Viral Video: ಗಂಡನಿಂದ ಡಿವೋರ್ಸ್ ಸಿಕ್ಕಿದ್ದೇ ತಡ, ಖುಷಿಗೆ ಫ್ರೆಂಡ್ಸ್ ಜೊತೆ ಭರ್ಜರಿ ಪಾರ್ಟಿ ಮಾಡಿದ ಪಾಕಿಸ್ತಾನಿ ಮಹಿಳೆ; ವಿಡಿಯೋ ವೈರಲ್
ಇತ್ತೀಚಿಗೆ ದಾಂಪತ್ಯ ಜೀವನ ಸಣ್ಣ-ಪುಟ್ಟ ವಿಚಾರಗಳಿಗೆ ಮುರಿದು ಬೀಳುತ್ತಿವೆ. ಈ ಪ್ರೀತಿಯ ಸಂಬಂಧವನ್ನು ಮುರಿದುಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಇದು ಪತಿ ಪತ್ನಿ ಇಬ್ಬರಿಗೂ ಮಾನಸಿಕ ನೋವನ್ನುಂಟುಮಾಡಬಹುದು. ಆದ್ರೆ ಇಲ್ಲೊಬ್ಬ ಮಹಿಳೆ ಮಾತ್ರ ಅಬ್ಬಾ ಕೊನೆಗೂ ಗಂಡನಿಂದ ಮುಕ್ತಿ ಸಿಕ್ತಲ್ಲಾ ಎಂದು ಡಿವೋರ್ಸ್ ಸಿಕ್ಕ ಖುಷಿಗೆ ಅದ್ಧೂರಿಯಾಗಿ ಪಾರ್ಟಿಯನ್ನೇ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮದುವೆಯಾದ ಬಳಿಕ ಡಿವೋರ್ಸ್ ತೆಗೆದುಕೊಳ್ಳುವುದು ಸಾಮಾನ್ಯದ ವಿಚಾರವಲ್ಲ. ಇದೇ ಕಾರಣಕ್ಕೆ ಹೆಚ್ಚಿನವರು ದಾಂಪತ್ಯ ಜೀವನದಲ್ಲಿ ಮನಸ್ತಾಪ ಬಂದ್ರೂ ಎಲ್ಲವನ್ನೂ ಸರಿದೂಗಿಸಿಕೊಂಡು ಸಂಸಾರ ನಡೆಸುತ್ತಾರೆ. ಇನ್ನೂ ದಂಪತಿಗಳಿಬ್ಬರೂ ಜೊತೆಯಾಗಿ ಬಾಳಲಾಗದೆ ಡಿವೋರ್ಸ್ ಏನಾದ್ರೂ ಪಡೆದ್ರೆ, ಸಂಬಂಧಿಕರ, ಸಮಾಜದ ಚುಚ್ಚು ಮಾತುಗಳು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀಳಬಹುದು. ಆದ್ರೆ ಇಲ್ಲೊಬ್ಬ ಮಹಿಳೆ ಇದಕ್ಕೆಲ್ಲ ಕ್ಯಾರೆ ಅನ್ನದೇ, ಕೊನೆಗೂ ಗಂಡನಿಂದ ಮುಕ್ತಿ ಸಿಕ್ತಲ್ಲಾ ಎಂದು ತನ್ನ ಗಂಡನಿಂದ ವಿಚ್ಛೇದನ ಸಿಕ್ಕ ಖುಷಿಗೆ ಫ್ರೆಂಡ್ಸ್ ಜೊತೆ ಸೇರಿ ಅದ್ಧೂರಿ ಪಾರ್ಟಿಯನ್ನೇ ಮಾಡಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಹಿಂದೆ ತಮಿಳು ಕಿರುತೆರೆ ನಟಿ ಶಾಲಿನಿ ಅವರು ಡಿವೋರ್ಸ್ ಫೋಟೋಶೂಟ್ ಮಾಡಿಸಿ ಸುದ್ದಿಯಲ್ಲಿದ್ದರು. ಇದೀಗ ಅಮೇರಿಕಾದಲ್ಲಿ ನೆಲೆಸಿರುವ ಪಾಕಿಸ್ತಾನಿ ಮಹಿಳೆ ಗಂಡನಿಂದ ವಿಚ್ಛೇದನ ಪಡೆದು, ಇದು ನನ್ನ ಜೀವನದ ಹೊಸ ಆರಂಭ ಎನ್ನುತ್ತಾ ಅದ್ಧೂರಿಯಾಗಿ ಡಿವೋರ್ಸ್ ಪಾರ್ಟಿಯನ್ನು ಮಾಡಿದ್ದಾಳೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಕುರಿತ ಪೋಸ್ಟ್ ಒಂದನ್ನು ProfesorSahab ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಪಾಕಿಸ್ತಾನಿ ಮಹಿಳೆ ಅದ್ಧೂರಿ ಡಿವೋರ್ಸ್ ಪಾರ್ಟಿಯನ್ನು ಆಯೋಜನೆ ಮಾಡಿರುವ ದೃಶ್ಯವನ್ನು ಕಾಣಬಹುದು. ಆಕೆ ತನ್ನ ಗಂಡನಿಂದ ಮುಕ್ತಿ ಸಿಕ್ತಲ್ವಾ ಎನ್ನುತ್ತಾ ಫ್ರೆಂಡ್ಸ್ ಜೊತೆ ಸೇರಿ ಖುಷಿಯಲ್ಲಿ ಬಾಲಿವುಡ್ ಹಾಡುಗಳಿಗೆ ಡಾನ್ಸ್ ಮಾಡಿದ್ದಾಳೆ.
Social Media has done great damage to the Institution of Marriage pic.twitter.com/jQSC5bnyWb
— Professor Sahab (@ProfesorSahab) July 25, 2024
ಇದನ್ನೂ ಓದಿ: ಕ್ಲಾಸ್ ರೂಮ್ನಲ್ಲೇ ನಿದ್ದೆಗೆ ಜಾರಿದ ಶಿಕ್ಷಕಿ, ಬೀಸಣಿಗೆಯಿಂದ ಗಾಳಿ ಹಾಕಿದ ಪುಟ್ಟ ಮಕ್ಕಳು: ವಿಡಿಯೋ ನೋಡಿ
ಜುಲೈ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಭಾರೀ ಮೊತ್ತದ ಜೀವನಾಂಶ ಸಿಕ್ಕಿರಬೇಕು ಅದಕ್ಕೆ ಈ ಪಾರ್ಟಿʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಹುಶಃ ಆಕೆ ದಾಂಪತ್ಯ ಜೀವನದಲ್ಲಿ ನರಕವನ್ನು ಅನುಭವಿಸಿರಬೇಕು, ಅದಕ್ಕೆ ಈಗ ಇಷ್ಟೊಂದು ಖುಷಿಯಾರಿರೋದುʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Sun, 28 July 24