ಅಮೆರಿಕಾದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವು; ಕೃತ್ಯದ ವೇಳೆ ಫೇಸ್‌ಬುಕ್ ಲೈವ್ ವಿಡಿಯೋ ಮಾಡಿದ 19 ವರ್ಷದ ಆರೋಪಿ
ಗುಂಡಿನ ದಾಳಿ ನಡೆಸುತ್ತಿರುವ ಕಪ್ಪು ವರ್ಣೀಯ ತನ್ನೆಲ್ಲ ಕೃತ್ಯಗಳನ್ನು ಫೇಸ್‌ಬುಕ್ ಲೈವ್ ಮೂಲಕ ಪ್ರಸಾರ ಮಾಡುತ್ತಿದ್ದಾನೆ. ಆತ ಈಗ ಎಲ್ಲಿದ್ದಾನೆ ಎಂಬ ನಿರ್ದಿಷ್ಟ ಸ್ಥಳವನ್ನು ನಾವು ಪತ್ತೆಹಚ್ಚುತ್ತಿದ್ದೇವೆ ಎಂದು ಮೆಂಫಿಸ್ ಪೊಲೀಸ್ ಅಧಿಕಾರಿಗಳು

ಟೆನ್ನೆಸ್ಸೀ: ಅಮೆರಿಕದ (United States) ಮೆಂಫಿಸ್‌ನಲ್ಲಿ ಬುಧವಾರ ಸಂಜೆ 19 ವರ್ಷದ ಕಪ್ಪು ವರ್ಣೀಯ ಯುವಕನೊಬ್ಬ ಗುಂಡಿನ ದಾಳಿ ನಡೆಸಿದ್ದು, ತನ್ನ ಕೃತ್ಯಗಳನ್ನು ಫೇಸ್‌ಬುಕ್ ಲೈವ್ (Facebook Live) ಪ್ರಸಾರ ಮಾಡಿದ್ದಾನೆ. ಎಜೆಕಿಯೆಲ್ ಕೆಲ್ಲಿ ಎಂದು ಗುರುತಿಸಲಾದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಇದಕ್ಕೂ ಮೊದಲು ಮೆಂಫಿಸ್ ಪೊಲೀಸ್ ಇಲಾಖೆಯ ಅಧಿಕಾರಿಗಳು ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದರು. ಗುಂಡಿನ ದಾಳಿ ನಡೆಸುತ್ತಿರುವ ಕಪ್ಪು ವರ್ಣೀಯ ತನ್ನೆಲ್ಲ ಕೃತ್ಯಗಳನ್ನು ಫೇಸ್‌ಬುಕ್ ಲೈವ್ ಮೂಲಕ ಪ್ರಸಾರ ಮಾಡುತ್ತಿದ್ದಾನೆ. ಆತ ಈಗ ಎಲ್ಲಿದ್ದಾನೆ ಎಂಬ ನಿರ್ದಿಷ್ಟ ಸ್ಥಳವನ್ನು ನಾವು ಪತ್ತೆಹಚ್ಚುತ್ತಿದ್ದೇವೆ. ಅಲ್ಲಿಯವರೆಗೂ ನೀವೆಲ್ಲರೂ ಎಚ್ಚರಿಕೆಯಿಂದ ಇದ್ದು ನಮಗೆ ಸಹಕರಿಸಿ ಎಂದು ಮನವಿ ಮಾಡಿದ್ದರು.
— Memphis Police Dept (@MEM_PoliceDept) September 8, 2022
ಇದನ್ನೂ ಓದಿ: Murder News: ರಾಜಸ್ಥಾನದಲ್ಲಿ ಮನೆಗೆ ತೆರಳುತ್ತಿದ್ದ ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ
ಜನರು ಮನೆ ಬಿಟ್ಟು ಆಚೆ ಬಾರದಂತೆ ಪೊಲೀಸರು ಸೂಚಿಸಿದ್ದರು. “ಶಂಕಿತ ವ್ಯಕ್ತಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ನೀವು ಹೊರಗೆ ಹೋಗಲೇಬೇಕಾದ ಅನಿವಾರ್ಯತೆ ಇಲ್ಲದಿದ್ದರೆ ಇದು ಬಗೆಹರಿಯುವವರೆಗೆ ನೀವೆಲ್ಲರೂ ಮನೆಯೊಳಗೆ ಇರಿ” ಎಂದು ಪೊಲೀಸರು ಹೇಳಿದ್ದರು.
*****UPDATE 9:28 PM******
SUSPECT IS IN CUSTODY
Ezekiel D. Kelly
Please follow our social media platforms for updates.
Please avoid the area of Ivan Road & Hodge Road
— Memphis Police Dept (@MEM_PoliceDept) September 8, 2022
ಪೊಲೀಸರು ಗುಂಡಿನ ದಾಳಿ ನಡೆಸಿದ ಯುವಕನ ಚಿತ್ರ ಹಾಗೂ ಆತ ಚಾಲನೆ ಮಾಡುತ್ತಿರುವ ವಾಹನದ ವಿವರಣೆಯನ್ನು ಬಿಡುಗಡೆ ಮಾಡಿದ್ದಾರೆ. ಆರಂಭದಲ್ಲಿ ನೀಲಿ ಅಥವಾ ಸಿಲ್ವರ್ ಸೆಡಾನ್‌ನಲ್ಲಿ ಓಡಾಡುತ್ತಿದ್ದ ಆತ ಕೊನೆಗೆ ಬೂದು ಬಣ್ಣದ ಎಸ್‌ಯುವಿಯಲ್ಲಿ ಹೋಗುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.