Wooden Play Button : ಗಿಫ್ಟ್! ನಿಮ್ಮ ಆಪ್ತರು ನಿಮಗೆ ಏನೇ ಗಿಫ್ಟ್ ಕೊಡಲಿ ಆ ಕ್ಷಣಕ್ಕೆ ಪುಳಕ, ಉತ್ಸಾಹವನ್ನಂತೂ ಅದು ತುಳುಕಿಸದೇ ಇರದು. ಈ ಮೂಲಕ ನಿಮ್ಮೊಳಗಿನ ಬಾಂಧವ್ಯವನ್ನೂ ಒಂದು ಹೆಜ್ಜೆ ಗಟ್ಟಿಗೊಳಿಸುತ್ತದೆ. ಆದರೆ, ನಿಮ್ಮ ಯಶಸ್ಸಿಗೆ ನಿಮ್ಮ ಸ್ನೇಹಿತರೂ ಖುಷಿಪಡುತ್ತಾರೆ ಎಂದರೆ ಅವರೇ ನಿಜವಾದ ನಿಮ್ಮ ಸ್ನೇಹಿತರು. ಯೂಟ್ಯೂಬ್ನಲ್ಲಿ 100 ಚಂದಾದಾರರನ್ನು ಪಡೆದ ಒಬ್ಬ ಹುಡುಗನಿಗೆ ಅವನ ಸ್ನೇಹಿತ ಅಚ್ಚರಿಯಾದ ಈ ಗಿಫ್ಟ್ ನೀಡಿದ್ದಾನೆ. ಏನಿರಬಹುದು? ಬಹಳ ಮುದ್ದಾದ ಗಿಫ್ಟ್ ಅದು. ಮೇಲೆ ಆ ಚಿತ್ರವನ್ನು ನೀವು ಈಗಾಗಲೇ ನೋಡಿದ್ದೀರಿ; ಮರದ ಪ್ಲೇ ಬಟನ್ವುಳ್ಳ ಗಿಫ್ಟ್. ಮಟ್ ಕೋವಲ್ (Matt Koval) ಎಂಬ ಟ್ವಿಟರ್ ಖಾತೆದಾರರು ತಮ್ಮ ಮಗನಿಗೆ ಅವನ ಸ್ನೇಹಿತ ಕೊಟ್ಟ ಈ ಗಿಫ್ಟ್ನ ಪೋಸ್ಟ್ ಹಂಚಿಕೊಂಡಿದ್ದಾರೆ.
My son hit 100 subscribers so his friend made him this wooden play button ? pic.twitter.com/ZySyY7n1mW
ಇದನ್ನೂ ಓದಿ— Matt Koval (@mattkoval) August 14, 2022
ಸಾಮಾನ್ಯವಾಗಿ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ಗಳು 1 ಲಕ್ಷ, 1 ಕೋಟಿ, 10 ಕೋಟಿ ಚಂದಾದಾರರನ್ನು ಪಡೆದ ಮೇಲೆ ಯೂಟ್ಯೂಬ್ ಬೆಳ್ಳಿ, ಚಿನ್ನ, ವಜ್ರ ಮತ್ತು ಕೆಂಪು ಡೈಮಂಡ್ ಪ್ಲೇ ಬಟನ್ ಅನ್ನು ಉಡುಗೊರೆಯಾಗಿ ನೀಡುತ್ತದೆ. ಇದನ್ನು ಗಮನಿಸಿದ ಈ ಹುಡುಗ ತನ್ನ ಸ್ನೇಹಿತನಿಗೆ ಹೀಗೆ ತಾನೇ ಗಿಫ್ಟ್ ಕೈಯ್ಯಾರೆ ಮಾಡಿಕೊಟ್ಟು ಸಂತೋಷ ವ್ಯಕ್ತಪಡಿಸಿದ್ದಾನೆ. 68,000 ಕ್ಕೂ ಹೆಚ್ಚು ಲೈಕ್ಸ್ ಈ ಪೋಸ್ಟ್ ಪಡೆದಿದೆ. ನೆಟ್ಟಿಗರು ಹೃದಯಸ್ಪರ್ಶಿಯಾದ ಪ್ರತಿಕ್ರಿಯೆಗಳಿಂದ ಸಂತಸ ವ್ಯಕ್ತಪಡಿಸಿದ್ಧಾರೆ.
ಖರೀದಿಸಿ ಯಾರೂ ಗಿಫ್ಟ್ ಕೊಡಬಹುದು. ಆದರೆ ಸ್ವತಃ ತಯಾರಿಸಿ? ಇದೇ ಸ್ನೇಹದ ಕೊಂಡಿಯನ್ನು ಹಿಡಿದಿಡುವ ಪ್ರೀತಿ, ಶ್ರದ್ಧೆ ಮತ್ತು ಕಟ್ಟಲಾಗದ ಬೆಲೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Tue, 16 August 22