ಮಲಗಿದ್ದ ಮಹಿಳೆಯ ತಲೆಕೂದಲೊಳಗೆ ಹರಿದಾಡಿದ ಹಾವು, ವಿಡಿಯೋ ವೈರಲ್
ಹಾವು ಎಂದ ಕೂಡಲೇ ಮೈ ಒಮ್ಮೆ ಜುಮ್ಮೆನ್ನುವುದು, ಆದರೆ ಮಹಿಳೆಯ ತಲೆ ಕೂದಲೊಳಗೆ ಹಾವು ಹರಿದಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಹಾವು ಹೆಚ್ಚಾಗಿ ಮನುಷ್ಯರಿರುವ ಕಡೆಯಲ್ಲಿ ಇರುವುದಿಲ್ಲ, ಹುಲ್ಲುಗಾವಲು, ಇಲಿಯ ಬಿಲ, ಹೀಗೆ ಎಲ್ಲೆಲ್ಲೋ ಇರುತ್ತವೆ. ಆದರೆ ಈ ಯುವತಿಯ ತಲೆಕೂದಲಿನಲ್ಲಿ ಹಾವು ಹರಿದಾಡುವ ವಿಡಿಯೋ ನೋಡಿದಾಗ ಆಶ್ಚರ್ಯವಾಗುವುದು ಸತ್ಯ.
ಹಾವು ಎಂದ ಕೂಡಲೇ ಮೈ ಒಮ್ಮೆ ಜುಮ್ಮೆನ್ನುವುದು, ಮಹಿಳೆಯ ತಲೆ ಕೂದಲೊಳಗೆ ಹಾವು ಹರಿದಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಹಾವು ಹೆಚ್ಚಾಗಿ ಮನುಷ್ಯರಿರುವ ಕಡೆಯಲ್ಲಿ ಇರುವುದಿಲ್ಲ, ಹುಲ್ಲುಗಾವಲು, ಇಲಿಯ ಬಿಲ, ಹೀಗೆ ಎಲ್ಲೆಲ್ಲೋ ಇರುತ್ತವೆ. ಆದರೆ ಈ ಯುವತಿಯ ತಲೆಕೂದಲಿನಲ್ಲಿ ಹಾವು ಹರಿದಾಡುವ ವಿಡಿಯೋ ನೋಡಿದಾಗ ಆಶ್ಚರ್ಯವಾಗುವುದು ಸತ್ಯ.
ಅಷ್ಟು ದೊಡ್ಡ ಹಾವು ಕೂದಲಿನೊಳಗೆ ಓಡಾಡಿದರೂ ಆಕೆಗೆ ಗೊತ್ತೇ ಆಗಿಲ್ಲವೇ ಎಂಬುದು. ಈ ವಿಡಿಯೋ ಎಲ್ಲಿಯದು ಎಂಬುದು ತಿಳಿದಿಲ್ಲ, ಆಕೆ ಮಲಗಿದ್ದಾಗ ಕೂದಲೊಳಗೆ ಹಾವು ಹರಿದಾಡುವುದನ್ನು ಕಾಣಬಹುದು. ಯುವತಿ ಹಾವಿಗೆ ಹೆದರಿದಂತೆ ಕಾಣುತ್ತಿಲ್ಲ.
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಎರಡು ಕೈಗಳ ಮೇಲೆ ತಲೆಯಿಟ್ಟು ಮಲಗಿದ್ದಾರೆ. ಗಾಢ ನಿದ್ದೆಯಲ್ಲಿದ್ದ ಆಕೆಯ ತಲೆಯ ಮೇಲೆ ಹಾವೊಂದು ಹರಿದಾಡುತ್ತಿದೆ. ಈ ಹಾವು ಮಹಿಳೆಯ ಕೂದಲಿಗೆ ಸುತ್ತಿ ತಲೆಯ ಹಿಂಭಾಗಕ್ಕೆ ತೆವಳಲು ಪ್ರಯತ್ನಿಸುತ್ತಿದೆ. ಅಚ್ಚರಿಯ ವಿಷಯವೆಂದರೆ ಮಹಿಳೆಗೆ ತನ್ನ ಕೂದಲಿನಲ್ಲಿ ಅಪಾಯಕಾರಿ ಜೀವಿ ಇದೆ ಎಂಬ ಕಲ್ಪನೆಯೇ ಇರುವುದಿಲ್ಲ. ನೀವೂ ಈ ವಿಡಿಯೋ ನೋಡಲೇಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ನೋಡಿದ ಬಳಕೆದಾರರೂ ಅಚ್ಚರಿಗೊಂಡಿದ್ದಾರೆ. ಕಾಶಿಕ್ಯಾತ್ರ ಖಾತೆಯಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದುವರೆಗೆ 27 ಮಿಲಿಯನ್ ಅಂದರೆ 27 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಈ ವಿಡಿಯೋವನ್ನು ಇದುವರೆಗೆ 2 ಲಕ್ಷ 26 ಸಾವಿರ ಬಳಕೆದಾರರು ಲೈಕ್ ಮಾಡಿದ್ದಾರೆ. ವೀಡಿಯೊಗೆ ಕಾಮೆಂಟ್ ಮಾಡಿದ ಬಳಕೆದಾರರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದರು.
View this post on Instagram
ಇದಕ್ಕೆ ಯಾರೋ ಅಚ್ಚರಿ ವ್ಯಕ್ತಪಡಿಸಿದ್ದು, ಈ ಹಾವು ನಕಲಿ ಅಲ್ಲ ಎಂದು ಯಾರೋ ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ಹಾವು ವಿಷಕಾರಿಯಲ್ಲ ಕಚ್ಚುವುದಿಲ್ಲ ಎಂದು ಬರೆದಿದ್ದಾರೆ.
ಮತ್ತಷ್ಟು ಓದಿ: ಮನೆಯ ಮಂಚದ ಕೆಳಗೆ ಹರಿದಾಡುತ್ತಿದ್ವು 16ಕ್ಕೂ ಹೆಚ್ಚು ನಾಗರ ಹಾವುಗಳು, 32 ಮೊಟ್ಟೆಗಳು ಪತ್ತೆ
ಮತ್ತೊಂದು ಘಟನೆ ಮುಜಾಫರ್ಪುರ ಜಿಲ್ಲೆಯ ಸರೈಯಾ ಬ್ಲಾಕ್‌ನ ಖೈರಾ ಗ್ರಾಮದಲ್ಲಿ ಇಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮನೆಯೊಂದರಲ್ಲಿ 16 ನಾಗರ ಹಾವುಗಳು ಪತ್ತೆಯಾಗಿವೆ ಅಷ್ಟೇ ಅಲ್ಲದೆ 32 ಮೊಟ್ಟೆಗಳು ಕೂಡ ಇದ್ದವು. ಇದನ್ನು ನೋಡಿ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಬೆಚ್ಚಿಬಿದ್ದಿದ್ದಾರೆ. ಸರಯ್ಯ ಬ್ಲಾಕ್‌ನ ಖೈರಾ ಗ್ರಾಮದ ನಿವಾಸಿ ಸಂಜೀತ್ ಮಹತೋ ಎಂಬುವವರ ಮನೆಯಲ್ಲಿ ಕಳೆದ ಎರಡು ದಿನಗಳಿಂದ ಹಾವುಗಳು ಕಾಣಿಸಿಕೊಳ್ಳುತ್ತಿದ್ದವು. ಮಳೆ ನೀರು ನುಗ್ಗಿದ್ದರಿಂದ ಹಾವುಗಳು ಬಂದಿವೆ ಎಂದು ಅವರು ಭಾವಿಸಿದ್ದರು. ಈ ವೇಳೆ ಹನ್ನೆರಡು ಹಾವಿನ ಮರಿಗಳನ್ನು ಹಿಡಿದು ಹೊಲಕ್ಕೆ ಬಿಡಲಾಯಿತು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ