ಮುಂಬೈನಲ್ಲಿ ಬಾಂಬೆ ಸ್ಯಾಂಡ್ವಿಜ್, ಚಿಲ್ಲಿ ಐಸ್ಕ್ರಿಮ್ ಸವಿದ ಬ್ರಿಟಿಷ್ ಹೈ ಕಮಿಷನರ್: ಫೋಟೋ ವೈರಲ್
ಬ್ರಿಟೀಷ್ ಹೈ ಕಮಿಷನರ್ ಅಲೇಕ್ಸ್ ಎಲ್ಲೀಸ್ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ, ನಗರದ ಬೀದಿ ಬದಿಯ ಬ್ಯಾಚುಲರ್ಸ್ ಎಂಬ ಅಂಗಡಿಯಲ್ಲಿ ಬಾಂಬೆ ಸ್ಯಾಂಡ್ವಿಜ್ ಮತ್ತು ಚಿಲ್ಲಿ ಐಸ್ಕ್ರಿಮ್ ಅನ್ನು ಸೇವಿಸಿದ್ದಾರೆ.
ವಿದೇಶಿಗರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚಾಗಿ ಇಲ್ಲಿನ ವಸ್ತುಗಳು ಮತ್ತು ಬೀದಿ ಬದಿಯ ತಿಂಡಿ-ತಿನಿಸುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇದರಂತೆ ಬ್ರಿಟೀಷ್ ಹೈ ಕಮಿಷನರ್ (British high commissioner) ಅಲೇಕ್ಸ್ ಎಲ್ಲೀಸ್ ಅವರು ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ, ನಗರದ ಬೀದಿ ಬದಿಯ ಬ್ಯಾಚುಲರ್ಸ್ ಎಂಬ ಅಂಗಡಿಯಲ್ಲಿ ಬಾಂಬೆ ಸ್ಯಾಂಡ್ವಿಜ್ ಮತ್ತು ಚಿಲ್ಲಿ ಐಸ್ಕ್ರಿಮ್ ಅನ್ನು ಸೇವಿಸಿದ್ದಾರೆ. ಈ ಕುರಿತು ಬ್ರಿಟೀಷ್ ಹೈ ಕಮಿಷನರ್ ಅಲೇಕ್ಸ್ ಎಲ್ಲೀಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ ಶೇರ್ ಮಾಡಿ, “ಬ್ಯಾಚುಲರ್ಸ್ ಅಂಗಡಿಯಲ್ಲಿ ಮುಂಬೈನವನಾಗಿಯೇ ಬಾಂಬೆ ಸ್ಯಾಂಡ್ವಿಜ್ ಮತ್ತು ಚಿಲ್ಲಿ ಐಸ್ಕ್ರಿಮ್ ಸವಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮರಾಠಿಯಲ್ಲಿ “ಬಂದು ಸೇವಿಸಿ” ಎಂದು ಬರೆದುಕೊಂಡಿದ್ದಾರೆ.
Eating like a #Mumbaikar today – trying the मुंबई सैंडविच and chilli ?️ ice cream. #BombaySandwich
या जेवायला! pic.twitter.com/24Xu9lkKQH
— Alex Ellis (@AlexWEllis) January 12, 2023
ಇವರ ಟ್ವಿಟ್ಗೆ, ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿ ಈಸ್ಟ್ ಆರ್ ವೆಸ್ಟ್ ಇಂಡಿಯಾ ಇಸ್ ದಿ ಬೆಸ್ಟ್.. ಭಾರತೀಯ ಸ್ವಾದವೇ ಹಾಗೆ ಬ್ರಿಟೀಷರಿಗೂ ಹಿಂದಿಯಲ್ಲಿ ಬರೆಯುವಂತೆ ಮಾಡುತ್ತದೆ ಎಂದಿದ್ದಾರೆ. ಇನ್ನೊಬ್ಬರು ಚಿಲ್ಲಿ ಐಸ್ ಕ್ರೀಂ ಇಸ್ ಬೆಸ್ಟ್ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:28 am, Sat, 14 January 23