Viral Video: ಏಯ್ ಚಿಲ್ಲಿ ಏನೇನೆಲ್ಲ ನಿನ್ನ ಬಾಯಿಯಲ್ಲಿ?
Golden Retriever : ಈ ವಿಡಿಯೋ 6,000 ಹೆಚ್ಚು ಲೈಕ್ಸ್ ಪಡೆದಿದೆ. 70,000 ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ. ತನ್ನ ಪೋಷಕರ ಗಮನ ಸೆಳೆಯಲು ಏನೆಲ್ಲ ನೌಟಂಕಿ ಮಾಡಿದೆ ಈ ನಾಯಿ!
Golden Retriever : ಸಾಕುಪ್ರಾಣಿಗಳು ತನ್ನ ಪೋಷಕರ ಗಮನ ಸೆಳೆಯಲು ಏನೆಲ್ಲ ಮಾಡುವುದಿಲ್ಲ ಕೇಳಿ! ನಾಯಿಗಳಂತೂ ನಾನಾ ಬಗೆಯಲ್ಲಿ ತಮ್ಮ ‘ಪ್ರತಿಭೆ’ಯನ್ನು ಪ್ರದರ್ಶಿಸುತ್ತಲೇ ಇರುತ್ತವೆ. ವಸ್ತುಗಳನ್ನು ಕದಿಯುವುದು, ಕಚ್ಚುವುದು, ಅಗಿಯುವುದಷ್ಟೇ ಅಲ್ಲ ನುಂಗುವುತನಕವೂ… ಈ ಮೂಲಕ ತಮ್ಮ ಪೋಷಕರು ತಮ್ಮೆಡೆ ತಿರುಗಿ ನೋಡಬೇಕು, ಮುದ್ದಿಸಬೇಕು, ಸದಾ ತಮ್ಮೊಂದಿಗೆ ತಮ್ಮ ಜಗತ್ತಿನಲ್ಲೇ ಇರಬೇಕೆಂದು ಬಯಸುತ್ತವೆ. ಇಲ್ಲಿರುವ ಈ ವಿಡಿಯೋ ಇದಕ್ಕೆ ಒಳ್ಳೆಯ ಉದಾಹರಣೆ. ಈ ಗೋಲ್ಡನ್ ರಿಟ್ರೈವರ್ ನಾಯಿಯು ಟ್ವಿಟರ್ನಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಹೊಂದಿದೆ. ಇದರ ಹೆಸರು ಚಿಲ್ಲಿ. ನೋಡಿ ಈ ವಿಡಿಯೋ…
View this post on Instagram
ಈ ಚಿಲ್ಲಿ ಏನೆಲ್ಲ ವಸ್ತುಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ನಿಲ್ಲುತ್ತದೆ ನೋಡಿ. ಇದನ್ನು ನೋಡಿದಾಗ ಮಗು ಬೇರೆ ಅಲ್ಲ ನಾಯಿ ಬೇರೆ ಅಲ್ಲ ಎನ್ನಿಸುವುದು ಅಷ್ಟೇ ಸಹಜ. ಬೇಕಿರುವುದು ಏನು? ಸಂಘಜೀವಿಯಾದ ಪ್ರಾಣಿ ಮತ್ತು ಮನುಷ್ಯನಿಗೆ ಶಕ್ತಿಯಾಗುವುದೇ ಪರಸ್ಪರರ ಪ್ರೀತಿ, ಒಡನಾಟ, ಆಸರೆ. ಅಲ್ಲವೆ?
ಅನೇಕ ನೆಟ್ಟಿಗರು ತಮ್ಮ ನಾಯಿಗಳು ಏನೆಲ್ಲ ಸರ್ಕಸ್ ಮಾಡಿ ಗಮನ ಸೆಳೆಯುತ್ತವೆ ಎಂಬುದನ್ನು ಹಂಚಿಕೊಂಡಿದ್ದಾರೆ. ಪ್ರತೀ ಜೀವಿಗೂ ಸಮಯ ಕೊಡುವುದಷ್ಟೇ ಗೊತ್ತಿರುವುದಿಲ್ಲ ತನಗೆ ಬೇಕಾದ ಸಮಯವನ್ನು ಹೇಗೆ ಪಡೆಯುವುದು ಎನ್ನುವುದೂ ಗೊತ್ತಿರುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.
ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:16 pm, Tue, 16 August 22