Sign In

By signing in or creating an account, you agree with Associated Broadcasting Company's Terms & Conditions and Privacy Policy.

Big News: ಸೊಮಾಲಿಯಾದ ಹೋಟೆಲ್​ಗೆ ನುಗ್ಗಿ ಅಲ್​ ಶಬಾಬ್ ಉಗ್ರರಿಂದ ಗುಂಡಿನ ದಾಳಿ, ಬಾಂಬ್ ಸ್ಫೋಟ

ಈ ವರ್ಷದ ಮೇನಲ್ಲಿ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಅಧಿಕಾರ ವಹಿಸಿಕೊಂಡ ನಂತರ ಸೊಮಾಲಿಯಲ್ಲಿ ನಡೆದ ಮೊದಲ ದೊಡ್ಡ ದಾಳಿ ಇದಾಗಿದೆ.

Big News: ಸೊಮಾಲಿಯಾದ ಹೋಟೆಲ್​ಗೆ ನುಗ್ಗಿ ಅಲ್​ ಶಬಾಬ್ ಉಗ್ರರಿಂದ ಗುಂಡಿನ ದಾಳಿ, ಬಾಂಬ್ ಸ್ಫೋಟ
ಸೊಮಾಲಿಯಾ ಹೋಟೆಲ್​ನಲ್ಲಿ ದಾಳಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 20, 2022 | 9:32 AM

ಮೊಗಾದಿಶು: ಸೊಮಾಲಿಯಾ (Somalia) ರಾಜಧಾನಿ ಮೊಗಾದಿಶುನಲ್ಲಿ ಶುಕ್ರವಾರ ಗುಂಡಿನ ಚಕಮಕಿ ಮತ್ತು ಬಾಂಬ್ ಸ್ಫೋಟಗಳ ಸುರಿಮಳೆ ನಡೆದಿದೆ. ಮುಂಬೈನ ತಾಜ್ ಹೋಟೆಲ್​ನಲ್ಲಿ (Mumbai Taj Hotel) ಉಗ್ರರು ಯಾವ ರೀತಿಯ ಹೋಟೆಲನ್ನು ವಶಕ್ಕೆ ಪಡೆದು, ಹತ್ಯಾಕಾಂಡ ನಡೆಸಿದ್ದರೋ ಅದೇ ರೀತಿಯಲ್ಲಿ ಸೊಮಾಲಿಯಾದ ಹಯಾತ್ ಹೋಟೆಲ್​ (Hayat Hotel) ಮೇಲೆ ದಾಳಿ ನಡೆದಿದೆ. ಅಲ್​ಖೈದಾ ಜೊತೆಗೆ ಲಿಂಕ್ ಆಗಿರುವ ಅಲ್-ಶಬಾಬ್ ಸಂಘಟನೆಯ ಉಗ್ರರು ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಸಾಕಷ್ಟು ಸಾವು- ನೋವುಗಳು ವರದಿಯಾಗಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಅಲ್-ಶಬಾಬ್ ಭಯೋತ್ಪಾದಕ ಗುಂಪಿನ ಉಗ್ರರು ಶುಕ್ರವಾರ ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿ, ಮನಬಂದಂತೆ ಗುಂಡು ಹಾರಿಸಿದ್ದಾರೆ. ಇದರಿಂದ ಹಲವಾರು ಸಾವು-ನೋವುಗಳು ವರದಿಯಾಗಿವೆ. ಹೋಟೆಲ್ ಒಳಗೆ ಸ್ಫೋಟದ ಸದ್ದು ಕೂಡ ಕೇಳಿಬಂದಿದೆ. ದಾಳಿಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಹಯಾತ್ ಹೋಟೆಲ್ ಮೇಲಿನ ದಾಳಿಯು ಭದ್ರತಾ ಪಡೆಗಳು ಮತ್ತು ಜಿಹಾದಿ ಗುಂಪಿನ ಬಂದೂಕುಧಾರಿಗಳ ನಡುವೆ ಭಾರೀ ಗುಂಡಿನ ಚಕಮಕಿಯನ್ನು ಉಂಟುಮಾಡಿತು. ಉಗ್ರರು ಇನ್ನೂ ಕಟ್ಟಡದೊಳಗೆ ಅಡಗಿಕೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿ ಅಬ್ದುಕದಿರ್ ಹಸನ್ ತಿಳಿಸಿದ್ದಾರೆ. ಬಂದೂಕುಧಾರಿಗಳು ಹೋಟೆಲ್‌ಗೆ ಬಲವಂತವಾಗಿ ನುಗ್ಗುವ ಕೆಲವೇ ನಿಮಿಷಗಳ ಮೊದಲು ಭಾರೀ ಸ್ಫೋಟ ಕೂಡ ಸಂಭವಿಸಿತ್ತು ಎನ್ನಲಾಗಿದೆ.

ಇದನ್ನೂ ಓದಿ: Bomb Threat: ಬ್ಯಾಗ್​ನಲ್ಲಿ ಬಾಂಬ್ ಇದೆ ಎಂದ ಇಂಡಿಗೋ ಪ್ರಯಾಣಿಕ; ಆಮೇಲೇನಾಯ್ತು?

ಶಾಸಕರು ಮತ್ತು ಸರ್ಕಾರಿ ಅಧಿಕಾರಿಗಳು ಆಗಾಗ್ಗೆ ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರಿಂದ ಅಲ್-ಶಬಾಬ್ ಭಯೋತ್ಪಾದಕರು ಮೊಗಾದಿಶುವಿನ ಹಯಾತ್ ಹೋಟೆಲ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಅಲ್-ಶಬಾಬ್ ಸಂಘಟನೆ ಕಳೆದ 10 ವರ್ಷಗಳಿಂದ ಸೊಮಾಲಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ. ಈ ವರ್ಷದ ಮೇನಲ್ಲಿ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಅಧಿಕಾರ ವಹಿಸಿಕೊಂಡ ನಂತರ ಸೊಮಾಲಿಯಲ್ಲಿ ನಡೆದ ಮೊದಲ ದೊಡ್ಡ ದಾಳಿ ಇದಾಗಿದೆ.

ಮೊದಲ ಸ್ಫೋಟ ಉಂಟಾದ ಕೆಲವು ನಿಮಿಷಗಳ ನಂತರ ಹೋಟೆಲ್ ಹೊರಗೆ ಎರಡನೇ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮೊದಲ ಸ್ಫೋಟದ ನಂತರ ಘಟನಾ ಸ್ಥಳಕ್ಕೆ ಧಾವಿಸಿದ ರಕ್ಷಕರು ಮತ್ತು ಭದ್ರತಾ ಪಡೆಗಳ ಸಿಬ್ಬಂದಿ ಗಾಯಗೊಂಡಿದ್ದು, ಕೆಲವರು ಸಾವನ್ನಪ್ಪಿರುವ ಕುರಿತೂ ವರದಿಯಾಗಿವೆ. ಆದರೆ, ಸಾವು-ನೋವಿನ ಬಗ್ಗೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಇದನ್ನೂ ಓದಿ: Terrorist Encounter: ಜಮ್ಮು ಕಾಶ್ಮೀರದ ಅನಂತ್​ನಾಗ್​ನಲ್ಲಿ ಎನ್​ಕೌಂಟರ್; ಹಿಜ್ಬ್ ಕಮಾಂಡರ್ ಹತ್ಯೆ

“ಹೋಟೆಲ್​ನ ಪ್ರದೇಶವನ್ನು ಸುತ್ತುವರಿಯಲಾಗಿದೆ. ಭದ್ರತಾ ಪಡೆಗಳು ಮತ್ತು ಬಂದೂಕುಧಾರಿಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ” ಎಂದು ಒಬ್ಬ ಪ್ರತ್ಯಕ್ಷದರ್ಶಿ ಮೊಹಮದ್ ಸಲಾದ್ ಹೇಳಿದ್ದಾರೆ. ಸುಮಾರು 15 ವರ್ಷಗಳಿಂದ ಸೊಮಾಲಿಯಾದ ದುರ್ಬಲವಾದ ಕೇಂದ್ರ ಸರ್ಕಾರದ ವಿರುದ್ಧ ಮಾರಣಾಂತಿಕ ದಂಗೆಯನ್ನು ನಡೆಸುತ್ತಿರುವ ಅಲ್-ಖೈದಾ ಲಿಂಕ್ಡ್ ಜಿಹಾದಿಸ್ಟ್ ಗುಂಪು ಈ ದಾಳಿಯನ್ನು ತಾವೇ ಮಾಡಿರುವುದಾಗಿ ಘೋಷಿಸಿಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ