Cat : ಕೆಲ ಬೆಕ್ಕುಗಳು ಇಡೀ ದಿನ ತನ್ನ ಪೋಷಕರಿಂದ ಮುದ್ದು ನಿರೀಕ್ಷಿಸುತ್ತಲೇ ಇರುತ್ತವೆ. ಇನ್ನೂ ಕೆಲ ಬೆಕ್ಕುಗಳು ತಮ್ಮನ್ನು ಸ್ಪರ್ಶಿಸಲೂ ತನ್ನ ಅನುಮತಿ ಕೇಳಬೇಕು ಎನ್ನುವಷ್ಟರ ಮಟ್ಟಿಗೆ ಗಂಭೀರವಾಗಿ ವರ್ತಿಸುತ್ತವೆ. ಈಗ ಇಲ್ಲಿದೆಯಲ್ಲ, ನೀವೇನೇ ಮಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ನೀವದೆಷ್ಟೇ ಪ್ರೀತಿಸಲು ನೋಡಿದರೂ ನನಗದು ಬೇಕಾಗಿಯೇ ಇಲ್ಲ ಎಂಬ ವಿಚಿತ್ರ ಅಸಡ್ಡೆಯಲ್ಲಿ ಕುಳಿತಿರುವಂತಿದೆ. ಯಾಕೆ ಹೀಗೆ? ನಿಮಗೇನಾದರೂ ಅರ್ಥವಾಗುತ್ತಾ ನೋಡಿ. ರೆಡ್ಡಿಟ್ನಲ್ಲಿರುವ ಈ ವಿಡಿಯೋ ಸುಮಾರು 2,200 ವೋಟ್ ಗಳಿಸಿದೆ. 14 ಗಂಟೆಗಳ ಹಿಂದೆ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಕಿಟಕಿಯಿಂದ ಆಚೆ ಅದೇನು ಬ್ರಹ್ಮಾಂಡ ಕಾಣುತ್ತಿದೆಯೋ ದೇವರೇ ಬಲ್ಲ. ಅದರ ಪೋಷಕರು ಅದನ್ನು ಮೆಲ್ಲ ಮುಟ್ಟಿ, ತಿವಿದು ಏನೆಲ್ಲ ಮಾಡಿದರೂ ಕಣ್ಣೂ ಪಿಳುಕಿಸದಷ್ಟು ಕೋಪ (!) ನುಂಗಿ ಕುಳಿತಿದೆ. ಆದರೆ ಹೀಗದು ಕಣ್ಣು ಅಗಲಿಸಿಕೊಂಡು ಕುಳಿತಿರುವುದು ಅದರ ಸೌಂದರ್ಯ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಉದ್ದೇಶಪೂರ್ವಕವಾಗಿ ಹೀಗೆ ಕುಳಿತಿದೆಯೇ, ತಮಾಷೆ ಮಾಡುತ್ತಿದೆಯೇ ಎಂದೂ ಕೆಲವರು ಪ್ರಶ್ನಿಸಿದ್ದಾರೆ. ಬೆಕ್ಕಿನ ರೂಪದಲ್ಲಿರುವ ಗೂಬೆ ಎಂದೂ ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಆನ್ ಆಫ್ ಮಾಡಲು ಪ್ರಯತ್ನಿಸುತ್ತಿದ್ದೀರಾ ಎಂದು ಇನ್ನೂ ಯಾರೋ ಒಬ್ಬರು ಕೇಳಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ