Viral Post: ರೆಸ್ಟೋರೆಂಟಿಗೆ ಹೋದ ವ್ಯಕ್ತಿಗೆ ಟೇಬಲ್ ಕೆಳಗೆ ಕಂಡ ಡೈನೋಸಾರ್​ನ ಹೆಜ್ಜೆ ಗುರುತು

Dinosaur Footprint : ಸಿಚುವಾನ್ ಪ್ರಾಂತ್ಯದ ಲೆಶಾನ್ ನಗರದ ರೆಸ್ಟೋರೆಂಟ್‌ನಲ್ಲಿ 100 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಪರೂಪದ ಡೈನೋಸಾರ್ ಹೆಜ್ಜೆಗುರುತು ಪತ್ತೆಯಾಗಿದೆ.

Viral Post: ರೆಸ್ಟೋರೆಂಟಿಗೆ ಹೋದ ವ್ಯಕ್ತಿಗೆ ಟೇಬಲ್ ಕೆಳಗೆ ಕಂಡ ಡೈನೋಸಾರ್​ನ ಹೆಜ್ಜೆ ಗುರುತು
ಡೈನಾಸರ್​ನ ಹೆಜ್ಜೆಗುರುತು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 16, 2022 | 12:27 PM

Dinosaur Footprint : ರೆಸ್ಟೊರೆಂಟ್‌ನಲ್ಲಿ ತನ್ನ ಮೇಜಿನ ಕೆಳಗೆ 100 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಪರೂಪದ ಡೈನೋಸಾರ್ ಹೆಜ್ಜೆಗುರುತನ್ನು ವ್ಯಕ್ತಿಯೊಬ್ಬ ಕಂಡಿದ್ದಾನೆ ಎನ್ನುವ ಪೋಸ್ಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಓವ್ ಹೊಂಗ್ಟಾವೋ ಎಂಬ ಗ್ರಾಹಕ ಸಿಚುವಾನ್ ಪ್ರಾಂತ್ಯದ ಲೆಶಾನ್ ನಗರದ ರೆಸ್ಟೋರೆಂಟ್‌ಗೆ ಹೋಗುತ್ತಾನೆ. ತಾನು ಕುಳಿತ ಟೇಬಲ್​ನಡಿ ಗಮನಿಸುತ್ತಿದ್ಧಾಗ, ಅವನ ಸೂಕ್ಷ್ಮ ಕಣ್ಣಿಗೆ 100 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಪರೂಪದ ಡೈನೋಸಾರ್ ಹೆಜ್ಜೆ ಕಂಡಿದೆ. ಡಾ. ಲಿಡಾ ಝಿಂಗ್ ನೇತೃತ್ವದ ತಜ್ಞರ ತಂಡವು ಈ ರೆಸ್ಟೋರೆಂಟ್​ಗೆ ಭೇಟಿ ನೀಡಿ ಇವು ಸೌರೋಪಾಡ್‌ಗಳ ಹೆಜ್ಜೆಗುರುತುಗಳು ಎಂದು ತ್ರಿಡಿ ಸಹಾಯದಿಂದ ದೃಢಪಡಿಸಿದೆ.

ಹೆಜ್ಜೆಗುರುತುಗಳು ಎರಡು ಜಾತಿಯ ಸೌರೋಪಾಡ್‌ಗಳಿಗೆ ಸೇರಿವೆ. ಬ್ರಾಂಟೊಸಾರಸ್‌ಗಳನ್ನು ಅತಿದೊಡ್ಡ ಭೂನಿವಾಸಿ ಪ್ರಾಣಿ ಎಂದು ಪರಿಗಣಿಸಲಾಗಿದೆ. 145ರಿಂದ 66 ಮಿಲಿಯನ್ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಈ ಪ್ರಾಣಿಗಳು ಎಂಟು ಮೀಟರ್ ಉದ್ದ, ಚಿಕ್ಕ ತಲೆ ಮತ್ತು ಉದ್ದ ಕತ್ತನ್ನು ಹೊಂದಿದ್ದವು ಎನ್ನುವುದು ಸಂಶೋಧನೆಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಚೀನಾ ಯೂನಿವರ್ಸಿಟಿ ಆಫ್ ಜಿಯೋಸೈನ್ಸ್‌ನ ಸಹ ಪ್ರಾಧ್ಯಾಪಕ ಝಿಂಗ್, ‘ಇದು ಅಪರೂಪದ ವಿಷಯ. ಏಕೆಂದರೆ ನಗರಗಳಲ್ಲಿನ ಕಟ್ಟಡ ನಿರ್ಮಾಣ ಕಾರ್ಯಗಳಿಂದಾಗಿ ಪಳೆಯುಳಿಕೆಗಳನ್ನು ಅಧ್ಯಯನ ಮಾಡಲು ತಜ್ಞರಿಗೆ ಕಷ್ಟವಾಗುತ್ತಿದೆ. ಈ ಸುದ್ದಿ ತಿಳಿದು ನಾವು ಸ್ಥಳಕ್ಕೆ ಹೋದಾಗ, ಈ ಪ್ರಾಣಿಯ ಹೆಜ್ಜೆಗುರುತುಗಳು ತುಂಬಾ ಆಳ ಮತ್ತು ಸ್ಪಷ್ಟವಾಗಿ ಗೋಚರಿಸಿದವು’ ಎಂದು ಸಿಎನ್‌ಎನ್‌ಗೆ ಹೇಳಿದ್ದಾರೆ.

ಈ ಬೆಳವಣಿಗೆಯ ನಂತರ ಡೈನೋಸಾರ್ ಹೆಜ್ಜೆಗುರುತುಗಳನ್ನು ಗುರುತು ಮಾಡಿ ಆ ಸ್ಥಳವನ್ನು ಸಂರಕ್ಷಿಸಲು ಬೇಲಿಯನ್ನು ನಿರ್ಮಿಸಲಾಗಿದೆ. ಪ್ರಸ್ತುತ ರೆಸ್ಟೋರೆಂಟ್ ರೂಪುಗೊಳ್ಳುವ ಮೊದಲು ಕೋಳಿ ಫಾರ್ಮ್ ಆಗಿತ್ತು.

ಇನ್ನಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:23 pm, Tue, 16 August 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್