Viral Video: ಉದ್ಘಾಟನೆ ವೇಳೆಯೇ ಕುಸಿದು ಬಿದ್ದ ಬೃಹತ್ ಸೇತುವೆ; ವಿಡಿಯೋ ವೈರಲ್
ಸೇತುವೆಯನ್ನು ಉದ್ಘಾಟಿಸಲು ಬಂದಿದ್ದ ಮಹಿಳಾ ಅಧಿಕಾರಿಯು ಸಹಾಯ ಕೋರಿ ಆ ಸೇತುವೆಯಿಂದ ಕೆಳಗೆ ಜಿಗಿಯಲು ಸಿದ್ಧವಾಗಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದು.
ನವದೆಹಲಿ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (DRC) ಅಧಿಕಾರಿಗಳು ಸೇತುವೆಯನ್ನು ಉದ್ಘಾಟಿಸಲು ಜಮಾಯಿಸಿದ್ದಾಗಲೇ ಆ ಸೇತುವೆ (Bridge) ಕುಸಿದು ಬಿದ್ದಿರುವ ವಿಡಿಯೋ ವೈರಲ್ (Video Viral) ಆಗಿದೆ. ಈ ಅಪಘಾತದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆ ಸೇತುವೆಯ ನಿರ್ಮಾಣದ ಗುಣಮಟ್ಟವನ್ನು ಜನರು ಅಪಹಾಸ್ಯ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಸ್ಥಳೀಯರು ನದಿ ದಾಟಲು ಈ ಕಿರು ಸೇತುವೆಯನ್ನು ನಿರ್ಮಿಸಲಾಗಿತ್ತು. ಈ ಮೊದಲು ಇದ್ದ ಸೇತುವೆ ಮಳೆಗಾಲದಲ್ಲಿ ಒಡೆಯುತ್ತದೆ ಎಂಬ ಕಾರಣಕ್ಕೆ ಹೊಸ ಸೇತುವೆಯನ್ನು ನಿರ್ಮಿಸಲಾಗಿತ್ತು.
ಅಧಿಕೃತ ಕಾರ್ಯಕ್ರಮವೊಂದರಲ್ಲಿ ಈ ಸೇತುವೆಯನ್ನು ಉದ್ಘಾಟನೆ ಮಾಡಲು ಅಧಿಕಾರಿಗಳು ಸೇತುವೆಯ ಮೇಲೆ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸೇತುವೆಯ ಒಂದು ತುದಿಯಲ್ಲಿ ಕೆಂಪು ರಿಬ್ಬನ್ ಕಟ್ಟಲಾಗಿತ್ತು. ಆ ರಿಬ್ಬನ್ ಅನ್ನು ಕಟ್ ಮಾಡುವ ಮೂಲಕ ಉದ್ಘಾಟನೆ ಮಾಡಬೇಕಾಗಿತ್ತು. ಆದರೆ, ಅಲ್ಲಿದ್ದ ಸಿಬ್ಬಂದಿ ರಿಬ್ಬನ್ ಕತ್ತರಿಸಲು ಕತ್ತರಿ ತೆಗೆದ ತಕ್ಷಣ ಸೇತುವೆಯು ಅಧಿಕಾರಿಗಳ ಭಾರವನ್ನು ತಡೆಯಲಾಗದೆ ಕುಸಿದು ಬಿದ್ದಿದೆ.
ಇದನ್ನೂ ಓದಿ: Atal Bridge: ಗುಜರಾತ್ನಲ್ಲಿ ಮೋದಿಯಿಂದ ಇಂದು ಅಟಲ್ ಸೇತುವೆ ಲೋಕಾರ್ಪಣೆ; ಇದರ ವಿಶೇಷತೆಗಳೇನು ಗೊತ್ತಾ?
ತಕ್ಷಣ ಆ ಸೇತುವೆಯನ್ನು ಉದ್ಘಾಟಿಸಲು ಬಂದಿದ್ದ ಮಹಿಳಾ ಅಧಿಕಾರಿಯು ಸಹಾಯ ಕೋರಿ ಆ ಸೇತುವೆಯಿಂದ ಕೆಳಗೆ ಜಿಗಿಯಲು ಸಿದ್ಧವಾಗಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದು. ತಕ್ಷಣ ಭದ್ರತಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಮಹಿಳಾ ಅಧಿಕಾರಿಯನ್ನು ಕುಸಿಯುತ್ತಿದ್ದ ಸೇತುವೆಯಿಂದ ರಕ್ಷಿಸಿದ್ದಾರೆ.
ಅಧಿಕೃತ ನಿಯೋಗದ ಉಳಿದ ಸದಸ್ಯರು ಕೂಡ ಸೇತುವೆಯಿಂದ ಕೆಳಗೆ ಜೋತಾಡತೊಡಗಿದರು. ಆದರೆ ಅದೃಷ್ಟವಶಾತ್ ಅವರು ನೆಲಕ್ಕೆ ಬೀಳಲಿಲ್ಲ. ಸಿಕ್ಕಿಬಿದ್ದ ಅಧಿಕಾರಿಗಳಿಗೆ ಸಹಾಯ ಮಾಡಲು ಇತರರು ತಕ್ಷಣವೇ ಧಾವಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಉದ್ಘಾಟನೆಗೆ ಸಿದ್ಧವಾಗಿದ್ದ ಸೇತುವೆ ಕುಸಿದು ಎರಡು ತುಂಡಾಗಿದೆ.