Viral Post: ಬೆಂಗಳೂರಿನಲ್ಲಿ ಹಿಂದಿ ಭಾಷಿಕರಿಗೆ ಸ್ವಲ್ಪ ದಯೆ ತೋರಬಹುದೇ? ಪೋಸ್ಟ್​​​ ವೈರಲ್​

|

Updated on: Aug 13, 2024 | 3:30 PM

ಉತ್ತರ ಭಾರತದ ಅನಾನಸ್ ಮಾರಾಟಗಾರರೊಬ್ಬರಿಗೆ ಸ್ಥಳೀಯ ಭಾಷೆ ಕನ್ನಡ ತಿಳಿಯದ ಕಾರಣದಿಂದಾಗಿ ಗ್ರಾಹಕ ಮಹಿಳೆಯೊಬ್ಬರು ಆತನನ್ನು ಯಾವ ರೀತಿ ಅವಮಾನಿಸಿದರು ಎಂಬುದರ ಬಗ್ಗೆ ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದು, ಸದ್ಯ ಪೋಸ್ಟ್​​ ಎಲ್ಲೆಡೆ ವೈರಲ್​ ಆಗಿದೆ.

Viral Post: ಬೆಂಗಳೂರಿನಲ್ಲಿ ಹಿಂದಿ ಭಾಷಿಕರಿಗೆ ಸ್ವಲ್ಪ ದಯೆ ತೋರಬಹುದೇ? ಪೋಸ್ಟ್​​​ ವೈರಲ್​
Image Credit source: picxy
Follow us on

ಬೆಂಗಳೂರಿನಲ್ಲಿ ಹಿಂದಿ ಭಾಷಿಕರಿಗೆ ಸ್ವಲ್ಪ ದಯೆ ತೋರಬಹುದೇ? ಎಂದು ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಫೋಸ್ಟ್​ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಬೆಂಗಳೂರು ನಿವಾಸಿಯಾದ ವ್ಯಕ್ತಿಯೊಬ್ಬರು ಹಣ್ಣಿನ ಮಾರುಕಟ್ಟೆಯಲ್ಲಿ ನಡೆದು ಘಟನೆಯೊಂದರ ಬಗ್ಗೆ ಪೋಸ್ಟ್​​ನಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಭಾರತದ ಅನಾನಸ್ ಮಾರಾಟಗಾರರೊಬ್ಬರಿಗೆ ಸ್ಥಳೀಯ ಭಾಷೆ ಕನ್ನಡ ತಿಳಿಯದ ಕಾರಣದಿಂದಾಗಿ ಗ್ರಾಹಕ ಮಹಿಳೆಯೊಬ್ಬರು ಆತನನ್ನು ಯಾವ ರೀತಿ ಅವಮಾನಿಸಿದರು ಎಂಬುದರ ಬಗ್ಗೆ ಬರೆದುಕೊಂಡಿದ್ದಾರೆ.

ಇಸ್ರೋ ಲೇಔಟ್‌ನಲ್ಲಿ ನಡೆದ ಘಟನೆಯನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ನಾನು ಅನಾನಸ್​​​ ಖರೀದಿಸಲು ಬಂದ ವೇಳೆ ಮಹಿಳೆಯೊಬ್ಬಳು ಬಂದಿದ್ದು, ಆಕೆ ಮಾರಾಟಗಾರನಲ್ಲಿ ಒಂದಕ್ಕೆ ಎಷ್ಟು ಎಂದು ಪ್ರಶ್ನಿಸಿದ್ದಾಳೆ . ಈವೇಳೆ ಮಾರಾಟಗಾರ “40 ಕಾ ಎಕ್ (ಒಂದಕ್ಕೆ 40 ರೂ)” ಮತ್ತು “100 ಕಾ 3 (ಮೂರಕ್ಕೆ ರೂ 100 ರೂ.). ಎಂದು ಹೇಳಿದ್ದಾನೆ” . ಆದರೆ ಇದು ಮಹಿಳೆಗೆ, ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಪುನರಾವರ್ತಿಸಲು ಕೇಳಿಕೊಂಡಿದ್ದಾಳೆ. ಆಗ ರೆಡ್ಡಿಟರ್ ಮಧ್ಯಪ್ರವೇಶಿಸಿ, ಮಾರಾಟಗಾರರು ಹೇಳಿದ್ದನ್ನು ಕನ್ನಡದಲ್ಲಿ ವಿವರಿಸಿದ್ದಾನೆ.

ಆದರೆ, ಮಹಿಳೆ ರೆಡ್ಡಿಟರ್‌ಗೆ ಕೃತಜ್ಞತೆ ಸಲ್ಲಿಸುವ ಬದಲು, ಕನ್ನಡ ಗೊತ್ತಿಲ್ಲ ಎಂದ ಮಾರಾಟಗಾರನನ್ನು ನಿಂದಿಸಿದ್ದಾಳೆ. ಪ್ರತಿಕ್ರಿಯೆಯಾಗಿ, ಮಾರಾಟಗಾರ ಅವಳಿಗೆ ಕ್ಷಮೆಯಾಚಿಸಿದ್ದಾನೆ. ಬೆಂಗಳೂರಿಗೆ ಬಂದು ಕೇವಲ ಒಂದು ವಾರ ಆಗಿದ್ದರಿಂದ ನನಗೆ ಕನ್ನಡ ಬರಲ್ಲ, ಮುಂದಿನ ದಿನಗಳಲ್ಲಿ ಕಲಿಯುವೆ ಎಂದು ಹೇಳಿ ಮಾರಾಟಗಾರ ಕ್ಷಮೆ ಯಾಚಿಸಿದ್ದಾನೆ.

ಇದನ್ನೂ ಓದಿ: ವರದಕ್ಷಿಣೆಗಾಗಿ ಹೆಂಡತಿಯ ಮರ್ಮಾಂಗದೊಳಗೆ ಲಟ್ಟಣಿಗೆ ತುರುಕಿ ಹಿಂಸಿಸಿ ಕೊಂದ ಗಂಡ

ಈ ಪೋಸ್ಟ್​​ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಬೆಂಗಳೂರಿನಲ್ಲಿರುವ ಪ್ರತಿಯೊಬ್ಬರೂ ನೀವು ಕನ್ನಡ ಕಲಿಯಬೇಕೆಂದು ಬಯಸುತ್ತಾರೆ ಆದರೆ ನಿಮಗೆ ಕಲಿಸಲು ಯಾರೂ ಬಯಸುವುದಿಲ್ಲ ಎಂದು ನನಗೆ ಅರ್ಥವಾಯಿತು “ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Tue, 13 August 24