Video Viral: ಮಗುವಿನ ಬೆಡ್‌ ರೂಂನಲ್ಲಿ ಕಂಬಳಿಯೊಳಗೆ ಬೆಚ್ಚಗೆ ಮಲಗಿದ್ದ ವಿಷಕಾರಿ ಹಾವು

ಮಗುವಿನ ಬೆಡ್​​​ ಮೇಲೆ ಇಟ್ಟಿದ್ದ ಗೊಂಬೆಯ ಹಿಂಭಾಗದಲ್ಲಿ ಹಾವೊಂದು ಸುರುಳಿ ಹಾಕಿ ಬೆಚ್ಚಗೆ ಮಲಗಿದ್ದ ದೃಶ್ಯ ಕಂಡುಬಂದಿದೆ. ವಿಷಪೂರಿತ ಕಡು ಬಣ್ಣದ ಹಾವು ಕಂಡ ಪೋಷಕರು ಬೆಚ್ಚಿ ಬಿದ್ದಿದ್ದಾರೆ. ಈ ಕಡು ಕಪ್ಪು ವಿಷಕಾರಿ ಹಾವುಗಳು ಆಸ್ಟ್ರೇಲಿಯಾದ ಪೂರ್ವ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

Video Viral: ಮಗುವಿನ ಬೆಡ್‌ ರೂಂನಲ್ಲಿ ಕಂಬಳಿಯೊಳಗೆ ಬೆಚ್ಚಗೆ ಮಲಗಿದ್ದ ವಿಷಕಾರಿ ಹಾವು
ಕಂಬಳಿಯೊಳಗೆ ಬೆಚ್ಚಗೆ ಮಲಗಿದ್ದ ಹಾವು
Follow us
|

Updated on:Jun 23, 2024 | 2:02 PM

ಆಸ್ಟ್ರೇಲಿಯಾ: ಮಗುವೊಂದು ತನ್ನ ಕೋಣೆಗೆ ಮಲಗಲು ಹೋದಾಗ ವಿಚಿತ್ರವಾದ ಶಬ್ದ ಕೇಳಿಸಿದೆ. ಕೋಣೆಯೊಳಗೆ ಏನೋ ದೆವ್ವ ಇದೆ ಎಂದು ಅಳುತ್ತಾ ಮಗು ತನ್ನ ತಂದೆ ತಾಯಿಯ ಬಳಿಗೆ ಹೋಗಿ ಹೇಳಿಕೊಂಡಿದೆ. ಬೆಡ್‌ ರೂಂನಲ್ಲಿ ಲೈಟ್​ ಹಾಕಿ ನೋಡಿದರೂ ಏನೋ ಕಾಣಿಸದೇ ಇದ್ದಾಗ ಮಗುವಿನ ಬೆಡ್​​​ ಮೇಲೆ ಇಟ್ಟಿದ್ದ ಗೊಂಬೆಯ ಹಿಂಭಾಗದಲ್ಲಿ ಹಾವೊಂದು ಸುರುಳಿ ಹಾಕಿ ಬೆಚ್ಚಗೆ ಮಲಗಿದ್ದ ದೃಶ್ಯ ಕಂಡುಬಂದಿದೆ. ವಿಷಪೂರಿತ ಕಡು ಬಣ್ಣದ ಹಾವು ಕಂಡ ಪೋಷಕರು ಬೆಚ್ಚಿ ಬಿದ್ದಿದ್ದಾರೆ.

ತಕ್ಷಣ ಸ್ಥಳೀಯ ಹಾವು ಹಿಡಿಯುವವರಿಗೆ ದಂಪತಿ ಮಾಹಿತಿ ನೀಡಿದ್ದಾರೆ. ಕೆಂಪು-ಹೊಟ್ಟೆಯ ಕಪ್ಪು ಹಾವುಗಳು ಎಂದು ಕರೆಯಲ್ಪಡುವ ಈ ವಿಷಕಾರಿ ಹಾವುಗಳು ಆಸ್ಟ್ರೇಲಿಯಾದ ಪೂರ್ವ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವು ಅತ್ಯಂತ ವಿಷಕಾರಿ ಹಾವು ಹೇಳಲಾಗುತ್ತದೆ.

ಇದನ್ನೂ ಓದಿ: ಸಾಕಿದ ಮಾಲಿಕನಿಗೆ ಯಮನಾದ ಗಜ; ಮಾವುತನನ್ನು ತುಳಿದು ಸಾಯಿಸಿದ ಆನೆ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಹಾವುಗಳ ಕಡಿತದಿಂದ ಸಾಯುವವರ ಸಂಖ್ಯೆ ಕಡಿಮೆಯಾದರೂ, ಕಚ್ಚಿದರೆ, ಊತ, ಬೆವರು, ಮೂಳೆ ನೋವು, ವಾಂತಿ ಮತ್ತು ಭೇದಿ ಮುಂತಾದ ಲಕ್ಷಣಗಳು ಕಚ್ಚಿದ ಸ್ಥಳದಲ್ಲಿ ಕಂಡುಬರುತ್ತವೆ. ಇದಲ್ಲದೆ, ಅವರ ಕಡಿತದಿಂದ ಆಸ್ಟ್ರೇಲಿಯಾದಲ್ಲಿ ಅನೇಕ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹಾವು ಹಿಡಿಯುವವರು ಸ್ಪಷ್ಟಪಡಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:28 pm, Sun, 23 June 24

ತಾಜಾ ಸುದ್ದಿ