AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕ ಕಲ್ಲಿನಂತೆ ಕಾಣುವ ಇದರ ಬೆಲೆ 50 ಗ್ರಾಂಗೆ 850 ಕೋಟಿ ರೂ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 850 ಕೋಟಿ ರೂ. ಬೆಲೆಬಾಳುವ ಕ್ಯಾಲಿಫೋರ್ನಿಯಂ ಸ್ಟೋನ್​​ ಅನ್ನು ಕಳ್ಳಸಾಗಣೆ ಮಾಡುತ್ತಿದ್ದ ತಂಡವನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಇದು ನೈಸರ್ಗಿಕವಾಗಿ ದೊರೆಯುವ ವಸ್ತುವಲ್ಲ. ಪ್ರಯೋಗಾಲಯಗಳಲ್ಲಿ ಅಧಿಕ ಒತ್ತಡದ ಐಸೊಟೋಪ್ ರಿಯಾಕ್ಟರ್‌ಗಳಲ್ಲಿ ಇದನ್ನು ತಯಾರಿಸಲಾಗುತ್ತದೆ.

ಚಿಕ್ಕ ಕಲ್ಲಿನಂತೆ ಕಾಣುವ ಇದರ ಬೆಲೆ 50 ಗ್ರಾಂಗೆ 850 ಕೋಟಿ ರೂ.
Californium Worth Rs 850 Crores Seized
ಅಕ್ಷತಾ ವರ್ಕಾಡಿ
|

Updated on:Aug 13, 2024 | 5:51 PM

Share

ಬೆಲೆಬಾಳುವ ಕ್ಯಾಲಿಫೋರ್ನಿಯಂ ಕಲ್ಲನ್ನು ಕಳ್ಳಸಾಗಣೆ ಮಾಡುತ್ತಿದ್ದ ತಂಡವನ್ನು ಬಿಹಾರ ಪೊಲೀಸರು ಜಾಣತನದಿಂದ ಬಂಧಿಸಿದ್ದಾರೆ. ಅವರಿಂದ 50 ಗ್ರಾಂ ಕ್ಯಾಲಿಫೋರ್ನಿಯಂ ವಶಪಡಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 850 ಕೋಟಿ ರೂ. ಬೆಲೆಬಾಳುವ ವಿಕಿರಣಶೀಲ ವಸ್ತುವನ್ನು ಮಾರಾಟ ಮಾಡಲು ಪ್ರಯತ್ನಿಸಿದರು. ಇದೀಗ 50 ಗ್ರಾಂ ತೂಕವಿರುವ ಕೋಟಿ ರೂ. ಬೆಲೆಬಾಳುವ ವಸ್ತುವನ್ನು ಕಳ್ಳಸಾಗಣೆ ಮಾಡುತ್ತಿದ್ದ ತಂಡವನ್ನು ಬಂಧಿಸಿರುವುದಾಗಿ ಗೋಪಾಲಗಂಜ್ ಎಸ್ಪಿ ಹೇಳಿದ್ದಾರೆ.

ಗೋಪಾಲಗಂಜ್ ಎಸ್ಪಿ ಸ್ವರ್ಣ್ ಪ್ರಭಾತ್ ನೀಡಿರುವ ವಿವರಗಳ ಪ್ರಕಾರ ಅತ್ಯಮೂಲ್ಯ ವಸ್ತು ಕಳ್ಳಸಾಗಣೆಯಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿದ್ದಂತೆ ಜಿಲ್ಲಾ ತನಿಖಾ ದಳ, ವಿಶೇಷ ಕಾರ್ಯಪಡೆ ಸೇರಿದಂತೆ ವಿವಿಧ ವಿಶೇಷ ಇಲಾಖೆಗಳು ಜಂಟಿಯಾಗಿ ಅವರನ್ನು ಹಿಡಿಯಲು ಪ್ರಯತ್ನಿಸಿದೆವು. ಕುಚೈಕೋಟ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ನೇತೃತ್ವದಲ್ಲಿ ವಿಶೇಷ ತಂಡವನ್ನು ಬಿಹಾರ-ಉತ್ತರ ಪ್ರದೇಶ-ಬಲ್ತಾರಿ ಗಡಿಯಲ್ಲಿ ನಿಯೋಜಿಸಲಾಗಿತ್ತು. ಅದೇ ರೀತಿ ಗುರುವಾರ ಸಂಜೆ ಮೋಟಾರ್ ಬೈಕ್ ನಲ್ಲಿ ಬರುತ್ತಿದ್ದ ಇಬ್ಬರನ್ನು ತಪಾಸಣೆ ನಡೆಸಿದಾಗ ಕಳ್ಳಸಾಗಣೆ ಮಾಡುತ್ತಿದ್ದ ತಂಡ ಸಿಕ್ಕಿಬಿದ್ದಿದ್ದಾರೆ. ಅವರಿಂದ ನಾಲ್ಕು ಮೊಬೈಲ್ ಫೋನ್ ಮತ್ತು 50 ಗ್ರಾಂ ಕ್ಯಾಲಿಫೋರ್ನಿಯಂ ಅನ್ನು ವಶಪಡಿಸಲಾಗಿದೆ.

ಇದನ್ನೂ ಓದಿ: ವರದಕ್ಷಿಣೆಗಾಗಿ ಹೆಂಡತಿಯ ಮರ್ಮಾಂಗದೊಳಗೆ ಲಟ್ಟಣಿಗೆ ತುರುಕಿ ಹಿಂಸಿಸಿ ಕೊಂದ ಗಂಡ

ಕ್ಯಾಲಿಫೋರ್ನಿಯಮ್ ವಾಸ್ತವವಾಗಿ ಅಪರೂಪದ ವಿಕಿರಣಶೀಲ ವಸ್ತುವಾಗಿದೆ. ಇದು ನೈಸರ್ಗಿಕವಾಗಿ ದೊರೆಯುವ ವಸ್ತುವಲ್ಲ. ಪ್ರಯೋಗಾಲಯಗಳಲ್ಲಿ ಅಧಿಕ ಒತ್ತಡದ ಐಸೊಟೋಪ್ ರಿಯಾಕ್ಟರ್‌ಗಳಲ್ಲಿ ಇದನ್ನು ತಯಾರಿಸಲಾಗುತ್ತದೆ. ಅದನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಎರಡು ಪರಮಾಣು ರಿಯಾಕ್ಟರ್‌ಗಳಿವೆ. ಒಂದು ಅಮೆರಿಕದಲ್ಲಿ ಮತ್ತು ಇನ್ನೊಂದು ರಷ್ಯಾದಲ್ಲಿದೆ. ಇದನ್ನು ಮೊದಲು 1950 ರಲ್ಲಿ ಉತ್ಪಾದಿಸಲಾಯಿತು. ಈ ವಿಕಿರಣಶೀಲ ವಸ್ತುವನ್ನು ಭೂಗತ ಚಿನ್ನ ಮತ್ತು ಬೆಳ್ಳಿಯ ನಿಕ್ಷೇಪಗಳ ಪರಿಶೋಧನೆ ಮತ್ತು ತೈಲ ಮತ್ತು ನೀರಿನ ಪದರಗಳನ್ನು ಗುರುತಿಸಲು ಬಳಸಲಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Tue, 13 August 24