ಮದುವೆ ಅಂದಾಕ್ಷಣ ಮೋಜು, ಮಸ್ತಿ, ಜೋಕ್ಸ್ ಜತೆಗೆ ಎಲ್ಲರ ಮುಖದಲ್ಲಿ ಸಂತೋಷ. ಇದಕ್ಕೆ ಉತ್ತಮ ಉದಾಹರಣೆಯೇ ಇದೀಗ ವೈರಲ್ ಆದ ಮದುವೆ ಮನೆಯ ಸಂಭ್ರಮ. ದಿ ವೆಡ್ಡಿಂಗ್ ವರ್ಲ್ಡ್ ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ವಧು ವರರು ನಗುತ್ತಿರುವ ಕ್ಯೂಟ್ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಇಬ್ಬರ ಮುಖದಲ್ಲಿನ ಆ ಸಂತೋಷವು ಎಲ್ಲರ ಮುಖದಲ್ಲೊಮ್ಮೆ ನಗು ತರಿಸುತ್ತದೆ.
ವಧು ವರರು ಅವರವರ ಬಾಳೆಯಲ್ಲಿ ಬಡಿಸಿರುವ ಊಟ ಮಾಡುತ್ತಿದ್ದಾರೆ. ಇಬ್ಬರ ಮುಖದಲ್ಲಿಯೂ ಸಂತೋಷವಿದೆ. ಕ್ಯಾಮರಾ ನೋಡುತ್ತ ಖುಷಿಯಿಂದ ಊಟ ಸವಿಯುತ್ತಿದ್ದಾರೆ. ಒಂದು ಕ್ಷಣ ವಧು ಬೇರೊಂದು ಕಡೆ ನೋಡುತ್ತಿರುವಾಗ ವರ ವಧುವಿನ ಊಟದ ಬಾಳೆಯಿಂದ ಹಪ್ಪಳವನ್ನು ಕದ್ದಿದ್ದಾನೆ. ಕ್ಯಾಮರಾದಲ್ಲಿ ಸೆರೆಯಾದ ದೃಶ್ಯದ ಕ್ಯೂಟ್ ವಿಡಿಯೋ ಇದೀಗ ವೈರಲ್ ಆಗಿದೆ.
ವಿಡಿಯೋದಲ್ಲಿ ಗಮನಿಸಿದಂತೆ ವಧು ವರರು ಸುಂದರವಾಗಿ ಅಲಂಕಾರಗೊಂಡಿದ್ದಾರೆ. ಬಾಳೆಯಲ್ಲಿ ಬಡಿಸಿದ ಊಟವನ್ನು ಖುಷಿಯಿಂದ ನಗುತ್ತಾ ತಿನ್ನುತ್ತಿದ್ದಾರೆ. ನಗುತ್ತಾ ವಧು ಬೇರೊಂದು ಕಡೆ ನೋಡುತ್ತಿರುವಾಗ ವಧುವಿನ ಬಾಳೆಯಲ್ಲಿದ್ದ ಹಪ್ಪಳವನ್ನು ತೆಗೆದುಕೊಂಡು ತನ್ನ ಬಾಳೆಯಲ್ಲಿಟ್ಟುಕೊಂಡಿದ್ದಾನೆ ವರ! ತಮಾಷೆಯ ದೃಶ್ಯ ನೋಡುತ್ತಾ ನೆಟ್ಟಿಗರು ಕ್ಯೂಟ್ ಎಂದು ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.
ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು ಸಾವಿರಕ್ಕಿಂತಲೂ ಹೆಚ್ಚಿನ ಲೈಕ್ಸ್ಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡುತ್ತಾ ಕಾಮೆಂಟ್ಸ್ ವಿಭಾಗದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲವರು ನಗುವಿನ ಎಮೋಜಿಗಳನ್ನು ಕಳುಹಿಸಿದ್ದಾರೆ.
ಇದನ್ನೂ ಓದಿ:
Viral Video: ಬಾಯಾರಿಕೆ ನೀಗಿಸಿಕೊಳ್ಳಲು ಬುದ್ಧಿವಂತಿಕೆ ಉಪಯೋಗಿಸಿದ ಆನೆ; ವೈರಲ್ ಆಯ್ತು ವಿಡಿಯೋ
Viral Video: ಒಳ ಉಡುಪಿನಲ್ಲಿ ರೈಲಿನೊಳಗೆ ಓಡಾಡಿದ ಶಾಸಕನ ವಿಡಿಯೋ ವೈರಲ್; ಹೊಟ್ಟೆ ಕೆಟ್ಟಿತ್ತು ಎಂದ ಗೋಪಾಲ್ ಮಂಡಲ್
(Bride and groom enjoying her wedding video goes viral in social media )