Viral Brain Teaser: ಆಭರಣಗಳ ರಾಶಿಯಲ್ಲಿ ಮುತ್ತೊಂದು ಅಡಗಿದೆ, 30 ಸೆಕೆಂಡಿನಲ್ಲಿ ಕಂಡುಹಿಡಿಯಬಹುದೆ?

Pearl : ಆಭರಣದ ಡಬ್ಬಿಯಲ್ಲಿ ಮೂಗುತಿಯೋ, ಹರಳನ್ನು ಹುಡುಕಬೇಕೆಂದರೆ ನಿಮಿಷಗಟ್ಟಲೆ ಸಮಯ ತೆಗೆದುಕೊಳ್ಳುತ್ತೀರಿ. ಇಲ್ಲಿ ಸುರಿದಿರುವ ಈ ಎಲ್ಲಾ ಹೊಳೆಯುವ ಆಭರಣಗಳ ಮಧ್ಯೆ ಮುತ್ತನ್ನು ಹುಡುಕುವುದು ಕಷ್ಟವೇ. ಪ್ರಯತ್ನಿಸುವಿರಾ?

Viral Brain Teaser: ಆಭರಣಗಳ ರಾಶಿಯಲ್ಲಿ ಮುತ್ತೊಂದು ಅಡಗಿದೆ, 30 ಸೆಕೆಂಡಿನಲ್ಲಿ ಕಂಡುಹಿಡಿಯಬಹುದೆ?
ಈ ಆಭರಣಗಳ ರಾಶಿಯಲ್ಲಿ ಅಡಗಿರುವ ಮುತ್ತನ್ನು ಪತ್ತೆ ಹಚ್ಚಿರಿ

Updated on: Aug 02, 2023 | 10:40 AM

Optical Illusion : ಗಾಳಿ ಸುಂಯನೇ ಬೀಸುತ್ತಿದೆ, ಹದವಾದ ಬಿಸಿಲಿದೆ, ಕೆಲವೆಡೆ ಮಳೆ ಸುರಿಯುತ್ತಿದೆ ಇನ್ನೂ ಕೆಲವೆಡೆ ತಂಪು ವಾತಾವರಣ. ಒಟ್ಟಾರೆ ಬೆಚ್ಚಗೆ ಹೊದ್ದು ಮಲಗಬೇಕು ಎನ್ನಿಸುವಂಥ ವಾತಾವರಣ. ಆದರೆ ಕೆಲಸ ಮಾಡಲೇಬೇಕು. ಅದಕ್ಕಾಗಿ ಮೆದುಳಿಗೊಂದು ಸಣ್ಣ ಚಟುವಟಿಕೆ (Brain Teaser) ಕೊಟ್ಟರೆ ಹೇಗೆ? ಹೊಳೆಯುವ ಆಭರಣಗಳು ಇಲ್ಲಿವೆ. ಇವುಗಳಲ್ಲಿ ಮುತ್ತೊಂದು ಅಡಗಿದೆ. 30 ಸೆಕೆಂಡುಗಳ ಕಾಲಾವಕಾಶದಲ್ಲಿ ಆ ಮುತ್ತೊಂದನ್ನು ಹುಡುಕಬಹುದೆ?

ಸಿಗಬಹುದೇ ಇಲ್ಲಿ ಮುತ್ತು?

ಹುಡುಕಿದಿರಾ? ತುಸು ಕಷ್ಟವೇ. ಆಭರಣಗಳ ಡಬ್ಬಿಯಿಂದ ಏನಾದರೂ ಸಣ್ಣ ಮತ್ತು, ಹರಳು ಕಳೆದಿದ್ದರೆ ಅದನ್ನು ಹುಡುಕಲು ನಿಮಿಷಗಳೇ ಬೇಕಾಗಬಹುದು. ಹೀಗಿರುವಾಗ ಇಷ್ಟೊಂದು ಆಭರಣಗಳ ರಾಶಿಯಲ್ಲಿ ನೀವು ಸಣ್ಣ ಮುತ್ತು ಹುಡುಕಲು ಕಷ್ಟಪಡಬೇಕಾಗುತ್ತದೆ. ಹಾಗಾಗಿ ನಿಮಗೆ 30 ಸೆಕೆಂಡುಗಳು ಸಾಕಾಗಲಾರವು ಅಲ್ಲವೆ?

ಇದನ್ನೂ ಓದಿ : Viral Video: ತೋಳದಂತೆ ಕಾಣಿಸಿಕೊಳ್ಳಲು ರೂ 20 ಲಕ್ಷ ಖರ್ಚು ಮಾಡಿದ ವ್ಯಕ್ತಿಯ ವಿಡಿಯೋ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ವಜ್ರದೋಲೆಗಳು, ಬಂಗಾರದ ನೆಕ್ಲೇಸ್​​ಗಳು, ವಜ್ರದ ಉಂಗುರಗಳು, ಬಳೆಗಳು, ಪದಕಗಳು ಹೀಗೆ ಏನೆಲ್ಲಾ ಹೊಳೆಯುವ ಆಭರಣಗಳ ಮಧ್ಯೆ ಪುಟ್ಟದಾದ ಮುತ್ತು ಕಂಡೀತಾದರೂ ಹೇಗೆ? ಆಗಲಿ ನೀವೀಗ ಮತ್ತೆ 30 ಸೆಕೆಂಡುಗಳನ್ನು ತೆಗೆದುಕೊಂಡು ಆ ಮುತ್ತನ್ನು ಹುಡುಕಲು ಶುರು ಮಾಡಿ. ಒಂದೇ ಸಲಕ್ಕೆ ಹುಡುಕಬೇಕು ಎನ್ನುವ ನಿಯಮವೇನೂ ಇಲ್ಲ. ಅಕಸ್ಮಾತ್​ ನಿಮಗೆ 30 ಸೆಕೆಂಡುಗಳು ಕಟ್ಟಿಹಾಕಿದಂತೆ ಮಾಡುತ್ತಿವೆ ಎಂದಾದರೆ ಸಮಯದ ಮಿತಿಯನ್ನು ಗಮನಕ್ಕೇ ತೆಗೆದುಕೊಳ್ಳಬೇಡಿ. ಆರಾಮಾಗಿ ಹುಡುಕಿ.

ಇದನ್ನೂ ಓದಿ : Viral Video: ಈ ಎಲೆಕ್ಟ್ರಿಕ್ ಬೈಕ್​ನ ಹಾರ್ನ್​ ಕೇಳಿ ನಗುತ್ತೀರೋ ಅಥವಾ…

ಈ ಬ್ರೇನ್​ಟೀಸರ್​ ಅನ್ನು ಚಿಶೋಲ್ಮ್​ ಹಂಟರ್​ ಎನ್ನುವವರು ಸೃಷ್ಟಿಸಿದ್ದಾರೆ. ಹದ್ದಿನ ಕಣ್ಣುಳ್ಳವರು ನೀವಾಗಿದ್ದರೆ ಮಾತ್ರ ಮುತ್ತನ್ನು ಕಂಡುಹಿಡಿಯಹುದು ಎನ್ನಿಸುತ್ತದೆ. ನೀವು ಹುಡುಕಾಟವನ್ನು ಮುಂದುವರಿಸಿ, ಈ ಆಟವನ್ನಂತೂ ಬಿಟ್ಟುಕೊಡಬೇಡಿ. ಫಲಿತಾಂಶಕ್ಕಿಂತ ಪ್ರಯತ್ನದಲ್ಲಿ ಮನಸ್ಸು ಹದಗೊಳ್ಳುತ್ತದೆ. ಮುತ್ತು ಸಿಗದಿದ್ದರೆ ನಿರಾಶೆ ಬೇಡ. ಫಲಿತಾಂಶ ಸಿಕ್ಕರೆ ಆಟವೇ ಮುಗಿದುಹೋಗುತ್ತದೆ. ಆದರೆ ಪ್ರಯತ್ನ ನಿಮ್ಮೊಳಗಿನ ಸಾಮರ್ಥ್ಯವನ್ನು ನಿಮಗೇ ಪರಿಚಯಿಸುತ್ತದೆ. ಒಂದು ಸುಳಿವನ್ನು ಕೊಡಬಹುದು, ಆಭರಣಗಳ ಹಿಂದಿರುವ ಪ್ಲೇನ್​ ಜಾಗದಲ್ಲಿ ಮುತ್ತು ಅಡಗಿದೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

 

 

Published On - 10:38 am, Wed, 2 August 23