Viral Video: ವಿಕೃತಿಯ ಪರಮಾವಧಿ; ಸತ್ತ ನಾಯಿಯನ್ನು ಕಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಪಾಪಿ

ಪ್ರಸ್ತುತ ಸಮಾಜದಲ್ಲಿ ಮನುಷ್ಯನಲ್ಲಿ ಮಾನವೀಯತೆ ಮರೆಯಾಗುತ್ತಿದ್ದು, ಅವನು ತನ್ನ ಮೃಗೀಯ ವರ್ತನೆಯಿಂದ ಅಟ್ಟಹಾಸ ಮೆರೆಯುತ್ತಿದ್ದಾನೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ದುಷ್ಟನೊಬ್ಬ ಸತ್ತ ಬೀದಿ ನಾಯಿಯನ್ನು ಕಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದಿದ್ದಾನೆ. ಈ ಅಮಾನವೀಯ ದೃಶ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

Viral Video: ವಿಕೃತಿಯ ಪರಮಾವಧಿ;  ಸತ್ತ ನಾಯಿಯನ್ನು ಕಾರಿಗೆ ಕಟ್ಟಿ  ರಸ್ತೆಯಲ್ಲಿ ಎಳೆದೊಯ್ದ ಪಾಪಿ
Follow us
| Updated By: ಅಕ್ಷತಾ ವರ್ಕಾಡಿ

Updated on: Jun 23, 2024 | 5:34 PM

ಆಧುನಿಕತೆಯ ಭರದಲ್ಲಿ ಇತ್ತೀಚಿಗೆ ಮನುಷ್ಯನಲ್ಲಿ ಮಾನವೀಯತೆ, ಮನುಷ್ಯತ್ವ ಎನ್ನುವುದು ಮರೆಯಾಗುತ್ತಿದೆ. ಜನರು ತಮ್ಮ ಮೌಲ್ಯಗಳನ್ನು ಮರೆತು ಮೃಗಗಳಂತೆ ವರ್ತಿಸುತ್ತಿದ್ದಾರೆ. ಅದರಲ್ಲೂ ಈ ಪಾಪಿ ಮನುಷ್ಯ ಬೀಡಾಡಿ ಪ್ರಾಣಿಗಳ ವಿಷಯದಲ್ಲಿ ತುಸು ಹೆಚ್ಚೇ ಮೃಗೀಯ ರೀತಿಯಲ್ಲಿ ವರ್ತಿಸುತ್ತಿದ್ದಾನೆ. ಈ ಮುಗ್ಧ ಜೀವಿಗಳಿಗೆ ಕಲ್ಲು ಹೊಡೆದು, ಅವುಗಳಿಗೆ ವಿಷ ಉಣಿಸಿ, ಹೀಗೆ ನಾನಾ ರೀತಿಯಲ್ಲಿ ಅವುಗಳಿಗೆ ನೋವುಂಟು ಮಾಡಿ ಅದರಲ್ಲಿ ವಿಕೃತ ಖುಷಿಯನ್ನು ಕಾಣುತ್ತಿದ್ದಾನೆ. ಇದೇ ರೀತಿಯ ಅಮಾನವೀಯ ಘಟನೆಯೊಂದು ನಡೆದಿದ್ದು, ದುಷ್ಟನೊಬ್ಬ ಸತ್ತ ನಾಯಿಯನ್ನು ಕಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ಯುವ ಮೂಲಕ ವಿಕೃತಿ ಮೆರೆದಿದ್ದಾನೆ. ಈ ಅಮಾನವೀಯ ದೃಶ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಅಮಾನವೀಯ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಸತ್ತ ಬೀದಿನಾಯಿಯನ್ನು ತನ್ನ ಕಾರಿನ ಹಿಂಬದಿಗೆ ಕಟ್ಟಿ ಅದನ್ನು ರಸ್ತೆಯಲ್ಲಿ ಎಳೆದೊಯ್ದು ವಿಕೃತಿ ಮೆರೆದಿದ್ದಾನೆ. ಕೌಶಿಕ್ ಕಾಂತೇಚಾ (@kaushikdd) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಅಹಮದಾಬಾದ್ನಲ್ಲಿ ಮಾನವೀಯತೆ ಮರೆತ ವ್ಯಕ್ತಿ… ಸತ್ತ ನಾಯಿಯನ್ನು ಗಾಡಿಗೆ ಕಟ್ಟಿ ಈ ರೀತಿ ಎಳೆದುಕೊಂಡು ಹೋಗುವುದು ಎಷ್ಟು ಸೂಕ್ತ?” ಎಂಬ ಶಿರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಗುವಿನ ಬೆಡ್‌ ರೂಂನಲ್ಲಿ ಕಂಬಳಿಯೊಳಗೆ ಬೆಚ್ಚಗೆ ಮಲಗಿದ್ದ ವಿಷಕಾರಿ ಹಾವು

ವೈರಲ್ ವಿಡಿಯೋದಲ್ಲಿ ಸತ್ತ ನಾಯಿಯನ್ನು ಇನೋವಾ ಕಾರಿಗೆ ಕಟ್ಟಿ, ಆ ಶ್ವಾನವನ್ನು ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ಅಮಾನವೀಯ ದೃಶ್ಯವನ್ನು ಕಾಣಬಹುದು. ಜೂನ್ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 18 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇಂತಹ ಮೃಗೀಯ ಜನರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ