುಟ್ಟಿದೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಹಿಮ ಬೀಳುವಂತಹ ಶೀತ ಪ್ರದೇಶದಲ್ಲಿ ಬಿಸಿ ಬಿಸಿ ನೀರನ್ನು ಮೇಲೆ ಎರಚಿದರೆ ಅದು ಐಸ್‌ ಆಗಿ ಪರಿವರ್ತನೆಗೊಳ್ಳುತ್ತವೆ ಎಂದು ಹೇಳುವ ಟ್ರೆಂಡಿಂಗ್‌ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಬಾಯ್ಲಿಂಗ್‌ ವಾಟರ್‌ ಇಂಟು ಐಸ್‌ ಚಾಲೆಂಜ್‌ ಅನ್ನು ಅನೇಕ ಜನರು ಪ್ರಯತ್ನಿಸಿದ್ದಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಈ ಚಾಲೆಂಜ್‌ ಸ್ವೀಕಾರ ಮಾಡಲು ಹೋಗಿ ಪಜೀತಿಗೆ ಸಿಲುಕಿದ್ದಾಳೆ. ಆಕೆ ಪ್ಲಾಸ್ಕ್‌ನಲ್ಲಿದ್ದ ಕೊತಕೊತ ಕುದಿಯುವ ನೀರನ್ನು ಮೇಲೆರೆಚಿದಾಗ ಆ ಬಿಸಿ ನೀರು ಸೀದಾ ಬಂದು ಆಕೆಯ ಮೈ ಮೇಲೆ ಬಿದ್ದಿದೆ. ಪರಿಣಾಮ ಆಕೆಯ ದೇಹದಲ್ಲಿ ಸುಟ್ಟ ಗಾಯಗಳಾಗಿದ್ದು, ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಿತ್ರ ಸಂಗತಿ ಏನಂದ್ರೆ ಆಕೆ ಆಸ್ಪತ್ರೆಯಿಂದ ಮರಳಿ ಮನೆಗೆ ಬಂದ ನಂತರ ವಾಪಸ್‌ ಇದೇ ಚಾಲೆಂಜ್‌ ಅನ್ನು ಮತ್ತೊಮ್ಮೆ ಟ್ರೈ ಮಾಡಿದ್ದು, ಇದರಲ್ಲಿ ಆಕೆ ಯಶಸ್ವಿಯಾಗಿದ್ದಾಳೋ ಎಂಬುದು ಗೊತ್ತಿಲ್ಲ ಎಂದು ವರದಿಗಳು ತಿಳಿಸಿವೆ.

dailystar ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 39 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಜನ ಏಕೆ ಹೀಗೆ ಬುದ್ಧಿಯಿಲ್ಲದವರ ರೀತಿಯಲ್ಲಿ ವರ್ತಿಸುತ್ತಾರೆʼ ಎಂಬ ಕಾಮೆಂಟಗ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈಕೆಗೆ ಇದೆಲ್ಲಾ ಬೇಕಿತ್ತಾʼ ಎಂದು ಕೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ