Viral Post: 48 ಮಕ್ಕಳ ಈ ‘ಮಹಾತಂದೆ‘ ಡೇಟಿಂಗ್ ಹೋಗಿಲ್ಲ ಮದುವೆಯೂ ಆಗಿಲ್ಲ

Sperm Donor : ಇತರರ ಕುಟುಂಬದಲ್ಲಿ ಸಂತೋಷ ಅರಳಿಸುತ್ತಿರುವ ಈ ವ್ಯಕ್ತಿಗೆ ಸ್ವಂತಕ್ಕೊಂದು ಸಂಬಂಧ ಹೊಂದುವುದು ಯಾಕೆ ಸಾಧ್ಯವಾಗುತ್ತಿಲ್ಲ? ಹೆಣ್ಣುಮಕ್ಕಳು ಈತನನ್ನು ತಿರಸ್ಕರಿಸುತ್ತಿರುವುದು ಯಾಕೆ?

Viral Post: 48 ಮಕ್ಕಳ ಈ ‘ಮಹಾತಂದೆ‘ ಡೇಟಿಂಗ್ ಹೋಗಿಲ್ಲ ಮದುವೆಯೂ ಆಗಿಲ್ಲ
ವೀರ್ಯದಾನಿ ಕೈಲ್ ಗೋರ್ಡಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 16, 2022 | 1:38 PM

Viral Post : ಈ ವ್ಯಕ್ತಿ 48 ಮಕ್ಕಳಿಗೆ ತಂದೆಯಾಗಿದ್ದಾನಾದರೂ ಒಂಟಿಯಾಗಿಯೇ ಇದ್ದಾನೆ ಮತ್ತು ಇನ್ನೂ ಸಾಕಷ್ಟು ಮಕ್ಕಳಿಗೆ ತಂದೆಯಾಗುವ ಸಾಧ್ಯತೆಯನ್ನೂ ಹೊಂದಿದ್ದಾನೆ. ಹೇಗೆ ಇದೆಲ್ಲ, ಹುಬ್ಬೇರಿಸುತ್ತಿದ್ದೀರಾ? ಈತ ಡೇಟಿಂಗ್​ಗೂ ಹೋಗಿಲ್ಲ ಮದುವೆಯನ್ನೂ ಆಗಿಲ್ಲ. ಆದರೆ ಈತ ಮಾಡುತ್ತಿರುವುದು ಅಪರೂಪದ ಸಹಾಯ. ಕೈಲ್ ಗೊರ್ಡಿ ಎನ್ನುವ ಈ ವ್ಯಕ್ತಿ ಮಗುವಿಗಾಗಿ ಹಂಬಲಿಸುವ ಹೆಣ್ಣುಮಕ್ಕಳಿಗೆ ವೀರ್ಯದಾನ ಮಾಡುತ್ತಾನೆ. ಕೈಲ್ ಈ ಸೇವೆಯ ಕುರಿತು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುತ್ತಿರುತ್ತಾನೆ. ಕುತೂಹಲವೆಂದರೆ, ಅವನು ವೀರ್ಯಬ್ಯಾಂಕ್‌ಗೆ ಹೋಗದೆ, ಅಗತ್ಯ ಇರುವ ಹೆಣ್ಣುಮಕ್ಕಳಿಗೆ ನೇರವಾಗಿಯೇ ವೀರ್ಯದಾನ ಮಾಡುತ್ತಾನೆ. ವೀರ್ಯಬ್ಯಾಂಕ್​ಗಳಲ್ಲಿ ದಾನಿಗಳ ವಿವರ ಗುಟ್ಟಾಗಿ ಇಡುತ್ತಾರಾದ್ದರಿಂದ ಕೆಲ ಹೆಣ್ಣುಮಕ್ಕಳು ಅಜ್ಞಾತ ವ್ಯಕ್ತಿಯ ವೀರ್ಯ ಪಡೆಯಲು ಮನಸ್ಸು ಮಾಡುವುದಿಲ್ಲ. ಅಂಥವರು ಇವನಿಂದ ಸಹಾಯ ನಿರೀಕ್ಷಿಸುತ್ತಾರೆ.

ಅಮೆರಿಕದ ಲಾಸ್ ಎಂಜಲೀಸ್​ನ ಕೈಲ್​ಗೆ 31 ವರ್ಷ. ಇವನಿಂದಾಗಿ ಕಳೆದ 8 ವರ್ಷಗಳಲ್ಲಿ 48 ಹೆಣ್ಣುಮಕ್ಕಳು ತಾಯಂದಿರಾಗಿದ್ದಾರೆ. ಹೀಗೆ ಇತರರ ಕುಟುಂಬವು ಸಂತೋಷದಿಂದ ನೆಲೆಗೊಳ್ಳಲು ಸಹಾಯ ಮಾಡುತ್ತಿರುವ ಈ ವ್ಯಕ್ತಿಗೆ ಸ್ವಂತಕ್ಕೊಂದು ಸಂಬಂಧವನ್ನು ಹೊಂದುವುದು ಅಸಾಧ್ಯವಾಗಿದೆ ಎಂದರೆ ವಿಪರ್ಯಾಸ ಅಲ್ಲವೆ?

‘ಲೆಸ್ಬಿಯನ್ ದಂಪತಿಯ ಕೋರಿಕೆಯ ಮೇರೆಗೆ 8 ವರ್ಷಗಳ ಹಿಂದೆ ವೀರ್ಯ ದಾನವನ್ನು ಪ್ರಾರಂಭಿಸಿದೆ. ನಂತರ ಆನ್​ಲೈನ್​ನಲ್ಲಿ ಅನೇಕರು ವಿನಂತಿಸಿಕೊಂಡಾಗ ಪ್ರತಿಕ್ರಿಯಿಸಿ ಸ್ಪಂದಿಸುತ್ತಾ ಹೋದೆ. ಹೀಗೆ ನನ್ನ ವೀರ್ಯದಾನ ಪ್ರಕ್ರಿಯೆ ಶುರುವಾಯಿತು. ಆದರೆ, ನಾನು 10 ವರ್ಷಗಳಿಂದ ಯಾರೊಂದಿಗೂ ಡೇಟಿಂಗ್ ಮಾಡಿಲ್ಲ. ನಾನು ವೀರ್ಯದಾನಿ ಎಂದು ಹುಡುಗಿಯರಿಗೆ ಪರಿಚಯಿಸಿಕೊಂಡಾಗ ಅವರು ನನ್ನ ಬಗ್ಗೆ ಆಸಕ್ತಿ ಕಳೆದುಕೊಂಡುಬಿಡುತ್ತಾರೆ. ಅಂದರೆ ಇತರೆ ಹೆಣ್ಣುಮಕ್ಕಳಿಗೆ ನಾನು ಸಹಾಯ ಮಾಡುತ್ತಿರುವುದು ಅರ್ಥವಾಗುತ್ತದೆ. ಆದರೆ, ಇಷ್ಟೊಂದು ಮಕ್ಕಳ ಹುಟ್ಟಿಗೆ ಕಾರಣನಾದ ನನ್ನೊಂದಿಗೆ ಹುಡುಗಿಯರು ಸಂಬಂಧವಿಟ್ಟುಕೊಳ್ಳಲು ಇಷ್ಟಪಡುತ್ತಿಲ್ಲ’ ಎನ್ನುವುದು ಕೈಲ್​ ನೋವು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹುಡುಗಿಯರ ದೃಷ್ಟಿಕೋನದಿಂದ ಯೋಚಿಸಿದಾಗ ಅವರವರಿಗೆ ಅವರ ಆಯ್ಕೆಗಳೂ ಇರುತ್ತವೆ ನಿಜ. ಆದರೆ ಸಹಾಯ, ಮಾನವೀಯತೆ, ಸಾಮಾಜಿಕ ಸೇವೆ ಎನ್ನುವುದು ಸ್ವಂತ ಸುಖಕ್ಕೆ ಮುಳುವಾಗುತ್ತದೆ ಎನ್ನುವುದೂ ಈ ವ್ಯಕ್ತಿಯ ಹಿನ್ನೆಲೆಯಿಂದ ನೋಡಿದಾಗ ಸತ್ಯವೇ.  ಅದರಲ್ಲೂ ಈ ವಿಷಯ ಬಹಳ ಸೂಕ್ಷ್ಮ ಮತ್ತು ಸಂಕೀರ್ಣ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:11 pm, Tue, 16 August 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್