Shocking Video: ಹಳಿಯ ಮೇಲಿದ್ದ ವ್ಯಕ್ತಿಯ ಮೇಲೆ ಹಾದುಹೋದ ರೈಲು; ಅಚ್ಚರಿಯ ರೀತಿಯಲ್ಲಿ ಪಾರಾದ ವಿಡಿಯೋ ಇಲ್ಲಿದೆ

ರೈಲು ಬರುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆ ವ್ಯಕ್ತಿ ಚಲಿಸುತ್ತಿರುವ ರೈಲನ್ನು ಹತ್ತಲು ಯತ್ನಿಸಿದ್ದಾರೆ. ಈ ವೇಳೆ ಅವರು ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದಾರೆ.

Shocking Video: ಹಳಿಯ ಮೇಲಿದ್ದ ವ್ಯಕ್ತಿಯ ಮೇಲೆ ಹಾದುಹೋದ ರೈಲು; ಅಚ್ಚರಿಯ ರೀತಿಯಲ್ಲಿ ಪಾರಾದ ವಿಡಿಯೋ ಇಲ್ಲಿದೆ
ರೈಲ್ವೆ ಹಳಿಯ ಮೇಲೆ ಮಲಗಿದ್ದ ವ್ಯಕ್ತಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 07, 2022 | 2:09 PM

ನವದೆಹಲಿ: ಉತ್ತರ ಪ್ರದೇಶದ (Uttar Pradesh) ಇಟಾವಾ ಜಿಲ್ಲೆಯ ಭರ್ತಾನ ರೈಲು ನಿಲ್ದಾಣದಲ್ಲಿ ರೈಲಿನಡಿಗೆ ಸಿಲುಕಿದ ಪ್ರಯಾಣಿಕರೊಬ್ಬರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿದೆ. ಆತನ ಮೇಲೆ ರೈಲು (Train) ಸಂಪೂರ್ಣವಾಗಿ ಹಾದುಹೋಗಿದ್ದರೂ ಆತ ಬದುಕುಳಿದಿದ್ದಾರೆ. ರೈಲು ಬರುತ್ತಿರುವಾಗಲೇ ಆ ವ್ಯಕ್ತಿ ಪ್ಲಾಟ್‌ಫಾರ್ಮ್ ಮತ್ತು ಹಳಿಗಳ ನಡುವಿನ ಜಾಗದಲ್ಲಿ ಬಿದ್ದರು. ಆಗ ರೈಲು ಬಂದು ಆತನ ಮೇಲೆ ಹಾದು ಹೋಯಿತು.

ಈ ದೃಶ್ಯ ರೈಲ್ವೆ ನಿಲ್ದಾಣದ ಪ್ಲಾಟ್​ಫಾರ್ಮ್​ನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಆದರೆ, ಅಚ್ಚರಿಯ ರೀತಿಯಲ್ಲಿ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಗ್ರಾದಿಂದ ಹೊರಟಿದ್ದ ಸೂಪರ್‌ಫಾಸ್ಟ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಮಂಗಳವಾರ ಬೆಳಗ್ಗೆ 9.45ರ ಸುಮಾರಿಗೆ ಭರ್ತಾನ ರೈಲು ನಿಲ್ದಾಣವನ್ನು ತಲುಪಿದಾಗ ಪ್ಲಾಟ್‌ಫಾರ್ಮ್ ನಂ.2ರಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Viral Video: ಉದ್ಘಾಟನೆ ವೇಳೆಯೇ ಕುಸಿದು ಬಿದ್ದ ಬೃಹತ್ ಸೇತುವೆ; ವಿಡಿಯೋ ವೈರಲ್

ರೈಲು ಬರುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆ ವ್ಯಕ್ತಿ ಚಲಿಸುತ್ತಿರುವ ರೈಲನ್ನು ಹತ್ತಲು ಯತ್ನಿಸಿದ್ದಾರೆ. ಈ ವೇಳೆ ಅವರು ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದಾರೆ. ಹಳಿ ಮತ್ತು ಪ್ಲಾಟ್​ಫಾರ್ಮ್ ನಡುವಿನ ಜಾಗದಲ್ಲಿ ಸಿಲುಕಿದ ಆ ವ್ಯಕ್ತಿಯ ಮೇಲೆ ರೈಲು ಹಾದುಹೋಗಿದೆ.

ಪ್ಲಾಟ್​ಫಾರ್ಮ್​ನಲ್ಲಿ ನೆರೆದಿದ್ದ ಅಪಾರ ಜನಸ್ತೋಮ ಕ್ಯಾಮರಾದಲ್ಲಿ ಈ ಇಡೀ ಘಟನೆಯನ್ನು ಸೆರೆಹಿಡಿದಿದ್ದಾರೆ. ರೈಲು ಅವರ ಮೇಲೆ ಹಾದುಹೋದ ನಂತರ, ಆ ವ್ಯಕ್ತಿ ಎದ್ದು, ಹಳಿಗಳ ಮೇಲೆ ಬಿದ್ದಿದ್ದ ತನ್ನ ವಸ್ತುಗಳನ್ನು ತೆಗೆದುಕೊಂಡು ಎದ್ದಿದ್ದಾರೆ. ಆಗ ಆತ ಕೈಗಳನ್ನು ಜೋಡಿಸಿ ಅಲ್ಲಿದ್ದವರಿಗೆ ನಮಸ್ಕಾರ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ