AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೀಗೊಂದು ಯಶಸ್ವಿ ಆಪರೇಷನ್ ಕಿಟನ್!

kitten stuck in drain : ಬೆಕ್ಕುಪ್ರಿಯರು ಹೇಗೆ ಉತ್ಕಟತೆಯಿಂದ ಮಿಡಿಯುತ್ತಾರೆ ಎನ್ನುವುದರ ಝಲಕ್ ಇಲ್ಲಿದೆ. ಈ ವಿಡಿಯೋ 90,000ಕ್ಕಿಂತಲೂ ಹೆಚ್ಚು ನೆಟ್ಟಿಗರಿಂದ ಮುದ್ದಿನ ಮಳೆಗರೆಸಿಕೊಂಡಿದೆ.

Viral Video: ಹೀಗೊಂದು ಯಶಸ್ವಿ ಆಪರೇಷನ್ ಕಿಟನ್!
ಚರಂಡಿಯಿಂದ ಬೆಕ್ಕನ್ನು ರಕ್ಷಿಸುತ್ತಿರುವ ದೃಶ್ಯ
TV9 Web
| Updated By: ಶ್ರೀದೇವಿ ಕಳಸದ|

Updated on: Aug 16, 2022 | 2:01 PM

Share

Kitten stuck in drain : ಯಾವುದಾದರೂ ಪ್ರಾಣಿ ಕಣ್ಣೆದುರಿಗೇ ನೋವನ್ನನುಭವಿಸುತ್ತಿದ್ದರೆ ಸುಮ್ಮನೆ ಇರಲಾಗುತ್ತದೆಯೇ? ಪ್ರಾಣಿಪ್ರಿಯರಿಗಂತೂ ಸಾಧ್ಯವೇ ಇಲ್ಲ. ಅದರಲ್ಲೂ ಬೆಕ್ಕಿನ ಮರಿ! ಇಲ್ಲೊಂದು ಬೆಕ್ಕಿನ ಮರಿ ಚರಂಡಿಗೆ ಬಿದ್ದಿದೆ. ಸುಮಾರು ಎರಡು ತಿಂಗಳಿರಬೇಕು ಅದಕ್ಕೆ. ದಾರಿಯಲ್ಲಿ ಹೋಗುತ್ತಿರುವ ಹುಡುಗಿಯರ ಗುಂಪಿಗೆ ಈ ವಿಷಯ ಕೇಳಿ ಸುಮ್ಮನಿರಲಾಗಿಲ್ಲ. ಒಂದು ಹುಡುಗಿ ತಕ್ಷಣವೇ ಹಿಂದೆಮುಂದೆ ನೋಡದೆ ರಸ್ತೆ ಮೇಲೆ ಮಲಗಿ, ಚರಂಡಿಯ ಸಂದಿಯಲ್ಲಿ ಕೈ ಒಳತೂರಿ ಮರಿಯನ್ನು ಹೊರತೆಗೆದು ರಕ್ಷಿಸಿದ್ದಾಳೆ. ಅದರ ಹಣೆಗೊಂದು ಮುತ್ತು ಇಟ್ಟು ಸಂತಸವನ್ನೂ ವ್ಯಕ್ತಪಡಿಸಿದ್ದಾಳೆ. ನಂತರ ಹುಡುಗಿಯರ ಗುಂಪು ಹರ್ಷಚಿತ್ತದಿಂದ ಕುಣಿದಿದೆ.  ಎಂಥ ಆಪ್ತ ವಿಡಿಯೋ ಇದಲ್ವಾ? 90 ಸಾವಿರಕ್ಕಿಂತಲೂ ಹೆಚ್ಚು ನೆಟ್ಟಿಗರು ಇದನ್ನು ವೀಕ್ಷಿಸಿದ್ದಾರೆ.

ನೆಟ್ಟಿಗರು ಸಂತಸ ವ್ಯಕ್ತಪಡಿಸಿದ ಪ್ರತಿಕ್ರಿಯಿಸಿದ್ದಾರೆ. ಮುದ್ದುಕ್ಕುವ ವಿಡಿಯೋ ನೋಡಿ ನಿಮಗೇನು ಅನ್ನಿಸಿತು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ