Viral Video: ಕೊಲ್ಕತ್ತಾ: ಸಿಗ್ನಲ್​ ಜಂಪ್ ಮಾಡಿ ಕಾರು, ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಬಸ್​

|

Updated on: Oct 05, 2023 | 3:20 PM

Accident : ಕೊಲ್ಕತ್ತೆಯ ಸೆಕ್ಟರ್ V ಯಿಂದ ಕರುಣಾಮೊಯಿ ಕ್ರಾಸಿಂಗ್‌ಗೆ ಹೋಗುವ ರಸ್ತೆಯ ಬದಿಯಲ್ಲಿ ಕಾಲೇಜ್ ಮೋರ್ ಇಂಟರ್‌ಸೆಕ್ಷನ್‌ನಲ್ಲಿ ಸಿಗ್ನಲ್​ ಕೆಂಪು ಬಣ್ಣಕ್ಕೆ ತಿರುಗಿದ ನಂತರ ಕೂಡ ಚಾಲಕ ಬಸ್ ನಿಲ್ಲಿಸಲಿಲ್ಲ. ಪರಿಣಾಮವಾಗಿ ನಾಲ್ಕು ಪಾಯಿಂಟ್ ಕ್ರಾಸಿಂಗ್‌ನ ನಂತರ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. 10 ಬಸ್​ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

Viral Video: ಕೊಲ್ಕತ್ತಾ: ಸಿಗ್ನಲ್​ ಜಂಪ್ ಮಾಡಿ ಕಾರು, ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಬಸ್​
ಕೊಲ್ಕತ್ತೆಯಲ್ಲಿ ನಡೆದ ಬಸ್​ ಅಪಘಾತ
Follow us on

Kolkata : ಕೊಲ್ಕತ್ತೆಯಸೆಕ್ಟರ್​ V, ಕಾಲೇಜ್ ಮೋರ್‌ನ ಬಳಿ ಬಸ್​ ಸಿಗ್ನಲ್​ ಜಂಪ್​ ಮಾಡಿ ಕಾರು​ ಮತ್ತು ದ್ವಿಚಕ್ರವಾಹನಕ್ಕೆ ಡಿಕ್ಕಿ (Accident) ಹೊಡೆದಿದೆ. ಕಾಲೇಜ್​ ಬಳಿಯ ಡಿವೈಡರ್​​ಗೆ ಬಸ್​ ಡಿಕ್ಕಿ ಹೊಡೆದುದರಿಂದ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ 10 ಪ್ರಯಾಣಿಕರು ಗಾಯಗೊಂಡಿದ್ದಾರೆ. ರೆಡ್ಡಿಟ್​ ಮೂಲಕ ಅಪಘಾತದ ವಿಡಿಯೋ ವೈರಲ್ ಆಗಿದೆ. ದ್ವಿಚಕ್ರವಾಹನದ ಸವಾರ ಮತ್ತು ಹಿಂಬದಿಯ ಸವಾರ ಹೆಲ್ಮೆಟರ್​ ಧರಿಸಿದ್ದರಿಂದ ಅವರು ಯಾವುದೇ ರೀತಿಯ ಗಾಯಗಳಿಗೆ ಒಳಗಾಗಿಲ್ಲ. ಅದೃಷ್ಟವಶಾತ್​ ಕಾರಿನಲ್ಲಿದ್ದವರು ಗಾಯಗೊಳ್ಳದೆ ಪಾರಾಗಿದ್ದಾರೆ. ಕಾರಿನ ಏರ್​ಬ್ಯಾಗ್​ ಅವರನ್ನು ರಕ್ಷಿಸಿದೆ ಎಂದು ಬಿಧಾನನಗರದ ಸಂಚಾರ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : Viral Video: ಸ್ಪೇಸ್ ಕಾಫಿ; ಬಾಹ್ಯಾಕಾಶದಲ್ಲಿ ವಿಶೇಷ ಕಪ್​ನಲ್ಲಿ ಕಾಫಿ ಕುಡಿದ ಗಗನಯಾತ್ರಿ

KB 16 ಮಾರ್ಗದ ಬಸ್, ನ್ಯೂ ಟೌನ್‌ನ ಆಕ್ಷನ್ ಏರಿಯಾ III ರಲ್ಲಿ ಸುಖೋಬ್ರಿಷ್ಟಿ ವಸತಿ ಸಂಕೀರ್ಣದ ಬಳಿಯ ಬಸ್ ಟರ್ಮಿನಸ್‌ನಿಂದ ವಿಐಪಿ ರಸ್ತೆಯಿಂದ ಬಂಗೂರ್ ಅವೆನ್ಯೂಗೆ ಚಲಿಸುವಾಗ ಈ ದುರ್ಘಟನೆ ನಡೆದಿದೆ. ಸೋಮವಾರ, ಬಸ್ ಗೋದ್ರೇಜ್ ವಾಟರ್​ಸೈಡ್​ನಿಂದ ಸಾಲ್ಟ್ ಲೇಕ್ ಬೈಪಾಸ್ ಕಡೆಗೆ ಹೋಗುತ್ತಿತ್ತು. ಸೆಕ್ಟರ್ V ಯಿಂದ ಕರುಣಾಮೊಯಿ ಕ್ರಾಸಿಂಗ್‌ಗೆ ಹೋಗುವ ರಸ್ತೆಯ ಬದಿಯಲ್ಲಿ ಕಾಲೇಜ್ ಮೋರ್ ಇಂಟರ್‌ಸೆಕ್ಷನ್‌ನಲ್ಲಿ ಸಿಗ್ನಲ್​ ಕೆಂಪು ಬಣ್ಣಕ್ಕೆ ತಿರುಗಿದ ನಂತರ ಕೂಡ ಚಾಲಕ ಬಸ್ ನಿಲ್ಲಿಸಲಿಲ್ಲ. ಪರಿಣಾಮವಾಗಿ ನಾಲ್ಕು ಪಾಯಿಂಟ್ ಕ್ರಾಸಿಂಗ್‌ನ ನಂತರ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೊಲ್ಕತ್ತಾದಲ್ಲಿ ನಡೆದ ಅಪಘಾತದ ದೃಶ್ಯ

4 wheeler jumped signal and rammed into the bus.
byu/Construction1ne inCarsIndia

ಗಾಯಗೊಂಡ 10 ಪ್ರಯಾಣಿಕರನ್ನು ಬಿಧಾನನಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಹೆಚ್ಚಿನವರು ಮೂಗೇಟಿಗೆ ಒಳಗಾಗಿದ್ದಾರೆ. ಕೆಲವರ ಕೈಕಾಲು ಮೂಳೆಗಳು ಮುರಿದಿವೆ. ಈ ದುರ್ಘಟನೆಗೆ ಕಾರಣನಾದ ಬಸ್ಸಿನ ಚಾಲಕನನ್ನು ಬಂಧಿಸಲಾಗಿದೆ ಮತ್ತು ಐಪಿಸಿಯ 279 (ವೇಗದ ಚಾಲನೆ) ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಇದನ್ನೂ ಓದಿ : Viral Video: ಮುಂಬೈ; ಶಿವಾಜಿಪಾರ್ಕ್​ ಈಜುಗೊಳದಲ್ಲಿ ಮರಿಮೊಸಳೆ ಪತ್ತೆ; ಕಡಿತಕ್ಕೆ ಒಳಗಾದ ಸಿಬ್ಬಂದಿ

ಸೋಮವಾರ ಬೆಳಗ್ಗೆ ಪೊಲೀಸರು ಕ್ರೇನ್‌ಗಳ ಸಹಾಯದಿಂದ ಬಸ್ ಅನ್ನು ಹೊರ ತೆಗೆದಿದ್ದರಿಂದ ಕಾಲೇಜ್ ಮೋರ್ ಡಿವೈಡರ್​ನಲ್ಲಿ ಸುಮಾರು 40 ನಿಮಿಷಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ನಾಲ್ಕು ಗಂಟೆಗಳ ಹಿಂದೆ ರೆಡ್ಡಿಟ್​ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದರೆ, ಸಿಗ್ನಲ್​ ಜಂಪ್ ಮಾಡಿದ್ದು ಕಾರು ಅಥವಾ ಬಸ್​? ಎಂಬ ಬಗ್ಗೆ ನೆಟ್ಟಿಗರಲ್ಲಿ ಜಿಜ್ಞಾಸೆ ಉಂಟಾಗಿದ್ದು, ಈ ಸುತ್ತ ಚರ್ಚೆ ಸಾಗಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 3:16 pm, Thu, 5 October 23