ಜ್ಯುವೆಲರಿ ಶಾಪ್ ಮಾಲೀಕರಿಗೆ ಮೆಣಸಿನ ಪುಡಿ ಎರಚಿ ದರೋಡೆ ಮಾಡಲೆತ್ನಿಸಿದ ಮಹಿಳೆಗೆ 17 ಬಾರಿ ಕಪಾಳಮೋಕ್ಷ!
ಆಭರಣಗಳ ವ್ಯಾಪಾರಿಯ ಮುಖಕ್ಕೆ ಮೆಣಸಿನ ಪುಡಿ ಎರಚುವ ಮೂಲಕ ಮಹಿಳೆಯೊಬ್ಬರು ದರೋಡೆಗೆ ಯತ್ನಿಸಿದ್ದರು. ಇದರಿಂದ ಹೆದರದ ಆ ಸಿಬ್ಬಂದಿ ಆ ಮಹಿಳೆಯ ಕೈ ಹಿಡಿದು 17 ಬಾರಿ ಕೆನ್ನೆಗೆ ಹೊಡೆದಿದ್ದಾರೆ. ಮಹಿಳೆಯೊಬ್ಬರು ಜ್ಯುವೆಲರಿ ಶಾಪ್ ಮಾಲೀಕರ ಮುಖಕ್ಕೆ ಮೆಣಸಿನ ಪುಡಿ ಎರಚುವ ಮೂಲಕ ದರೋಡೆ ಮಾಡಲು ಯತ್ನಿಸಿದ್ದಾರೆ. ಆದರೆ ಅವರು ದಾಳಿಯಿಂದ ತಪ್ಪಿಸಿಕೊಂಡು ಆ ಮಹಿಳೆಗೆ 17 ಬಾರಿ ಕಪಾಳಮೋಕ್ಷ ಮಾಡಿದ್ದಾರೆ.

ಅಹಮದಾಬಾದ್, ನವೆಂಬರ್ 7: ಗುಜರಾತ್‌ನ ಅಹಮದಾಬಾದ್‌ನಲ್ಲಿ ಜ್ಯುವೆಲರಿ ಶಾಪ್ಗೆ ನುಗ್ಗಿ ದರೋಡೆ (Robbery) ಮಾಡಲು ಯತ್ನಿಸಿದ ಮಹಿಳೆಯೊಬ್ಬರು ಮಾಲೀಕರ ಕಣ್ಣಿಗೆ ಮೆಣಸಿನ ಪುಡಿ ಎರಚುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಂಗಡಿಯ ಮಾಲೀಕರು ತಕ್ಷಣ ಅವರನ್ನು ಕೆಳಕ್ಕೆ ತಳ್ಳಿ 17 ಬಾರಿ ಆಕೆಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಆ ಮಹಿಳೆ ಆಘಾತಕ್ಕೊಳಗಾದರು.
ಈ ಜ್ಯುವೆಲರಿ ಶಾಪ್ ಅಹಮದಾಬಾದ್‌ನ ರಾಣಿಪ್ ಪ್ರದೇಶದಲ್ಲಿದೆ. ತನ್ನ ಮುಖವನ್ನು ದುಪಟ್ಟಾದಿಂದ ಮರೆಮಾಡಿಕೊಂಡಿದ್ದ ಮಹಿಳೆ ಅಂಗಡಿಯೊಳಗೆ ಪ್ರವೇಶಿಸಿ ಮಾಲೀಕರ ಮುಂದೆ ಕುಳಿತು, ಗ್ರಾಹಕರಂತೆ ನಟಿಸಿದರು. ಈ ವೇಳೆ ಅವರು ಅಂಗಡಿಯನ್ನು ದರೋಡೆ ಮಾಡಲು ಯತ್ನಿಸಿದರು. ಈ ವೇಳೆ ಆಕೆ ಇದ್ದಕ್ಕಿದ್ದಂತೆ ಮಾಲೀಕರ ಮುಖದ ಮೇಲೆ ಮೆಣಸಿನ ಪುಡಿ ಎಸೆದಿದ್ದಾರೆ.
In Ahmedabad, a woman tried to rob a jewelry store owner by throwing red chili powder into his eyes.
Even after the chili got into his eyes, the owner stood strong.
He slapped her 18 times. pic.twitter.com/kMYAMf6Gmk
— ︎ ︎venom (@venom1s) November 7, 2025
ಇದನ್ನೂ ಓದಿ: ಮಗಳ ಪ್ರಾಣ ಕಾಪಾಡಿದ ಅಪ್ಪ: ತಂದೆ-ಮಗಳ ಹೃದಯಸ್ಪರ್ಶಿ ವಿಡಿಯೋ ವೈರಲ್
ಈ ದಾಳಿಯಿಂದ ತಕ್ಷಣ ಚೇತರಿಸಿಕೊಂಡ ಮಾಲೀಕರು ಆ ಮಹಿಳೆಯ ಕೈಗಳನ್ನು ಹಿಡಿದುಕೊಂಡು ಅವರಿಗೆ ಕಪಾಳಮೋಕ್ಷ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಆ ಮಹಿಳೆಯನ್ನು ಅಂಗಡಿಯಿಂದ ಎಳೆದು ಹೊರಗೆ ಹಾಕಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




