ಗಾಢ ನಿದ್ದೆಯಲ್ಲಿದ್ದ ಯುವಕನ ಮನೆಯೊಳಗೆ ಕರಡಿಯೊಂದು ನುಗ್ಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಯುವಕ ಕಂಬಳಿ ಸುತ್ತಿಕೊಂಡು ಗೊರಕೆ ಹೊಡೆಯುತ್ತಾ ಮಲಗಿದ್ದು, ದೈತ್ಯ ಕರಡಿ ಮನೆಯೊಳಗೆ ನುಗ್ಗಿ ಹೊರ ಹೋಗಲು ದಾರಿ ಕಾಣದೇ ಮನೆಯೊಳಗೆ ಏನೋ ಹುಡುಕಿತ್ತಿದ್ದಂತೆ ಸುತ್ತುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕರಡಿ ಹೊರಗಿನಿಂದ ಬಂದು ಬಾಗಿಲು ತೆರೆದು ಯಾವುದೇ ಹಿಂಜರಿಕೆಯಿಲ್ಲದೆ ಮನೆಯೊಳಗೆ ನುಗ್ಗಿದೆ. ಕರಡಿ ಕೋಣೆಯೊಳಗೆ ಬಂದು ಕೋಣೆಯ ಸುತ್ತಲೂ ಮೇಜಿನ ಕೆಳಗೆ, ಏನೋ ಹುಡುಕುತ್ತಿರುವುದು ಕಂಡುಬಂದಿದೆ. ಇದ್ದಕ್ಕಿದ್ದಂತೆ ನಿದ್ದೆಯಿಂದ ಎದ್ದ ಯುವಕನಿಗೆ ಮೊದಲು ಏನೂ ಅರ್ಥವಾಗಲಿಲ್ಲ. ಬಳಿಕ ಕಣ್ಣು ತೆರೆದು ಗಾಬರಿಯಾದ ಯುವಕ, ಕೂಡಲೇ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.
He almost lost his phone..wait for it..🐻📱🤦😏😅 pic.twitter.com/ZJpvP5DLoP
— 𝕐o̴g̴ (@Yoda4ever) August 26, 2024
ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದೇವೆ, ಪ್ರೀತಿಗಾಗಿ ಸಾಯುತ್ತಿದ್ದೇವೆ… ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ನವದಂಪತಿ
ಗಾಬರಿಗೊಂಡ ಯುವಕ ತಕ್ಷಣ ಅಲ್ಲಿಂದ ತನ್ನ ಮೊಬೈಲ್ ತೆಗೆದುಕೊಂಡು ಕ್ಷಣಮಾತ್ರದಲ್ಲಿ ಅಲ್ಲಿಂದ ಓಡಿ ಹೋಗಿದ್ದಾನೆ. ಕರಡಿ ಕೂಡ ಅವನನ್ನು ಹಿಂಬಾಲಿಸಿಕೊಂಡು ಹೋಗಿದ್ದು, ವಿಡಿಯೋದ ಕೊನೆಯಲ್ಲಿ ಕರಡಿ ಕೂಡ ಮನೆಯಿಂದ ಹೊರಬರುತ್ತಿರುವುದು ಸೆರೆಯಾಗಿದೆ.
@Yoda4ever ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಎಲ್ಲೆಡೆ ವೈರಲ್ ಆಗಿದೆ. ಆಗಸ್ಟ್ 26ರಂದು ಹಂಚಿಕೊಂಡಿರುವ ವಿಡಿಯೋ ಒಂದೇ ದಿನದಲ್ಲಿ 80 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ