Atal Bridge: ಗುಜರಾತ್ನಲ್ಲಿ ಮೋದಿಯಿಂದ ಇಂದು ಅಟಲ್ ಸೇತುವೆ ಲೋಕಾರ್ಪಣೆ; ಇದರ ವಿಶೇಷತೆಗಳೇನು ಗೊತ್ತಾ?
ಅಮ್ದಾವದ್ ಮುನ್ಸಿಪಲ್ ಕಾರ್ಪೊರೇಷನ್ ನಿರ್ಮಿಸಿರುವ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ನಿರ್ಮಾಣವಾಗಿರುವ ಸೇತುವೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಸಬರಮತಿ ನದಿಯ ಪ್ರಸಿದ್ಧ ‘ಅಟಲ್ ಸೇತುವೆ’ಯನ್ನು (Atal Bridge) ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಶನಿವಾರ) ಉದ್ಘಾಟಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 2 ದಿನಗಳ ಕಾಲ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಇಂದು ಸಂಜೆ ಸಬರಮತಿ (Sabaramati River) ನದಿಯ ಮುಂಭಾಗದಲ್ಲಿ ನಡೆಯಲಿರುವ ‘ಖಾದಿ ಉತ್ಸವ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ (PM Narendra Modi) ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ಸ್ಥಳದಿಂದ ಅಮ್ದಾವದ್ ಮುನ್ಸಿಪಲ್ ಕಾರ್ಪೊರೇಷನ್ ನಿರ್ಮಿಸಿರುವ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ನಿರ್ಮಾಣವಾಗಿರುವ ಸೇತುವೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ಈ ಸೇತುವೆಯ ಉದ್ಘಾಟನೆಗೆ ಒಂದು ದಿನ ಮೊದಲು ಪ್ರಧಾನಿ ಮೋದಿ ಅವರು ಟ್ವಿಟರ್‌ನಲ್ಲಿ ಈ ಸೇತುವೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. “ಅಟಲ್ ಸೇತುವೆ ಅದ್ಭುತವಾಗಿ ಕಾಣುತ್ತಿಲ್ಲವೇ!” ಎಂದು ಅವರು ಬರೆದುಕೊಂಡಿದ್ದಾರೆ.
Atal Pedestrian River Bridge will be inaugurated tomorrow
→ By : PM Modi → At : Sabarmati Riverfront Ahmedabad → Also known as Sabarmati foot over bridge
By the way, all of these are real pictures and not renders. pic.twitter.com/iKGmXciMS5
— Index of Gujarat (@IndexofGujarat) August 26, 2022
ಇಂದು ಲೋಕಾರ್ಪಣೆಯಾಗಲಿರುವ ‘ಅಟಲ್ ಸೇತುವೆ’ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ: – ಪಾದಚಾರಿಗಳಿಗೆ ಮಾತ್ರ ಇರುವ ‘ಅಟಲ್ ಎಲ್ಲಿಸ್ ಸೇತುವೆ ಮತ್ತು ಸರ್ದಾರ್ ಸೇತುವೆಯ ನಡುವೆ ನಿರ್ಮಿಸಲಾಗಿದೆ. – ಕಣ್ಮನ ಸೆಳೆಯುವ ವಿನ್ಯಾಸ ಮತ್ತು ಎಲ್ಇಡಿ ಲೈಟಿಂಗ್ ಹೊಂದಿರುವ ಈ ಸೇತುವೆಯು ಸುಮಾರು 300 ಮೀಟರ್ ಉದ್ದ ಮತ್ತು ಮಧ್ಯದಲ್ಲಿ 14 ಮೀಟರ್ ಅಗಲವಿದೆ. – 2,600 ಮೆಟ್ರಿಕ್ ಟನ್ ಉಕ್ಕಿನ ಕೊಳವೆಗಳನ್ನು ಬಳಸಿ ಸೇತುವೆಯನ್ನು ನಿರ್ಮಿಸಲಾಗಿದೆ. – ಈ ಸೇತುವೆಯ ಮೇಲ್ಛಾವಣಿಯು ವರ್ಣರಂಜಿತ ಬಟ್ಟೆಯಿಂದ ಮಾಡಲ್ಪಟ್ಟಿದೆ. ರೇಲಿಂಗ್ ಅನ್ನು ಗಾಜು ಮತ್ತು ಸ್ಟೇನ್ಲೆಸ್ ಸ್ಟೀಲ್ನಿಂದ ನಿರ್ಮಿಸಲಾಗಿದೆ. – ಪಾದಚಾರಿಗಳು ಮಾತ್ರವಲ್ಲದೆ ದ್ವಿಚಕ್ರ ವಾಹನ ಸವಾರರು ಸಂಚಾರವನ್ನು ತಪ್ಪಿಸಿಕೊಂಡು ನದಿಯನ್ನು ದಾಟಲು ಈ ಸೇತುವೆಯನ್ನು ಬಳಸಬಹುದು. – ಇದು ಜನರಿಗೆ ನದಿಯ ಮುಂಭಾಗವನ್ನು ನದಿಯ ಮಧ್ಯದಿಂದ ವೀಕ್ಷಿಸಲು ಅವಕಾಶ ಮಾಡಿಕೊಡುತ್ತದೆ. – ಈ ಸೇತುವೆಯನ್ನು ಜನರು ಕೆಳ ಮತ್ತು ಮೇಲಿನ ಕಾಲುದಾರಿಗಳಿಂದ ಅಥವಾ ನದಿಯ ಮುಂಭಾಗದ ವಾಯುವಿಹಾರದಿಂದ ಸಮೀಪಿಸಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
Doesn’t the Atal Bridge look spectacular! pic.twitter.com/6ERwO2N9Wv
— Narendra Modi (@narendramodi) August 26, 2022
ಇದನ್ನೂ ಓದಿ: ಸೇತುವೆ ಕುಸಿತ: ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಮಾಜಿ ಡಿಸಿಎಂ ಪರಮೇಶ್ವರ್
ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ ಹೆಸರಿನಲ್ಲಿ ನಿರ್ಮಿಸಲಾದ 300 ಮೀಟರ್ ಫುಟ್ ಓವರ್ ಬ್ರಿಡ್ಜ್ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಕಣ್ಣಿಗೆ ಕಟ್ಟುವ ಎಲ್‌ಇಡಿ ದೀಪಗಳಿಂದ ಇದು ಅಲಂಕರಿಸಲ್ಪಟ್ಟಿದೆ. ಈ ಸೇತುವೆಯು ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಮತ್ತು ಪೂರ್ವ ಮತ್ತು ಪಶ್ಚಿಮ ದಂಡೆಯಲ್ಲಿ ವಿವಿಧ ಸಾರ್ವಜನಿಕ ಅಭಿವೃದ್ಧಿಗೆ ಸಂಪರ್ಕವನ್ನು ಒದಗಿಸುತ್ತದೆ.
Our prized possession, the Sabarmati Riverfront just gets better as we open doors to the Atal Bridge. The modern marvel would be E-Inaugurated, tomorrow 27th August, Saturday by H’ble PM Shri @narendramodi Ji. pic.twitter.com/F9BllFNiR0
— Amdavad Municipal Corporation (@AmdavadAMC) August 26, 2022
ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಖಾದಿ ಮತ್ತು ಅದರ ಪ್ರಾಮುಖ್ಯತೆಯನ್ನು ಗೌರವಿಸಲು ಇಂದು ಸಬರಮತಿ ನದಿಯ ಮುಂಭಾಗದಲ್ಲಿ ಆಯೋಜಿಸಲಾದ ಖಾದಿ ಉತ್ಸವದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಗುಜರಾತ್‌ನಾದ್ಯಂತ 7,500 ಖಾದಿ ಕುಶಲಕರ್ಮಿಗಳು ಒಂದೇ ಸಮಯದಲ್ಲಿ ಚರಕದಲ್ಲಿ ನೂಲಲಿದ್ದಾರೆ.
Published On - 9:56 am, Sat, 27 August 22