AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breaking News: ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯುಯು ಲಲಿತ್ ಪ್ರಮಾಣವಚನ ಸ್ವೀಕಾರ

ಇಂದು ನ್ಯಾಯಮೂರ್ತಿ ಯುಯು ಲಲಿತ್ ಅವರು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Breaking News: ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯುಯು ಲಲಿತ್ ಪ್ರಮಾಣವಚನ ಸ್ವೀಕಾರ
ಯುಯು ಲಲಿತ್
TV9 Web
| Edited By: |

Updated on:Aug 27, 2022 | 10:55 AM

Share

ನವದೆಹಲಿ: ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ (Justice NV Ramana) ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಇಂದು ನ್ಯಾಯಮೂರ್ತಿ ಯುಯು ಲಲಿತ್ (Chief Justice UU Lalit) ಅವರು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.

ಉದಯ್ ಉಮೇಶ್ ಲಲಿತ್ ಅವರ ಇಡೀ ಕುಟುಂಬವೇ ವಕೀಲರು ಮತ್ತು ನ್ಯಾಯಮೂರ್ತಿಗಳ ಕುಟುಂಬವಾಗಿದೆ. ಮಹಾರಾಷ್ಟ್ರದ ಯುಯು ಲಲಿತ್ಅವರ ಕುಟುಂಬಕ್ಕೆ 102 ವರ್ಷ. ಅವರ ಅಜ್ಜ ರಂಗನಾಥ್ ಲಲಿತ್ ಭಾರತಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯೇ ಸೊಲ್ಲಾಪುರದಲ್ಲಿ ವಕೀಲರಾಗಿದ್ದರು. ಇಂದು ನ್ಯಾಯಮೂರ್ತಿ ಯುಯು ಲಲಿತ್ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಅವರ ಕುಟುಂಬದ 3 ತಲೆಮಾರುಗಳು ಹಾಜರಿದ್ದುದು ವಿಶೇಷವಾಗಿತ್ತು.

ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರ 90 ವರ್ಷದ ತಂದೆ ಉಮೇಶ್ ರಂಗನಾಥ್ ಲಲಿತ್ ಕೂಡ ಇಂದು ಪ್ರಮಾಣವಚನ ಸ್ವೀಕಾರದ ವೇಳೆ ಉಪಸ್ಥಿತರಿದ್ದರು. ಅವರು ತಮ್ಮ ತವರು ರಾಜ್ಯದಲ್ಲಿ ವಕೀಲರಾಗಿ ಸುದೀರ್ಘ ವೃತ್ತಿಜೀವನದ ನಂತರ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: Big Breaking: ದೇಶದ‌ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಯುಯು ಲಲಿತ್ ನೇಮಕ

ನೋಯ್ಡಾದಲ್ಲಿ ಶಾಲೆಯನ್ನು ನಡೆಸುತ್ತಿರುವ ನ್ಯಾಯಮೂರ್ತಿ ಯುಯು ಲಲಿತ್ ಅವರ ಪತ್ನಿ ಅಮಿತಾ ಲಲಿತ್ ಮತ್ತು ಅವರ ಇಬ್ಬರು ಪುತ್ರರಾದ ಹರ್ಷದ್ ಮತ್ತು ಶ್ರೀಯಶ್ ಸಹ ಇಂದು ಉಪಸ್ಥಿತರಿದ್ದರು. ಪುತ್ರರಿಬ್ಬರೂ ಇಂಜಿನಿಯರಿಂಗ್ ಓದಿದ್ದರೆ, ಶ್ರೀಯಶ್ ಲಲಿತ್ ಇಂಜಿನಿಯರಿಂಗ್ ನಂತರ ಕಾನೂನು ಅಧ್ಯಯನದತ್ತ ಮುಖ ಮಾಡಿದರು. ಅವರ ಪತ್ನಿ ರವೀನಾ ಕೂಡ ವಕೀಲೆ. ಹರ್ಷದ್ ಲಲಿತ್ ಅವರು ಸಂಶೋಧಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ರಾಧಿಕಾ ಜೊತೆ ಅವರು ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ.

2ಜಿ ಸ್ಪೆಕ್ಟ್ರಮ್ ಹಂಚಿಕೆ ಪ್ರಕರಣ ನ್ಯಾಯಮೂರ್ತಿ ಯುಯು ಲಲಿತ್ ನಿಭಾಯಿಸಿದ ಪ್ರಮುಖ ಪ್ರಕರಣಗಳಲ್ಲಿ ಒಂದಾಗಿದೆ. ಆಗಸ್ಟ್ 2014ರಲ್ಲಿ ಅವರನ್ನು ನೇರವಾಗಿ ವಕೀಲ ಸ್ಥಾನದಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನಾಗಿ ಮಾಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:53 am, Sat, 27 August 22

Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು