ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ 2001ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಲವ್ ಕಮ್ ಅರೆಂಜ್ಡ್ ಮ್ಯಾರೇಜ್ ಆದ ಇವರು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯಾದರು. ಈ ಜೋಡಿಯ ಇಂಟರೆಸ್ಟಿಂಗ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. ಅದೇನು ಅಂತಿದೀರಾ? ಇಲ್ಲಿದೆ ಮಾಹಿತಿ.
2001 ಜನವರಿ 17ನೇ ತಾರೀಕಿನಂದು ಮುಂಬೈನಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟರು. ಇದೀಗ ಎರಡು ದಶಕದ ಬಳಿಕ ಇವರ ವಿವಾಹದ ಫೋಟೋ ವೈರಲ್ ಆಗಿದೆ. ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾರಿಗೆ 2002 ಸಪ್ಟೆಂಬರ್ ತಿಂಗಳಿನಲ್ಲಿ ಮಗ ಆರವ್ ಹುಟ್ಟಿದನು. 2012 ಸಪ್ಟೆಂಬರ್ ತಿಂಗಳಿನಲ್ಲಿ ಮಗಳು ನಿತಾರಾಳ ಜನನವಾಯಿತು. ಅವರು ವಿವಾಹವಾಗಿ ಈ ವರ್ಷಕ್ಕೆ 20 ವರ್ಷಗಳು ಸಂದಿವೆ.
ನಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಮದುವೆಯಾಗಿ 20 ವರ್ಷಗಳು ಕಳೆದಿವೆ. ಅಕ್ಷಯ್ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಜೋಡಿ ಮದುವೆಯಲ್ಲಿ ನಡೆದ ಶಾಸ್ತ್ರಗಳ ಫೋಟೋಗಳ ಜತೆಗೆ ಮದುವೆಯಲ್ಲಿ ನಡೆದ ಶಾಸ್ತ್ರಗಳ ಕೆಲವು ಫೋಟೋಗಳೂ ವೈರಲ್ ಆಗಿವೆ. ಈ ಜೋಡಿಯ ಫ್ಯಾನ್ಸ್ ಕೂಡಾ ಇವರ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ:
ಕೊರೊನಾ ಸಮಯದಲ್ಲಿ 1 ಕೋಟಿ ದೇಣಿಗೆ ನೀಡಿದ್ದಾರೆ ನಟ ಅಕ್ಷಯ್ ಕುಮಾರ್
ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಸಿನಿಮಾ ಪ್ರದರ್ಶನಕ್ಕೆ ತಡೆ: ಮಹಾರಾಷ್ಟ್ರ ಕಾಂಗ್ರೆಸ್ ಬೆದರಿಕೆ
Published On - 9:43 am, Fri, 18 June 21