Viral Video : ನಾನು ಸೊಕ್ಕಿನ ಮುದ್ದು ಇರಬಹುದು, ಕಣ್ಣು ತೆಗೆದೇ ಹಾಲು ಕುಡಿಯೋ ಭಂಡಜೀವ ಇರಬಹುದು, ದಿನಕ್ಕೆ ಇಪ್ಪತ್ತು ತಾಸು ಗಡದ್ದಾಗಿ ನಿದ್ದೆ ಹೊಡಿಯೋವನೇ ಇರಬಹುದು. ಆದರೆ ನನಗೂ ಸ್ವಲ್ಪ ಜವಾಬ್ದಾರಿ ಅನ್ನೋದು ಇದೆ. ನಮ್ಮ ಅಮ್ಮ ಸ್ನಾನ ಮಾಡೋದಕ್ಕೆ ಹೋಗಿದಾಳೆ. ಮಗೂನ್ನ ಸ್ವಲ್ಪ ತೂಗು ಅಂದಿದಾಳೆ. ಹಾಗಾಗಿ ನಾನು ಬಿಟ್ಟೂಬಿಡದೇ ತೂಗ್ತಾ ಇದೀನಿ. ಆದರೆ ನೀವೆಲ್ಲ ತಲೆಗೊಂದೊಂದು ಮಾತಾಡ್ತಿದೀರಿ. ಪ್ರೀತಿ ಇದ್ದಲ್ಲಿ ಜವಾಬ್ದಾರಿ ಇರತ್ತೆ ಅದು ಗೊತ್ತಾ ನಿಮಗೆ?
ಸುಮ್ನಿರಪ್ಪಾ ನಿನ್ನ ಉಗುರು ಆ ಬೆಲ್ಟ್ನಲ್ಲಿ ಸಿಕ್ಕಾಕ್ಕೊಂಡಿದೆ ಎಂದು ಕೆಲವರು ನಗುತ್ತಿದ್ದಾರೆ. ಓಹ್ ಬೇಬಿ ಸಿಟರ್ ಕ್ಯಾಟ್ ಎಂದು ಕೆಲವರು ಹೊಗಳ್ತಿದಾರೆ. ಬಾಣಂತನ ಮಾಡ್ತಿದೆ ಈ ಬೆಕ್ಕು ಎಂದಿದ್ದಾರೆ ಮತ್ತಷ್ಟು ಜನ. ನಮ್ಮ ಮನೆಯ ಮಗುವಿಗೆ ನೀನೇ ಬೇಬಿ ಸಿಟರ್, ಅಲ್ಲಿಂದ ಬೇಗ ನಮ್ಮನೆಗೆ ಬಂದುಬಿಡು ಎಂದಿದ್ದಾರೆ ಯಾರೋ ಒಬ್ಬರು.
ಯಾರ್ಯಾರೂ ಏನೇನು ಅಂತೀರೋ ಅನ್ರಿ. ನಾನಂತೂ ನನ್ನ ಕೆಲಸ ಮಾಡ್ತೀನಿ. ಅಲ್ಲಾ ನಿಮಗೆ ಸ್ವಲ್ಪನೂ ಕರುಣೆನೇ ಇಲ್ಲವಾ? ನನಗೂ ಹೀಗೆ ಹಗಲು ರಾತ್ರಿ ಮಗುವನ್ನು ನೋಡಿಕೊಂಡು ಸುಸ್ತು, ಬೇಜಾರು ಆಗಿರತ್ತೆ. ಸ್ವಲ್ಪ ಆಚೆ ಕರೆದುಕೊಂಡು ಹೋಗಬೇಕು ಅನ್ಸಲ್ವಾ ನಿಮಗೆ? ಎರಡೂವರೆ ಲಕ್ಷ ಜನರು ಈ ವಿಡಿಯೋ ಇಷ್ಟಪಟ್ಟಿದೀರಿ ಮತ್ತೆ.
ಮತ್ತೆ ಯಾಕೆ ಅಷ್ಟು ದೊಡ್ಡದೊಡ್ಡ ಕಣ್ಣು ಬಿಟ್ಟಿದೀಯಾ ಅಂತ ಬೇರೆ ಕೇಳ್ತಿದೀರಿ. ಕಂಗಾಲಾಗಿದೀನಿ! ಅರ್ಥ ಆಯ್ತಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ