Video Viral: 7ನೇ ಮಹಡಿಯಿಂದ ಬೀದಿನಾಯಿಯನ್ನು ಎಸೆದು ವಿಕೃತಿ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಟ್ಟಡದ ಏಳನೇ ಮಹಡಿಯಿಂದ ಬೀದಿ ನಾಯಿಯನ್ನು ಎಸೆಯಲಾಗಿದೆ. ಪರಿಣಾಮವಾಗಿ ಸ್ಥಳದಲ್ಲೇ ನಾಯಿ ಸಾವನ್ನಪ್ಪಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆಯನ್ನು ಪೀಪಲ್ ಫಾರ್ ಅನಿಮಲ್ಸ್‌ನ ಸುರಭಿ ರಾವತ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇಂತಹ ಹೀನಾ ಕೃತ್ಯಗೈದ್ದವರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Video Viral: 7ನೇ ಮಹಡಿಯಿಂದ ಬೀದಿನಾಯಿಯನ್ನು ಎಸೆದು ವಿಕೃತಿ; ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸಾಂದರ್ಭಿಕ ಚಿತ್ರ

Updated on: Jun 25, 2024 | 11:07 AM

ಉತ್ತರ ಪ್ರದೇಶ: 7ನೇ ಮಹಡಿಯಿಂದ ಬೀದಿನಾಯಿಯನ್ನು ಎಸೆದು ವಿಕೃತಿ ಮರೆದಿರುವ ಘಟನೆ ನಡೆದಿದೆ. ಕಳೆದ ಗುರುವಾರ(ಜೂ. 20) ನೋಯ್ಡಾದ ಸೆಕ್ಟರ್ 1 ರ ವಿಹಾನ್ ಹೆರಿಟೇಜ್ ಸಫೈರ್ ಸೊಸೈಟಿಯಲ್ಲಿ ಈಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಹೀನಾ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 7ನೇ ಮಹಡಿಯಿಂದ ಬಿದ್ದ ರಭಸಕ್ಕೆ ನಾಯಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಗ್ರೇಟರ್ ನೋಯ್ಡಾದ ವಿಹಾನ್ ಹೆರಿಟೇಜ್ ಸಫೈರ್ ಸೊಸೈಟಿಯ ಕಟ್ಟಡದ ಏಳನೇ ಮಹಡಿಯಿಂದ ಬೀದಿ ನಾಯಿಯನ್ನು ಎಸೆಯಲಾಗಿದೆ. ಪರಿಣಾಮವಾಗಿ ತಕ್ಷಣ ಸಾವನ್ನಪ್ಪಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆಯನ್ನು ಪೀಪಲ್ ಫಾರ್ ಅನಿಮಲ್ಸ್‌ನ ಸುರಭಿ ರಾವತ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇಂತಹ ಹೀನಾ ಕೃತ್ಯಗೈದ್ದವರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಬೃಹತ್‌ ಗಾಳಿಪಟದೊಂದಿಗೆ ಆಕಾಶಕ್ಕೆ ಹಾರಿದ ಮೂರು ವರ್ಷದ ಮಗು

ವಿಡಿಯೋ ಇಲ್ಲಿದೆ ನೋಡಿ:

ಕಟ್ಟಡದಿಂದ ನಾಯಿಯನ್ನು ಯಾರು ಎಸೆದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಪರಾಧಿಯನ್ನು ಗುರುತಿಸಲು ಪೊಲೀಸರು ಪ್ರಸ್ತುತ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. @surbhirawatpfa ಟ್ವಿಟರ್​​ ಖಾತೆಯಲ್ಲಿ ಜೂನ್​​ 22ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 39 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ