Viral Video: ರೂಮ್ ತುಂಬಾ ಹೂವಿನ ಅಲಂಕಾರ ನೋಡಿ ಎಲ್ಲಿ ಮಲಗೋದು? ಎಂದ ವಧು; ವರನ ರಿಯಾಕ್ಷನ್ ವೈರಲ್

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿವಾಹದಲ್ಲಿ ನಡೆಯುವ ತಮಾಷೆಯ ದೃಶ್ಯಗಳು ಭಾರೀ ಸುದ್ದಿ ಮಾಡುತ್ತಿವೆ. ಕೆಲವು ತಮಾಷೆಯ ವಿಡಿಯೋಗಳು ಬಹುಬೇಗ ಜನರ ಮನಗೆಲ್ಲುತ್ತದೆ. ಇದೀಗ ವಧು, ಮಲಗುವ ಕೋಣೆಗೆ ಪ್ರವೇಶಿಸುತ್ತಿದ್ದಂತೆಯೇ ಕೇಳಿರುವ ಮಾತು ವೈರಲ್ ಆಗಿದೆ.

Viral Video: ರೂಮ್ ತುಂಬಾ ಹೂವಿನ ಅಲಂಕಾರ ನೋಡಿ ಎಲ್ಲಿ ಮಲಗೋದು? ಎಂದ ವಧು; ವರನ ರಿಯಾಕ್ಷನ್ ವೈರಲ್
ರೂಮ್ ತುಂಬಾ ಹೂವಿನ ಅಲಂಕಾರ ನೋಡಿ ಎಲ್ಲಿ ಮಲಗೋದು? ಎಂದ ವಧು
Edited By:

Updated on: Jul 30, 2021 | 1:24 PM

ಮದುವೆ ಅಂದಾಕ್ಷಣ ಮೋಜು, ಮಸ್ತಿಯ ಜತೆಗೆ ಮನೆತುಂಬ ಅಲಂಕಾರಗೊಳಿಸುವುದು ಇದ್ದೇ ಇರುತ್ತದೆ. ವಿವಿಧ ವಿನ್ಯಾಸದೊಂದಿಗೆ ಮನೆ ಆಕರ್ಷಕವಾಗಿ ಕಾಣುವಂತೆ ಮಾಡಲಾಗುತ್ತದೆ. ಹೂವಿನಿಂದ ಅಲಂಕಾರಗೊಂಡ ಮಂಟಪ, ಅಂದ – ಚಂದದ ಉಡುಗೆ ತೊಟ್ಟ ವಧು-ವರ, ಮುಖದಲ್ಲಿ ನಗು, ಒಟ್ಟಿನಲ್ಲಿ ಮದುವೆ ಮನೆ ಅಂದಾಕ್ಷಣ ಸಂತೋಷವೇ ತುಂಬಿರುತ್ತದೆ. ಜತೆಗೆ ವಧು-ವರನ ಮಲಗುವ ಕೋಣೆಯನ್ನು ಅಂಕಾರಗೊಳಿಸುವುದು ಇತ್ತೀಚೆಗೆ ರೂಢಿಯಲ್ಲಿ ಬಂದುಬಿಟ್ಟಿದೆ. ಹಾಸಿಗೆಯ ತುಂಬಾ ಹೂವಿನ ಅಲಂಕಾರಗೊಳಿಸಿ, ವಧು ಕೋಣೆಗೆ ಬರುತ್ತಿದ್ದಂತೆಯೇ ಸುಂದರ ಕೋಣೆಯನ್ನು ನೋಡಿ ಅವಳ ಮುಖದಲ್ಲಿ ಸಂತೋಷ ತರಿಸಲು ವರ ಎಷ್ಟೆಲ್ಲಾ ಪ್ರಯತ್ನ ಮಾಡಿ ಕೋಣೆಯನ್ನು ಸಿದ್ಧಗೊಳಿಸಿರುತ್ತಾನೆ. ವಧು, ವರನಿಗೆ ಕೇಳಿರುವ ಮಾತು ಇದೀಗ ಫುಲ್ ವೈರಲ್ ಆಗಿದೆ. ವರನ ರಿಯಾಕ್ಷನ್ ನೋಡಿದ ನೆಟ್ಟಿಗರು ತಮಾಷೆಯ ಎಮೋಜಿಗಳನ್ನು ಕಳುಹಿಸುತ್ತಾ ನಗುತ್ತಿದ್ದಾರೆ. ಹಾಗಿರುವಾಗ ವಧು ಎಂಥಹ ಪ್ರಶ್ನೆ ಕೇಳಿರಬೇಕು? ಎಂಬ ಕುತೂಹಲ ಮೂಡಿರಬೇಕಲ್ವೇ? ವಿಡಿಯೋ ಇದೆ ನೀವೇ ನೋಡಿ …

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿವಾಹದಲ್ಲಿ ನಡೆಯುವ ತಮಾಷೆಯ ದೃಶ್ಯಗಳು ಭಾರೀ ಸುದ್ದಿ ಮಾಡುತ್ತಿವೆ. ಕೆಲವು ತಮಾಷೆಯ ವಿಡಿಯೋಗಳು ಬಹುಬೇಗ ಜನರ ಮನಗೆಲ್ಲುತ್ತದೆ. ಇದೀಗ ವಧು, ಮಲಗುವ ಕೋಣೆಗೆ ಪ್ರವೇಶಿಸುತ್ತಿದ್ದಂತೆಯೇ ಕೇಳಿರುವ ಮಾತು ವೈರಲ್ ಆಗಿದೆ. ಮಾಡಿರುವ ಕೆಲಸವನ್ನು ವಧು ಗುರುತಿಸಲೇ ಇಲ್ಲ ಎಂದು ವರ ಸಪ್ಪೆ ಮೋರೆ ಹಾಕಿದ್ದಾನೆ.

ವಧು ಅಂದವಾದ ನೆಟ್ಟೆಡ್ ರೆಡ್ ಕಲರ್ ಲೆಹೆಂಗಾ ತೊಟ್ಟು ಕೋಣೆಗೆ ಪ್ರವೇಶಿಸುತ್ತಿದ್ದಾಳೆ. ನಡೆದು ಬರುವ ದಾರಿಯನ್ನು ಹೂವಿನಿಂದ ಅಲಂಕರಿಸಲಾಗಿದೆ. ಗೋಡೆಗೂ ಸಹ ಹೂವುಗಳನ್ನು ಅಂಟಿಸಲಾಗಿದೆ. ಹಾಸಿಗೆಯೇ ಕಾಣದಷ್ಟು ಹೂವಿನ ಎಸಳುಗಳನ್ನು ತುಂಬಿ ಅಲಂಕಾರ ಮಾಡಿದ್ದಾನೆ ವರ! ಕೋಣೆ ತುಂಬಾ ಸುಂದರವಾಗಿ ಕಾಣಿಸುತ್ತಿದೆ. ವಧು ಕೋಣೆಯನ್ನು ನಿಧಾನವಾಗಿ ವೀಕ್ಷಿಸುತ್ತಾಳೆ. ಕೊನೆಯಲ್ಲಿ… ನಾವು ಎಲ್ಲಿ ಮಲಗೋದು? ಎಂದು ಪ್ರಶ್ನೆ ಮಾಡುತ್ತಾಳೆ. ಮುಂದಿನ ಕ್ಷಣದಲ್ಲಿ ವರನ ರಿಯಾಕ್ಷನ್ ವಿಡಿಯೋದಲ್ಲಿ ನೋಡಬಹುದು. ಅವಳು ನಾನು ಮಾಡಿರುವ ಪ್ರಯತ್ನವನ್ನು ನೋಡಲೇ ಇಲ್ಲ! ಎಂಬ ಶೀರ್ಷಿಕೆಯೊಂದಿಗೆ ವರ ಸಪ್ಪೆ ಮೋರೆ ಹಾಕಿರುವ ವಿಡಿಯೋ ಫುಲ್ ವೈರಲ್ ಆಗಿದೆ.

ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹರಿಬಿಡಲಾಗಿದೆ. ವಿಡಿಯೋ 7 ಲಕ್ಷ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. 38,325ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿದೆ. ವಧುವಿನ ಪ್ರತಿಕ್ರಿಯೆಯನ್ನು ಕೇಳಿದ ನೆಟ್ಟಿಗರು ತಮಾಷೆಯ ಎಮೋಜಿಗಳನ್ನು ಕಳುಹಿಸುತ್ತಿದ್ದಾರೆ.

ಒಬ್ಬ ಬಳಕೆದಾದರು ಪ್ರೀತಿಗಾಗಿ ಪ್ರೀತಿಸಿ, ಪ್ರೀತಿಗಾಗಿ ಪ್ರಾರ್ಥಿಸಿ, ಪ್ರೀತಿಗಾಗಿಯೇ ಹಾರೈಸಿ, ಪ್ರೀತಿಗಾಗಿ ಕನಸಿರಲಿ ಆದರೆ ಪ್ರೀತಿಗಾಗಿ ಕಾಯುತ್ತಾ ನಿಮ್ಮ ಜೀವನವನ್ನು ತಡೆಯಬೇಡಿ ಎಂದು ಹೇಳಿದ್ದಾರೆ. ಇನ್ನೋರ್ವರು, ನಾನೂ ಕೂಡಾ ಅದೇ ರೀತಿ ಯೋಚಿಸುತ್ತಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಅಭಿಪ್ರಾಯ ಹೇಳಿದ್ದು, ಪ್ರಾಮಾಣಿಕವಾದ ಪ್ರಶ್ನೆ ಕೇಳಿದ್ದಾರೆ, ನಗುವ ಬದಲಾಗಿ ಅವಳನ್ನು ಗೌರವಿಸಬೇಕು ಎಂದು ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ:

Viral Video: ಧೂಮಪಾನ ಮಾಡುವಂತೆ ನಟಿಸಿ ಹೊಗೆಯನ್ನು ಉಂಗುರದಂತೆ ತಿರುಗಿಸಿ ಬಿಟ್ಟ ವಧು! ಪಕ್ಕದಲ್ಲಿದ್ದ ವರನ ರಿಯಾಕ್ಷನ್ ನೋಡಿ

Viral Video: 100 ಕೆಜಿ ತೂಕದ ಲೆಹೆಂಗಾ ತೊಟ್ಟು ನಿಂತ ವಧು; ವಿಷ್ ಮಾಡಲು ಜಾಗವಿಲ್ಲದೆ ಅತಿಥಿಗಳು ಕಂಗಾಲು!