Brain Teaser: ನಾನು ಬದುಕಿಲ್ಲ, ಆದ್ರೂ ಬೆಳಿತೀನಿ ನಾನ್ಯಾರು; ಈ ಒಗಟಿನ ಉತ್ತರ ಹೇಳಿದ್ರೆ ನೀವು ಜಾಣರು

ಮೆದುಳಿಗೆ ಕೆಲಸ ನೀಡುವಂತಹ ಒಗಟಿನ ಆಟಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ನೀವು ಬುದ್ಧಿವಂತರು ಎಂದು ಪರೀಕ್ಷಿಸುವ ಬ್ರೈನ್ ಟೀಸರ್ ಒಗಟಿನ ಸಾಲೊಂದು ವೈರಲ್ ಆಗಿದೆ. ಆದರೆ ಈ ಒಗಟಿನ ಸಾಲು ಸುಲಭವಾಗಿ ಕಂಡರೂ ನೀವು ಇದರ ಉತ್ತರ ಹುಡುಕಬೇಕು. ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.

Brain Teaser: ನಾನು ಬದುಕಿಲ್ಲ, ಆದ್ರೂ ಬೆಳಿತೀನಿ ನಾನ್ಯಾರು; ಈ ಒಗಟಿನ ಉತ್ತರ ಹೇಳಿದ್ರೆ ನೀವು ಜಾಣರು
ಬ್ರೈನ್‌ ಟೀಸರ್‌
Image Credit source: Instagram

Updated on: Nov 07, 2025 | 6:24 PM

ಇತ್ತೀಚೆಗಿನ ದಿನಗಳಲ್ಲಿ ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿದೆ. ಈ ಬ್ರೈನ್‌ ಟೀಸರ್‌ಗಳು (brain teaser) ಕೇವಲ ಮೆದುಳಿಗೆ ಮಾತ್ರವಲ್ಲದೇ ಬುದ್ಧಿವಂತಿಕೆಗೂ ಸವಾಲೆಸುಗುತ್ತದೆ. ಕೆಲ ಪ್ರಶ್ನೆಗಳು ಸುಲಭವಾಗಿ ಕಂಡರೂ ಕೂಡ ಉತ್ತರವು ಅಷ್ಟೇ ಕಷ್ಟದಾಯಕವಾಗಿರುತ್ತದೆ. ಮೈಂಡ್ ಶಾರ್ಪ್ ಇದ್ದವರು ಮಾತ್ರ ಈ ಒಗಟು ಬಿಡಿಸಲು ಸಾಧ್ಯ. ನಾನು ಬದುಕಿಲ್ಲ, ಆದ್ರೂ ಬೆಳಿತೀನಿ ನಾನು ಯಾರೆಂದು ಹೇಳಬಲ್ಲಿರಾ ಎನ್ನುವ ಒಗಟಿನ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಿ.

ಒಗಟಿನ ಪ್ರಶ್ನೆ ಹೀಗಿದೆ

ಲವನ್ ಭಾಸ್ಕರನ್ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬ್ರೈನ್ ಟೀಸರ್ ಒಗಟನ್ನು ಹಂಚಿಕೊಂಡಿದ್ದಾರೆ. ಇಲ್ಲಿ ʼನಾನು ಜೀವಂತವಾಗಿಲ್ಲ, ಆದರೂ ನಾನು ಬೆಳೆಯುತ್ತೇನೆ. ನನಗೆ ಶ್ವಾಸಕೋಶವಿಲ್ಲ ಆದರೂ ನನಗೆ ಗಾಳಿ ಬೇಕು. ನನಗೆ ಬಾಯಿ ಇಲ್ಲ, ಆದರೆ ನೀರು ನನ್ನನ್ನು ಕೊಲ್ಲುತ್ತದೆ, ಹಾಗಾದ್ರೆ ನಾನ್ಯಾರು? ಎಂಬ ಪ್ರಶ್ನೆಯನ್ನು ನೋಡಬಹುದು.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ: ನಿಮ್ಮ ಬುದ್ಧಿವಂತಿಕೆಗೆ ಸವಾಲು; ಪ್ರತಿ ಸಾಲಿನ ಉತ್ತರ 15 ಬರುವಂತೆ ಈ ಮ್ಯಾಜಿಕ್ ಸ್ಕ್ವೇರ್ ಬಿಡಿಸಿದ್ರೆ ನೀವು ಜಾಣರು ಎಂದರ್ಥ

ಒಗಟು ಬಿಡಿಸಲು ಸಾಧ್ಯವಾಯಿತೇ?

ಎಷ್ಟೇ ತಲೆ ಕೆಡಿಸಿಕೊಂಡರೂ ಈ ಒಗಟಿನ ಉತ್ತರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲವೇ. ಈ ಪೋಸ್ಟ್ ನೋಡಿದ ಬಳಕೆದಾರಿಗೂ ಇದೇ ರೀತಿ ಮೆದುಳಿಗೆ ಹುಳಬಿಟ್ಟಿದೆ. ಕೆಲವರು ಈ ಒಗಟಿಗೆ ಬೆಂಕಿ ಎಂದು ಉತ್ತರಿಸಿದ್ದಾರೆ. ನೀವು ಈ ಒಗಟಿನ ಪ್ರಶ್ನೆಯನ್ನು ಓದಿ ಸರಿಯಾದ ಉತ್ತರ ಹೇಳಲು ಪ್ರಯತ್ನಿಸಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ