ಮದುವೆ ಅಂದಾಕ್ಷಣ ಮೋಜು, ಮಸ್ತಿ ಎಲ್ಲವೂ ಇದೆ. ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಸಂತೋಷದಿಂದ ವಿವಾಹ ಮಹೋತ್ಸವವನ್ನು(Wedding) ಆಚರಿಸಲಾಗುತ್ತದೆ. ವಧು(Bride) ಮತ್ತು ವರನಿಗೆ(Groom) ಕಾಲೆಳೆಯುವುದರ ಜತೆಗೆ ಹಾರ ಹಾಕುವ ಸಂದರ್ಭದಲ್ಲಿಯೂ ಕಾಡಿಸುವ ಅದೆಷ್ಟೋ ವಿಡಿಯೋಗಳನ್ನು ನೋಡಿದ್ದೇವೆ. ಅಂಥಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದೆ. ವಿಡಿಯೋ ನೋಡುತ್ತಾ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.
ವಿಡಿಯೋವನ್ನು ಉತ್ತರ ಪ್ರದೇಶದ ಪರ್ತಕರ್ತ ಮನೀಶ್ ಮಿಶ್ರಾ ಹಂಚಿಕೊಂಡಿದ್ದಾರೆ. ವಧು ವರಮಾಲಾ ಕಾರ್ಯಕ್ರಮದಲ್ಲಿ ಕಬಡ್ಡಿ ಆಟವನ್ನೇ ಆಡುತ್ತಿದ್ದಾಳೆ. ವಧುವು ಹಾರ ಹಾಕುವಾಗ ವರ ತಲೆತಗ್ಗಿಸಿ ಹಾರ ಹಾಕಿಸಿಕೊಳ್ಳುತ್ತಾನೆ. ಬಳಿಕ ವರ ಹಾರ ಹಾಕಲು ಬಂದಾಗ ವಧು ತಪ್ಪಿಸಿಕೊಂಡು ಓಡುತ್ತಿದ್ದಾಳೆ. ವಿಡೀಯೋ ಇದೀಗ ಭಾರೀ ಸುದ್ದಿಯಲ್ಲಿದೆ.
ಮದುವೆ ಸಮಾರಂಭದಲ್ಲಿ ನಡೆಯುವ ಘಟನೆಗಳು ಮನಸ್ಸಿಗೆ ಹೆಚ್ಚು ಇಷ್ಟವಾಗುತ್ತದೆ. ಅದರಲ್ಲಿಯೂ ನಗು ತರಿಸುವ ಎಲ್ಲಾ ವಿಡಿಯೋಗಳು ಬಹುಬೇಗ ಮನಸ್ಸಿಗೆ ಇಷ್ಟವಾಗುತ್ತವೆ. ಅಂಥಹುದೇ ಒಂದು ವಿಡಿಯೋ ಇದಾಗಿದ್ದು ನೆಟ್ಟಿಗರು ನಗುತ್ತಾ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ವಧು ವರನಿಂದ ಹಾರ ಹಾಕಿಸಿಕೊಳ್ಳಲು ಸತಾಯಿಸುತ್ತಿದ್ದಾಳೆ. ಬಹುಷಃ ವರನೊಂದಿಗೆ ಕಬಡ್ಡಿ ಆಟ ಆಡುವ ಆಸೆ ಇತ್ತೇನೋ.. ಆದರೆ ವಧುವಿಗೆ ಇದು ಮದುವೆಯ ಸಮಾರಂಭವಾಗಿತ್ತು. ವಧುವಿಗೆ ಹಾರ ಹಾಕಲು ವರನಿಗೆ ಸಹಾಯ ಮಾಡಿದ ಎಲ್ಲಾ ಸ್ನೇಹತರಿಗೆ ಧನ್ಯವಾದಗಳು ಎಂದು ಬರೆಯುವ ಮೂಲಕ ವಿಡಿಯೋ ಹಂಚಿಕೊಳ್ಳಲಾಗಿದೆ.
ಹಾರ ಹಾಕುವ ಸಮಯದಲ್ಲಿ ನಡೆದ ತಮಾಷೆಯ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲಾಗಿದೆ. ವರನು ಹಾರ ಹಾಕಲು ಹೋದಂತೆಲ್ಲಾ ವಧು ಹಿಂದೆ .. ಹಿಂದೆ .. ಸರಿಯುತ್ತಿದ್ದಾಳೆ. ಇನ್ನೇನು ಹಾರ ಹಾಕುತ್ತಾನೆ ಅನ್ನುವಷ್ಟರಲ್ಲಿ ತಪ್ಪಿಸಿಕೊಳ್ಳುತ್ತಾಳೆ. ಇಡೀ ವಿವಾಹದ ವೇದಿಕೆಯ ತುಂಬಾ ಓಡಾಡಿದ್ದಾಳೆ. ವಿಡಿಯೋವನ್ನು ನೆಟ್ಟಿಗರು ಇಷ್ಟಪಟ್ಟಿದ್ದು ನಗುವ ಎಮೋಜಿ ಕಳುಹಿಸುವ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.
यूं तो यह जयमाल का दृश्य है, पर दुल्हन की हरकत देखकर लगता है कि वो कबड्डी खेलने के इरादे से आई थी।
दूल्हे के दोस्तों का धन्यवाद जिन्होंने जयमाल सम्पन्न करवाने में मदद की। @navalkant @sengarlive @candidbhanot @PANKAJPARASHAR_ @nadeemNBT pic.twitter.com/cDzH0o8rQx— Manish Mishra (@mmanishmishra) July 23, 2021
ಇದನ್ನೂ ಓದಿ:
(Bride play kabaddi in wedding hall video goes viral)
Published On - 1:42 pm, Mon, 26 July 21