Paralympic 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಗೇಮ್ ಆರಂಭ: ಅದ್ಭುತ ಡೂಡಲ್ ಹಂಚಿಕೊಂಡ ಗೂಗಲ್
Paralympic Google Doodle: ಯಶಸ್ವಿಯಾಗಿ ಒಲಿಂಪಿಕ್ಸ್ ಆಯೋಜಿಸಿದ ಪ್ಯಾರಿಸ್ ಇದೀಗ 17 ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ ಕ್ರೀಡೆಗೆ ಸಜ್ಜಾಗಿದೆ. ಕಾನ್ಕಾಎಡ್ ಚೌಕದಲ್ಲಿ ಇಂದು (ಆಗಸ್ಟ್ 28) ನಡೆಯಲಿರುವ ಅದ್ಧೂರಿ ಆರಂಭೋತ್ಸವದೊಂದಿಗೆ ವಿಕಲಚೇತನ ಕ್ರೀಡಾಪಟುಗಳ ಜಾಗತಿಕ ಪ್ಯಾರಾಲಿಂಪಿಕ್ಸ್ ಕ್ರೀಡೆಗೆ ಚಾಲನೆ ಸಿಗಲಿದೆ. ಈ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಗೌರವಾರ್ಥವಾಗಿ ಗೂಗಲ್ ವಿಶೇಷ ಡೂಡಲ್ ಒಂದನ್ನು ಹಂಚಿಕೊಂಡಿದೆ.
ಬಹುನಿರೀಕ್ಷಿತ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು (ಆಗಸ್ಟ್ 28) ಅಧಿಕೃತ ಚಾಲನೆ ಸಿಗಲಿದೆ. ಯಶಸ್ವಿಯಾಗಿ ಒಲಿಂಪಿಕ್ಸ್ ಆಯೋಜಿಸಿದ ಪ್ಯಾರಿಸ್ ಇದೀಗ 17 ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ ಕ್ರೀಡೆಗೆ ಸಜ್ಜಾಗಿದೆ. ಕಾನ್ಕಾಎಡ್ ಚೌಕದಲ್ಲಿ ಇಂದು ನಡೆಯಲಿರುವ ಅದ್ಧೂರಿ ಆರಂಭೋತ್ಸವದೊಂದಿಗೆ ವಿಕಲಚೇತನ ಕ್ರೀಡಾಪಟುಗಳ ಜಾಗತಿಕ ಪ್ಯಾರಾಲಿಂಪಿಕ್ಸ್ ಕ್ರೀಡೆಗೆ ಚಾಲನೆ ಸಿಗಲಿದೆ. ಈಗಾಗಲೇ ಜೀವನದ ಹೋರಾಟಲ್ಲಿ ಗೆದ್ದ ಪ್ಯಾರಾ ಅಥ್ಲೀಟ್‌ಗಳು ಇದೀಗ ಇಂದಿನಿಂದ ನಡೆಯಲಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತಮ್ಮ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಅನಾವರಣ ಮಾಡಲು ಸಜ್ಜಾಗಿದ್ದಾರೆ.
ಈ ಪ್ಯಾರಾಲಿಂಪಿಕ್ಸ್ ಕ್ರೀಡೆಯನ್ನು ಸಂಭ್ರಮಿಸಲು ಗೂಗಲ್ ವಿಶೇಷ ಡೂಡಲ್ ಒಂದನ್ನು ರಚಿಸಿದೆ. ಗೂಗಲ್ ತನ್ನ ವಿಶೇಷ ಡೂಡಲ್‌ಗಳಿಂದಾಗಿ ಆಗಾಗ್ಗೆ ಚರ್ಚೆಯಲ್ಲಿ ಇರುತ್ತದೆ. ಪ್ರತಿ ವಿಶೇಷ ದಿನಗಳಂದು ಗೂಗಲ್ ಭಿನ್ನ ವಿಭಿನ್ನ ಡೂಡಲ್‌ಗಳನ್ನು ರಚಿಸುತ್ತದೆ. ಈ ಹಿಂದೆ ಪ್ಯಾರಿಸ್ ಒಲಿಂಪಿಕ್ಸ್ 2024 ಸಂದರ್ಭದಲ್ಲಿ ಬಗೆ ಬಗೆಯ ಡೂಡಲ್‌ಗಳನ್ನು ರಚಿಸುವ ಮೂಲಕ ಗೂಗಲ್ ಸುದ್ದಿಯಲ್ಲಿತ್ತು. ಅದೇ ರೀತಿ ಇಂದು ಕೂಡಾ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ಗೇಮ್ಸ್‌ಗೆ ಸಂಬಂಧಿಸಿದ ವಿಶೇಷ ಡೂಡಲ್ ಒಂದನ್ನು ಗೂಗಲ್ ಹಂಚಿಕೊಂಡಿದೆ. ಗೂಗಲ್ ತನ್ನ ಸರ್ಚ್ ಇಂಜಿನ್ ಲೋಗೋದಲ್ಲಿ ಅನಿಮೇಟೆಡ್ ಪಕ್ಷಿಗಳನ್ನು ಪ್ರದರ್ಶಿಸುವ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡೆಯನ್ನು ಸಂಭ್ರಮಿಸಿದೆ.
ಇದನ್ನೂ ಓದಿ: ಗರ್ಭಿಣಿಯಾಗಲು ವಿದೇಶಿ ಮಹಿಳೆಯರು ಭಾರತದ ಈ ಗ್ರಾಮಕ್ಕೆ ಬರುತ್ತಾರೆ, ಇದರ ಹಿಂದಿನ ಕಾರಣ ಎನ್ ಗೊತ್ತಾ?
ಈ ಕ್ರೀಡೆಯಲ್ಲಿ ಭಾರತದ ಪ್ಯಾರಾ ಅಥ್ಲೀಟ್‌ಗಳು ಭಾಗವಹಿಸಲಿದ್ದು, ಭಾರತದ ತಂಡದಲ್ಲಿ ಒಟ್ಟು 84 ಸ್ಪರ್ಧಿಗಳು ಇರಲಿದ್ದಾರೆ. ಕಳೆದ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡೆಯಲ್ಲಿ 19 ಪದಕಗಳನ್ನು ಗೆದ್ದಿದ್ದ ಭಾರತ ಈ ಬಾರಿ 25 ಪದಕಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ