Trending : ಕಾರ್ಮಿಕ ದಿನಾಚರಣೆ ಅಂಗವಾಗಿ ಅಮೆರಿಕದ ನೆವಾಡಾದಲ್ಲಿ ಆಯೋಜನೆಗೊಂಡ ಬರ್ನಿಂಗ್ ಮ್ಯಾನ್ ಉತ್ಸವಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಜಗತ್ತಿನ ಮೂಲೆಮೂಲೆಗಳಿಂದ ಆಗಮಿಸಿದ್ದರು. ಒಂಬತ್ತು ದಿನಗಳ ಕಾಲ ನಡೆದ ಈ ಸಂಗೀತ-ಸಂಸ್ಕೃತಿ ಉತ್ಸವವು ಸೋಮವಾರದಂದು ಮುಕ್ತಾಯವಾಯಿತು. ಆದರೆ ಬ್ಯ್ಲಾಕ್ ರಾಕ್ ಮರುಭೂಮಿಯ ಸುತ್ತಮುತ್ತಲಿನ ಪ್ರದೇಶಗಳ ಮಾರ್ಗವಾಗಿ ತೆರಳುವವರು ಸುಮಾರು 8 ಗಂಟೆಗಳ ಕಾಲ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಯಿತೆಂದು ನ್ಯೂಯಾರ್ಕ್ ಪೋಸ್ಟ್‌ನ ವರದಿ ತಿಳಿಸಿದೆ. ಮೂರು ವರ್ಷಗಳ ಕೊವಿಡ್ ಅವಧಿಯ ನಂತರ ಏರ್ಪಡಿಸಿದ ಬರ್ನಿಂಗ್ ಮ್ಯಾನ್ ಉತ್ಸವ ಇದಾಗಿತ್ತು. ಮೋಜು, ಮಸ್ತಿಯ ನಂತರ ಉಂಟಾದ ಇಂಥ ದೈತ್ಯ ಟ್ರಾಫಿಕ್ಗೆ ಸಂಬಂಧಿಸಿದ ಫೋಟೋಗಳು ಆನ್ಲೈನ್ನಲ್ಲಿ ಇದೀಗ ವೈರಲ್ ಆಗುತ್ತಿವೆ.
Exodus wait time is currently around 8 hours. Consider delaying your departure until conditions improve. If you must leave now, drive on L Street to prevent traffic jams. Drive slowly, watch for road debris, follow directions from Gate staff, and listen to BMIR 94.5FM.
ಇದನ್ನೂ ಓದಿ— Burning Man Project (@burningman) September 5, 2022
‘ಬರ್ನಿಂಗ್ ಮ್ಯಾನ್ ಪ್ರಾಜೆಕ್ಟ್’ ತನ್ನ ಟ್ವಿಟರ್ ಖಾತೆಯಲ್ಲಿ ಈ ವಿಷಯವನ್ನು ಟ್ವೀಟ್ ಮಾಡಿದೆ, ‘ಸುಮಾರು ಎಂಟುಗಂಟೆಗಳ ಕಾಲ ಟ್ರಾಫಿಕ್ನ ಪರಿಸ್ಥಿತಿ ಹೀಗೆಯೇ ಇರುತ್ತದೆ. ಆದ್ದರಿಂದ ನಿಮ್ಮ ಪ್ರಯಾಣ ತಡವಾಗಬಹುದು’ ಎಂದು.
ಒಂಬತ್ತು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ಸುಮಾರು 80,000 ಜನರು ಪಾಲ್ಗೊಂಡಿದ್ದರು. ಹೀಗೆ ಉಂಟಾದ ಟ್ರಾಫಿಕ್ನಿಂದಾಗಿ ಮತ್ತು ಹವಾಮಾನದ ಅಡ್ಡಪರಿಣಾಮಗಳನ್ನು ಅನೇಕರು ಅನೇಕ ರೀತಿಯಲ್ಲಿ ಅನುಭವಿಸಬೇಕಾಯಿತು.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:04 am, Wed, 7 September 22