ಬೋರ್​ ಆಗಿದೆ ಎಂದು 7 ಕೋಟಿ ಬೆಲೆ ಬಾಳುವ ಪೇಂಟಿಂಗ್ ಮೇಲೆ​ ಕಣ್ಣಿನ ಚಿತ್ರ ಬಿಡಿಸಿ ಪೇಚಿಗೆ ಸಿಲುಕಿದ ಸೆಕ್ಯುರಿಟಿ ಗಾರ್ಡ್​

| Updated By: Pavitra Bhat Jigalemane

Updated on: Feb 10, 2022 | 4:10 PM

ಬೋರ್​ ಆಗಿದೆ ಎಂದು ಮುಖವಿರದ ಪೇಂಟಿಂಗ್​ ಒಂದಕ್ಕೆ ಸೆಕ್ಯುರಿಟಿ ಕಾರ್ಡ್ ಒಬ್ಬ  ಪೇಂಟಿಂಗ್​ ಮೇಲೆ ಕಣ್ಣನ್ನು ಚಿತ್ರಿಸಿದ್ದಾನೆ. ಸದ್ಯ ಈತನನ್ನು ಚಿತ್ರವನ್ನು ವಿರೂಪಗೊಳಿಸಿದ್ದಾನೆ ಎಂದು ಕೆಲಸದಿಂದ ವಜಾಗೊಳಿಸಲಾಗಿದೆ.

ಬೋರ್​ ಆಗಿದೆ ಎಂದು 7 ಕೋಟಿ ಬೆಲೆ ಬಾಳುವ ಪೇಂಟಿಂಗ್ ಮೇಲೆ​ ಕಣ್ಣಿನ ಚಿತ್ರ ಬಿಡಿಸಿ ಪೇಚಿಗೆ ಸಿಲುಕಿದ ಸೆಕ್ಯುರಿಟಿ ಗಾರ್ಡ್​
ಪೇಂಟಿಂಗ್​
Follow us on

ಕೆಲಸಕ್ಕೆ ಬಂದ ಸೆಕ್ಯುರಿಟಿ ಗಾರ್ಡ್ (Security Guard)​ ಒಬ್ಬ ಮಾಡಲು ಏನೂ ಕೆಲಸವಿಲ್ಲದೆ ಬೋರ್​ ಬಂದಿದೆ ಎಂದು ರಷ್ಯಾದ ಆರ್ಟ್​ ಗ್ಯಾಲರಿಯಲ್ಲಿ (Art Gallery) 7 ಕೋಟಿ ರೂ. ಬೆಲೆಬಾಳುವ ಮುಖದ ಭಾಗಗಳನ್ನು ಬಿಡಿಸದ ವರ್ಣಚಿತ್ರದ  (Painting) ಮೇಲೆ ಕಣ್ಣನ್ನು ಬಿಡಿಸಿದ್ದಾನೆ.  ವರ್ಣಚಿತ್ರಗಳು ಅಥವಾ ಆರ್ಟ್​ ಗ್ಯಾಲರಿಯಲ್ಲಿರುವ ಚಿತ್ರಗಳು ಅದರದ್ದೇ ಆದ ಅರ್ಥವನ್ನು ಹೊಂದಿರುತ್ತದೆ. ಮುಖವಿರಲಿ, ಇಲ್ಲದೆ ಇರಲಿ, ಬಿಳಿ ಹಾಳೆಯ ಮೇಲೆ ಒಂದು ಗೆರೆ ಎಳೆದಿದ್ದರೂ ಆ  ಪೇಂಟಿಗ್​ ಕೋಟಿ ರೂಗಳಿಗೆ ಮಾರಾಟವಾದ ಉದಾಹರಣೆಗಳಿವೆ. ಹೀಗಿದ್ದಾಗ ಬೋರ್​ ಆಗಿದೆ ಎಂದು ಮುಖವಿರದ ಪೇಂಟಿಂಗ್​ ಒಂದಕ್ಕೆ ಸೆಕ್ಯುರಿಟಿ ಕಾರ್ಡ್ ಒಬ್ಬ  ಪೇಂಟಿಂಗ್​ ಮೇಲೆ ಕಣ್ಣನ್ನು ಚಿತ್ರಿಸಿದ್ದಾನೆ. ಸದ್ಯ ಈತನನ್ನು ಚಿತ್ರವನ್ನು ವಿರೂಪಗೊಳಿಸಿದ್ದಾನೆ ಎಂದು ಕೆಲಸದಿಂದ ವಜಾಗೊಳಿಸಲಾಗಿದೆ.


ರಷ್ಯಾದ ಯೆಕಟೆರಿನ್ಬರ್ಗ್ ಪ್ರದೇಶದ ಯೆಲ್ಟ್ಸಿನ್ ಎನ್ನುವ ಆರ್ಟ್​ ಗ್ಯಾಲರಿಲ್ಲಿ ಈ ಘಟನೆ ನಡೆದಿದೆ. ಚಿತ್ರದ ಮೇಲೆ ಕಣ್ಣನ್ನು ಬಿಡಿಸಿದ ಸೆಕ್ಯುರಿಟಿ ಗಾರ್ಡ್​ ಅನ್ನು ವಜಾಗೊಳಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ ವಿರೂಪಗೊಳಿಸಿದ ಚಿತ್ರವನ್ನು 1930ರಲ್ಲಿ ರಚಿಸಲಾಗಿತ್ತು ಎನ್ನಲಾಗಿದ್ದು ಸುಮಾರು 7.5 ಕೋಟಿ ರೂಗಳಿಗೆ  ಇನ್ಸುರೆನ್ಸ್​ ಮಾಡಿಸಲಾಗಿದ್ದು, ಪ್ರದರ್ಶನಕ್ಕೆ ಇರಿಸಲಾಗಿತ್ತು ಎಂದು ವರದಿ ತಿಳಿಸಿದೆ. 

ಸದ್ಯ ಸೆಕ್ಯುರಿಟಿ ಗಾರ್ಡ್​ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ. ಆದರೆ ಆರೋಪ ಸಾಬೀತಾದರೆ ಶಿಕ್ಷೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.  ಆತ ಚಿತ್ರದ ಮೇಲೆ ಕಣ್ಣುಗಳನ್ನು ಬಿಡಿಸಲು  ಬಾಲ್​ ಪೆನ್​ಗಳನ್ನು ಬಳಕೆ ಮಾಡಿದ್ದು, ಎರಡು ಚಿತ್ರಗಳಿಗೆ ಕಣ್ಣನ್ನು ಬಿಡಿಸಿದ್ದಾನೆ ಎಂದು ಹೇಳಲಾಗಿದೆ.  ಚಿತ್ರಬಿಡಿಸಿದ ಕಣ್ಣುಗಳ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ:

ಪ್ರಯಾಣಿಕನೊಂದಿಗೆ ಬಂದ ಹುಂಜಕ್ಕೂ 30 ರೂ. ಟಿಕೆಟ್​ ನೀಡಿದ ಕಂಡಕ್ಟರ್​​: ಆಮೇಲಾಗಿದ್ದೇನು ಗೊತ್ತಾ?

Published On - 4:08 pm, Thu, 10 February 22