Viral Video: ತನ್ನ ಮದುವೆಗೆ ಕಾಫಿ ಕುಡೀತಾ, ಕಾರು ಓಡಿಸಿಕೊಂಡು ಬಂದ ವಧು; ಆಶ್ಚರ್ಯಗೊಂಡ ನೆಟ್ಟಿಗರು

ಸುಂದರವಾದ ಲೆಹೆಂಗಾ ತೊಟ್ಟು ರೆಡಿಯಾದ ವಧು, ತನ್ನ ಮದುವೆಗೆ ತಾನೇ ಕಾರು ಓಡಿಸಿಕೊಂಡು ಫೆವರೆಟ್​ ಕಾಫಿ ಕುಡೀತಾ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

Viral Video: ತನ್ನ ಮದುವೆಗೆ ಕಾಫಿ ಕುಡೀತಾ, ಕಾರು ಓಡಿಸಿಕೊಂಡು ಬಂದ ವಧು; ಆಶ್ಚರ್ಯಗೊಂಡ ನೆಟ್ಟಿಗರು
ತನ್ನ ಮದುವೆಗೆ ಕಾಫಿ ಕುಡೀತಾ, ಕಾರು ಓಡಿಸಿಕೊಂಡು ಬಂದ ವಧು
Edited By:

Updated on: Aug 20, 2021 | 11:57 AM

ಮದುವೆ ಅಂದಾಕ್ಷಣ ಹೊಸ ವಸ್ತ್ರ, ಎಲ್ಲೆಲ್ಲೂ ಸಂಭ್ರಮ, ಅಲಂಕಾರಗೊಂಡ ಕಾರುಗಳು, ಸುಂದರವಾಗಿ ರೆಡಿಯಾದ ವಧು- ವರರನ್ನು ನೋಡುವುದೇ ಅತಿಥಿಗಳಿಗೆ ಸಂತಸ. ಈಗೆಲ್ಲಾ ಪ್ರತೀ ಮದುವೆಗಳಲ್ಲಿ ಏನಾದರೂ ಒಂದು ಅನುಭವ ಆಗುತ್ತಲೇ ಇರುತ್ತದೆ. ಈ ಹಿಂದೆ ಕುದುರೆ ಹತ್ತಿದ ವರ ಮದುವೆ ಮನೆಗೆ ಬಂದು ತಲುಪಿದ ವಿಡಿಯೋ ಒಂದು ಫುಲ್ ವೈರಲ್ ಆಗಿತ್ತು. ಇದೀಗ ಸುದ್ದಿಯಲ್ಲಿರುವ ವಿಷಯ ಕೂಡಾ ಅಂಥದ್ದೇ! ಸುಂದರವಾದ ಲೆಹೆಂಗಾ ತೊಟ್ಟು ರೆಡಿಯಾದ ವಧು, ತನ್ನ ಮದುವೆಗೆ ತಾನೇ ಕಾರು ಓಡಿಸಿಕೊಂಡು ಫೆವರೆಟ್​ ಕಾಫಿ ಕುಡೀತಾ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

ವಧು ಕಾರು ಡ್ರೈವಿಂಗ್​ ಮಾಡುವಾಗ ಕಾಫಿ ಕುಡಿಯುತ್ತಿದ್ದಾಳೆ. ಕಾಫಿ ತುಂಬಾ ಸೂಪರ್ ಆಗಿದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾಳೆ. ಒಂದೇ ಕೈಯಲ್ಲಿ ಕಾರಿನ ಹ್ಯಾಂಡಲ್​ ಹಿಡಿದುಕೊಂಡಿದ್ದಾಳೆ. ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋ ಇದೀಗ ಸಕತ್ ವೈರಲ್ ಆಗಿದೆ.

ವಧು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ನಿಮ್ಮ ಫೆವರೆಟ್​ ಕಾಫಿ ಯಾವುದು? ಎಂಬ ಶೀರ್ಷಿಕೆಯನ್ನೂ ಸಹ ನೀಡಲಾಗಿದೆ. ಸಾಮಾಜಿಕ ವೇದಿಕೆಗಳಲ್ಲಿ ವಿಡಿಯೋ ಫುಲ್ ಹರಿದಾಡುತ್ತಿದೆ. ಇನ್​ಸ್ಟಾಗ್ರಾಂನಲ್ಲಿ ಮೊದಲು ವಿಡಿಯೋ ಹಂಚಿಕೊಂಡ ಬಳಿಕ ಇನ್ನಿತರ ಸಾಮಾಜಿಕ ವೇದಿಕೆಯಲ್ಲಿಯೂ ಹಂಚಿಕೊಳ್ಳಲಾಗುತ್ತಿದೆ.

ವಿಡಿಯೋ ಚಿಕ್ಕದಾಗಿದ್ದರೂ ಸಹ ನೆಟ್ಟಿಗರ ಮನ ಗೆದ್ದಿದೆ. ವಧು ತಾನು ಕುಡಿಯುತ್ತಿರುವ ಕಾಫಿಯನ್ನು ಆನಂದಿಸುತ್ತಿದ್ದಾಳೆ. ವಿಡಿಯೋ 25 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. 322 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಇದನ್ನೂ ಓದಿ:

Viral News: ತಾಳಿ ಕಟ್ಟುವ ಹೊತ್ತಲ್ಲಿ ಮದುವೆ ಬೇಡವೆಂದ ವಧು; ಕಾರಣ ಕೇಳಿದ್ರೆ ಶಾಕ್ ಆಗ್ತೀರ

Viral Video: ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು! ಇಬ್ಬರ ನವಿರಾದ ಕ್ಷಣದ ವಿಡಿಯೋ ವೈರಲ್

(Bride Drinking Coffee and Driving An car her wedding video goes viral)