ನಾಪತ್ತೆಯಾಗಿ 10 ವರ್ಷಗಳ ಬಳಿಕ ಇಬ್ಬರು ಮಕ್ಕಳನ್ನು ತಾಯಿಯ ಮಡಿಲಿಗೆ ಸೇರಿಸಿದ ಆಧಾರ್​ಕಾರ್ಡ್​

|

Updated on: Jul 29, 2024 | 11:42 AM

ಹತ್ತು ವರ್ಷಗಳ ಹಿಂದೆ ತಂದೆ-ತಾಯಿಯಿಂದ ಬೇರ್ಪಟ್ಟಿದ್ದ ಇಬ್ಬರು ಮಕ್ಕಳನ್ನು ಆಧಾರ್​ ಕಾರ್ಡ್​ ತಾಯಿಯ ಮಡಿಲಿಗೆ ಸೇರಿಸಿದೆ. ತಿಂಡಿ ತರಲೆಂದು ಅಂಗಡಿಗೆ ಹೋಗಿದ್ದ ಇಬ್ಬರು ಬಾಲಕರು ದಾರಿ ತಪ್ಪಿದ್ದರು, ಬಳಿಕ ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ, ಇದೀಗ ಆಧಾರ್ ಕಾರ್ಡ್​ ಅವರನ್ನು ತನ್ನ ಕುಟುಂಬದವರ ಜತೆ ಸೇರಿಸಿದೆ.

ನಾಪತ್ತೆಯಾಗಿ 10 ವರ್ಷಗಳ ಬಳಿಕ ಇಬ್ಬರು ಮಕ್ಕಳನ್ನು ತಾಯಿಯ ಮಡಿಲಿಗೆ ಸೇರಿಸಿದ ಆಧಾರ್​ಕಾರ್ಡ್​
ಆಧಾರ್
Follow us on

ಹೈದರಾಬಾದ್​ನ ಅನಾಥಾಶ್ರಮವೊಂದರಲ್ಲಿ ದಿಕ್ಕು, ದೆಸೆಯಿಲ್ಲದವರಂತೆ ವಾಸಿಸುತ್ತಿದ್ದ ಇಬ್ಬರು ಮಕ್ಕಳು 10 ವರ್ಷಗಳ ಬಳಿಕ ಅಮ್ಮನ ಮಡಿಲು ಸೇರಿದ್ದಾರೆ. ಇಬ್ಬರೂ ಮಕ್ಕಳು ಕೇವಲ 5 ವರ್ಷ ವಯಸ್ಸಿನಲ್ಲೇ ಪೋಷಕರಿಂದ ಬೇರ್ಪಟ್ಟರು. ಅಂದಿನಿಂದ ಇಬ್ಬರೂ ಅನಾಥಾಶ್ರಮದಲ್ಲಿ ಜೀವನ ಸಾಗಿಸುತ್ತಿದ್ದರು. ಇಲ್ಲಿ ವಾಸವಿದ್ದ ಸಂದರ್ಭದಲ್ಲಿ ಅನಾಥಾಶ್ರಮದ ಆಡಳಿತ ಮಂಡಳಿ ಅವರ ಆಧಾರ್ ನೋಂದಣಿ ಪ್ರಕ್ರಿಯೆ ಆರಂಭಿಸಿದಾಗ ಅವರಿಬ್ಬರೂ ನಿಜವಾದ ಸಹೋದರರು ಮಾತ್ರವಲ್ಲದೆ ತಂದೆ-ತಾಯಿ ಕೂಡ ಇದ್ದಾರೆ ಎಂಬುದು ತಿಳಿದುಬಂದಿದೆ.

ಅನಾಥಾಶ್ರಮದ ಆಡಳಿತ ಮಂಡಳಿ ಪ್ರಕಾರ, ತೆಲಂಗಾಣದ ಪಲನಾಡು ಕೊಟ್ಟಪ್ಪಕೊಂಡದಲ್ಲಿ ವಾಸಿಸುತ್ತಿರುವ ನಾಗೇಂದ್ರ ಮತ್ತು ಶ್ರೀನು ದಂಪತಿಗೆ ರಾಜು ಮತ್ತು ಇಮ್ಯಾನುಯೆಲ್ ಎಂಬ ಇಬ್ಬರು ಮಕ್ಕಳಿದ್ದಾರೆ ಎಂಬುದು ತಿಳಿದುಬಂದಿತ್ತು.

ಹತ್ತು ವರ್ಷಗಳ ಹಿಂದೆ ತಾಯಿ ಹತ್ತಿರದ ಅಂಗಡಿಯಿಂದ ಏನನ್ನೋ ಖರೀದಿಸಲೆಂದು ಹಣಕೊಟ್ಟು ಕಳುಹಿಸಿದ್ದರು. ಆದರೆ ಇಬ್ಬರು ಮಕ್ಕಳು ದಾರಿ ತಪ್ಪಿದ್ದರು. ಆಗ ಯಾರೋ ಅವರು ಪರಿತ್ಯಕ್ತರಾಗಿ ಅಲೆದಾಡುವುದನ್ನು ನೋಡಿ ಅನಾಥಾಶ್ರಮಕ್ಕೆ ಕಳುಹಿಸಿದರು.

ತಮ್ಮ ಮಕ್ಕಳನ್ನು ಹುಡುಕಲು ಸಾಧ್ಯವಾಗದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ಮತ್ತೆ ತಮ್ಮ ಮಕ್ಕಳು ಸಿಗುತ್ತಾರೆ ಎನ್ನುವ ಭರವಸೆಯನ್ನೇ ಕಳೆದುಕೊಂಡಿದ್ದರು.

ಮತ್ತಷ್ಟು ಓದಿ: Viral Video: ಗಂಡನಿಂದ ಡಿವೋರ್ಸ್‌ ಸಿಕ್ಕಿದ್ದೇ ತಡ, ಖುಷಿಗೆ ಫ್ರೆಂಡ್ಸ್‌ ಜೊತೆ ಭರ್ಜರಿ ಪಾರ್ಟಿ ಮಾಡಿದ ಪಾಕಿಸ್ತಾನಿ ಮಹಿಳೆ; ವಿಡಿಯೋ ವೈರಲ್‌

ಇದೇ ವೇಳೆ ಅನಾಥಾಶ್ರಮದಲ್ಲಿ ವಾಸಿಸು್ತತಿರುವ ಮಕ್ಕಳ ಆಧಾರ್ ನೋಂದಣಿ ಪ್ರಕ್ರಿಯೆಗೆ ಚಾಲನೆ ನಿಡಲಾಯಿತು. ಈ ವೇಳೆ ಇಬ್ಬರು ಮಕ್ಕಳ ಬೆರಳಚ್ಚು ಸ್ಕ್ಯಾನ್ ಮಾಡಿದಾಗ ಅವರು ಈಗಾಗಲೇ ಆಧಾರ್​ಕಾರ್ಡ್​ ಮಾಡಿಸಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅನಾಥಾಶ್ರಮದ ಆಡಳಿತ ಮಂಡಳಿ ಈ ಮಕ್ಕಳ ವಿಳಾಸಕ್ಕೆ ತೆರಳಿದಾಗ ಇಬ್ಬರೂ ನಿಜವಾದ ಸಹೋದರರು ಎಂಬುದು ಬೆಳಕಿಗೆ ಬಂದಿದೆ.

ಮಕ್ಕಳ ತಂದೆ ಒಂದು ಹಂತದಲ್ಲಿ ಅನಾಥಾಶ್ರಮ ಆಡಳಿತ ನೀಡಿದ ಮಾಹಿತಿಯನ್ನು ನಂಬಲಿಲ್ಲ ಎಂದು ಹೇಳಿದರು. ಹೀಗಿದ್ದರೂ ಒಮ್ಮೆ ಅನಾಥಾಶ್ರಮಕ್ಕೆ ಭೇಟಿ ನೀಡಿ ನೋಡಿದರೂ ತೊಂದರೆಯಿಲ್ಲ ಎಂದರು. ಇದಾದ ನಂತರ ಗಂಡ ಹೆಂಡತಿ ಇಬ್ಬರೂ ಅನಾಥಾಶ್ರಮಕ್ಕೆ ಬಂದರು.

ಅಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ಮುಖಾಮುಖಿಯಾದ ತಕ್ಷಣ, ನಾಲ್ಕೂ ಜನ ಮೂಕವಿಸ್ಮಿತರಾದರು. ಇದಾದ ಬಳಿಕ ಅಗತ್ಯ ವಿಧಿವಿಧಾನಗಳನ್ನು ಮುಗಿಸಿ ನಾಗೇಂದ್ರ ಮಕ್ಕಳೊಂದಿಗೆ ಮನೆಗೆ ಮರಳಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ