AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Digital Condom: ಡಿಜಿಟಲ್ ಕಾಂಡೋಮ್ ಭಾರತದಲ್ಲಿ ಲಭ್ಯವಿದೆಯೇ?, ಇದನ್ನು ಹೇಗೆ ಬಳಸುವುದು?

ಈ ಅಪ್ಲಿಕೇಶನ್‌ನ ಹೆಸರು ಕ್ಯಾಮ್‌ಡಮ್, ಇದು ಬ್ಲೂಟೂತ್ ತಂತ್ರಜ್ಞಾನವನ್ನು ಬಳಸಿಕೊಂಡು ನಿಮ್ಮ ಖಾಸಗಿ ಕ್ಷಣಗಳನ್ನು ಕಾಪಾಡುತ್ತದೆ. ದಂಪತಿಗಳ ನಡುವಿನ ಅನ್ಯೋನ್ಯತೆಯ ಸಮಯದಲ್ಲಿ ಖಾಸಗಿತನವನ್ನು ರಕ್ಷಿಸಿಕೊಳ್ಳಲು ಜರ್ಮನ್ ಕಂಪನಿಯು ಇದನ್ನು ಪ್ರಾರಂಭಿಸಿದೆ.

Digital Condom: ಡಿಜಿಟಲ್ ಕಾಂಡೋಮ್ ಭಾರತದಲ್ಲಿ ಲಭ್ಯವಿದೆಯೇ?, ಇದನ್ನು ಹೇಗೆ ಬಳಸುವುದು?
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Oct 29, 2024 | 12:44 PM

Share

ಈ ಸುದ್ದಿಯನ್ನು ನೀವು ಕೇಳಿದರೆ ಆಶ್ಚರ್ಯಕ್ಕೊಳಗಾಗಬಹುದು. ಆದರೆ, ಇದುವೇ ಸತ್ಯ, ‘ಡಿಜಿಟಲ್ ಕಾಂಡೋಮ್’ ಇದೀಗ ಬಿಡುಗಡೆಯಾಗಿದೆ. ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ಈಗ ಕಾಂಡೋಮ್‌ಗಳು ಕೂಡ ಡಿಜಿಟಲ್‌ ಆಗಿವೆ. ಆದರೆ ಅದು ಹೇಗೆ ಕೆಲಸ ಮಾಡುತ್ತದೆ? ಎಂಬುದು ನಿಮ್ಮ ತಲೆಯಲ್ಲಿ ಇರಬಹುದು. ಜರ್ಮನ್ ಲೈಂಗಿಕ ಸ್ವಾಸ್ಥ್ಯ ಬ್ರ್ಯಾಂಡ್ ಬಿಲ್ಲಿ ಬಾಯ್ ಈ ಕಾಂಡೋಮ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದು ವಾಸ್ತವವಾಗಿ ಒಂದು ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್‌ನ ಹೆಸರು ಕ್ಯಾಮ್‌ಡಮ್, ಇದು ಬ್ಲೂಟೂತ್ ತಂತ್ರಜ್ಞಾನವನ್ನು ಬಳಸಿಕೊಂಡು ನಿಮ್ಮ ಖಾಸಗಿ ಕ್ಷಣಗಳನ್ನು ಕಾಪಾಡುತ್ತದೆ. ದಂಪತಿಗಳ ನಡುವಿನ ಅನ್ಯೋನ್ಯತೆಯ ಸಮಯದಲ್ಲಿ ಖಾಸಗಿತನವನ್ನು ರಕ್ಷಿಸಿಕೊಳ್ಳಲು ಜರ್ಮನ್ ಕಂಪನಿಯು ಇದನ್ನು ಪ್ರಾರಂಭಿಸಿದೆ.

ಇದು ಮಾರುಕಟ್ಟೆಯಲ್ಲಿ ಸಿಗುವ ಸಾಮಾನ್ಯ ಕಾಂಡೋಮ್ ಅಲ್ಲ, ಇದೊಂದು ಅಪ್ಲಿಕೇಶನ್ ಆಗಿದೆ. ಇದು ನಿಮ್ಮ ಫೋನ್ ಅನ್ನು ರಹಸ್ಯ ಮೋಡ್‌ನಲ್ಲಿ ಇರಿಸುತ್ತದೆ. ಈ ಅಪ್ಲಿಕೇಶನ್ ಸಕ್ರಿಯವಾಗಿದ್ದಾಗ, ನಿಮ್ಮ ಅನುಮತಿಯಿಲ್ಲದೆ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಮತ್ತು ಮೈಕ್‌ಗೆ ಏನನ್ನೂ ರೆಕಾರ್ಡ್ ಮಾಡಲು ಸಾಧ್ಯವಾಗುವುದಿಲ್ಲ. ರೊಮ್ಯಾಂಟಿಕ್ ಸಮಯದಲ್ಲಿ ಕೆಲವರು ವಿಡಿಯೋ ಅಥವಾ ಧ್ವನಿ ರೆಕಾರ್ಡಿಂಗ್ ಮಾಡುವುದನ್ನು ಸಾಮಾನ್ಯವಾಗಿ ಕಾಣಬಹುದು. ಆದರೆ ಈ ಅಪ್ಲಿಕೇಶನ್ ಆನ್ ಮಾಡಿದರೆ ನಿಮ್ಮ ಗೌಪ್ಯತೆಯನ್ನು ಹೆಚ್ಚಿಸುತ್ತದೆ.

ಡಿಜಿಟಲ್ ಕಾಂಡೋಮ್ ನಿಮಗೆ ಸಹಾಯ ಮಾಡುತ್ತದೆ?:

ಬಿಲ್ಲಿ ಬಾಯ್ ಅವರ ಡಿಜಿಟಲ್ ಕಾಂಡೋಮ್ ಅಪ್ಲಿಕೇಶನ್ ಜನರು ಖಾಸಗಿ ಸಮಯ ಕಳೆಯುವ ಸಂದರ್ಭ ಯಾವುದೇ ಹಗರಣಗಳಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ ಬ್ಲೂಟೂತ್ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಮತ್ತು ಮೈಕ್ರೊಫೋನ್ ಅನ್ನು ಆಫ್ ಮಾಡುತ್ತದೆ. ಕಂಪನಿಯ ಪ್ರಕಾರ, ಇದು ಬಳಸಲು ತುಂಬಾ ಸುಲಭ.

ಪ್ರಸ್ತುತ, ಆಂಡ್ರಾಯ್ಡ್ ಬಳಕೆದಾರರಿಗಾಗಿ ಕ್ಯಾಮ್​ಡಮ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ. ಆ್ಯಪಲ್ ಬಳಕೆದಾರರು ಇದಕ್ಕಾಗಿ ಕಾಯಬೇಕಾಗಿದೆ. ಈ ಅಪ್ಲಿಕೇಶನ್ ಸದ್ಯಕ್ಕೆ 30 ದೇಶಗಳಲ್ಲಿ ಮಾತ್ರ ಬಳಕೆಗೆ ಲಭ್ಯವಿದೆ. ಇದರಲ್ಲಿ ಭಾರತದ ಹೆಸರಿಲ್ಲ. ಆದರೆ, ಕೆಲವೇ ಸಮಯದಲ್ಲಿ ಇದು ದೇಶದಲ್ಲೂ ಲಭ್ಯವಾಗಲಿದೆಯಂತೆ. ಇದನ್ನು ಬಳಸಲು ಮೊದಲಿಗೆ ಅಕೌಂಟ್ ರಚಿಸಬೇಕು.

ಡಿಜಿಟಲ್ ಕಾಂಡೋಮ್ ಈ ರೀತಿ ಕಾರ್ಯನಿರ್ವಹಿಸುತ್ತದೆ?:

ಡಿಜಿಟಲ್ ಕಾಂಡೋಮ್ ಅಪ್ಲಿಕೇಶನ್ ಅಂದರೆ ಕ್ಯಾಮ್​ಡಮ್ ಅನ್ನು ಬಳಸಲು, ನೀವು ಅಪ್ಲಿಕೇಶನ್ ಅನ್ನು ಪ್ರಾರಂಭಿಸಬೇಕು. ಇದರ ನಂತರ ವರ್ಚುವಲ್ ಬಟನ್ ಅನ್ನು ಸ್ವೈಪ್ ಮಾಡಿ. ಇದನ್ನು ಮಾಡಿದ ತಕ್ಷಣ, ಫೋನ್‌ನ ಕ್ಯಾಮೆರಾ ಮತ್ತು ಮೈಕ್ರೊಫೋನ್ ಆಫ್ ಆಗುತ್ತದೆ. ಬೇರೆಯವರು ಉದ್ದೇಶಪೂರ್ವಕವಾಗಿ ವಿಡಿಯೋವನ್ನು ರಹಸ್ಯವಾಗಿ ರೆಕಾರ್ಡ್ ಮಾಡಲು ಪ್ರಯತ್ನಿಸಿದರೆ, ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸಲಾಗುತ್ತದೆ. ಇದು ತಕ್ಷಣವೇ ಎಚ್ಚರಿಸುತ್ತದೆ ಮತ್ತು ಅಲಾರಾಂ ಮಾಡುತ್ತದೆ.

ಇದನ್ನೂ ಓದಿ: ʼಡಿಜಿಟಲ್‌ ಕಾಂಡೋಮ್‌ʼ ಬಿಡುಗಡೆ, ಇದರ ವಿಶೇಷತೆ ಏನ್‌ ಗೊತ್ತಾ?

ಏಕಕಾಲದಲ್ಲಿ ಬಹು ಸಾಧನಗಳಲ್ಲಿ ಕೆಲಸ ಮಾಡುತ್ತದೆ:

ಡಿಜಿಟಲ್ ಕಾಂಡೋಮ್ ಅಪ್ಲಿಕೇಶನ್ ಸಹಾಯದಿಂದ, ವಿವಿಧ ಸಾಧನಗಳ ಕ್ಯಾಮೆರಾ ಮತ್ತು ಮೈಕ್ರೊಫೋನ್ ಅನ್ನು ಒಂದೇ ಸಮಯದಲ್ಲಿ ಸ್ವಿಚ್ ಆಫ್ ಮಾಡಬಹುದು. ಪ್ರಸ್ತುತ, ಈ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಗಿದೆ. ನಿಮ್ಮ ಅನುಮತಿಯಿಲ್ಲದೆ ಖಾಸಗಿ ಕ್ಷಣಗಳಲ್ಲಿ ಏನನ್ನೂ ರೆಕಾರ್ಡ್ ಮಾಡಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಬಿಲ್ಲಿ ಬಾಯ್ ಇದನ್ನು ಪ್ರಾರಂಭಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:42 pm, Tue, 29 October 24

ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು