Viral News: ತನ್ನ ಬಗ್ಗೆ ಅಶ್ಲೀಲವಾಗಿ ಮಾತಾಡಿದವನಿಗೆ ರಸ್ತೆಯಲ್ಲೇ ಥಳಿಸಿದ ಮಹಿಳೆ
Uttar Pradesh News: ಸಾಕಷ್ಟು ಜನರು ಓಡಾಡುತ್ತಿದ್ದ ರಸ್ತೆಯೊಂದರಲ್ಲಿ ತನ್ನ ವಿರುದ್ಧ ಅಸಭ್ಯ ಟೀಕೆಗಳನ್ನು ಮಾಡಿದ ವ್ಯಕ್ತಿಯನ್ನು ನೆಲಕ್ಕೆ ತಳ್ಳಿದ ಮಹಿಳೆ ಆತನಿಗೆ ಹೊಡೆದಿದ್ದಾಳೆ.
ನವದೆಹಲಿ: ತನ್ನ ವಿರುದ್ಧ ಅಶ್ಲೀಲ ಹೇಳಿಕೆ ನೀಡಿದ್ದಕ್ಕಾಗಿ ವ್ಯಕ್ತಿಯೊಬ್ಬರಿಗೆ ಮಹಿಳೆ ಮನಬಂದಂತೆ ರಸ್ತೆಯಲ್ಲೇ ಥಳಿಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್‌ನಲ್ಲಿ ನಡೆದಿದೆ. ಸಾಕಷ್ಟು ಜನರು ಓಡಾಡುತ್ತಿದ್ದ ರಸ್ತೆಯೊಂದರಲ್ಲಿ ತನ್ನ ವಿರುದ್ಧ ಅಸಭ್ಯ ಟೀಕೆಗಳನ್ನು ಮಾಡಿದ ವ್ಯಕ್ತಿಯನ್ನು ನೆಲಕ್ಕೆ ತಳ್ಳಿದ ಮಹಿಳೆ ಆತನಿಗೆ ಹೊಡೆದಿದ್ದಾಳೆ.
ಆ ವ್ಯಕ್ತಿ ಮತ್ತು ಮಹಿಳೆಯನ್ನು ಸಮಾಧಾನಪಡಿಸಿ, ಬೇರ್ಪಡಿಸಲು ಸುತ್ತಲೂ ಸೇರಿದ್ದ ಜನರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಆಗ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದರು. ನಂತರ ಅವರಿಬ್ಬರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ: Viral Video: ಝೊಮ್ಯಾಟೋ ಡೆಲಿವರಿ ಏಜೆಂಟ್ನನ್ನು ಥಳಿಸಿದ ಮಹಿಳೆ ವಿರುದ್ಧ ನೆಟ್ಟಿಗರ ಆಕ್ರೋಶ
ಪೊಲೀಸರು ಸ್ಥಳಕ್ಕೆ ಆಗಮಿಸಿ, ಅವರಿಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಇಬ್ಬರನ್ನೂ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಅನೂಪ್ ಸಿಂಗ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:33 am, Sat, 27 August 22