Viral Video: ಕೆಲವೇ ಸೆಕೆಂಡಲ್ಲಿ ನೆಲಸಮ; ಒಂದೇ ವಾರದಲ್ಲಿ ಬಿಹಾರದಲ್ಲಿ 2ನೇ ಸೇತುವೆ ಕುಸಿತ
ನೋಡನೋಡುತ್ತಿದ್ದಂತೆ ಸೇತುವೆ ಮುರಿದು ಬಿದ್ದಿರುವ ಕ್ಷಣಗಳ ವಿಡಿಯೋ ವೈರಲ್ ಆಗಿದೆ. 1991ರಲ್ಲಿ ಆ ಸಮಯದಲ್ಲಿ ಮಹಾರಾಜ್‌ಗಂಜ್ ಶಾಸಕರಾಗಿದ್ದ ಉಮಾ ಶಂಕರ್ ಸಿಂಗ್ ಅವರ ಕೊಡುಗೆಯೊಂದಿಗೆ ಈ ಸೇತುವೆಯನ್ನು ನಿರ್ಮಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಪಾಟ್ನಾ: ಬಿಹಾರದ ಅರಾರಿಯಾದಲ್ಲಿ (Araria) ಸೇತುವೆಯೊಂದು ಉದ್ಘಾಟನೆಗೂ ಮೊದಲೇ ಕುಸಿದ 4 ದಿನಗಳ ನಂತರ ಬಿಹಾರ (Bihar) ರಾಜ್ಯದ ಸಿವಾನ್ ಜಿಲ್ಲೆಯಲ್ಲಿ ಇಂದು (ಶನಿವಾರ) ಮತ್ತೊಂದು ಸೇತುವೆ ಕುಸಿದಿದೆ. ದಾರೌಂಡಾ ಮತ್ತು ಮಹಾರಾಜ್‌ಗಂಜ್ ಬ್ಲಾಕ್‌ಗಳಲ್ಲಿ ಕಾಲುವೆ ಮತ್ತು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸಣ್ಣ ಸೇತುವೆಯೊಂದು ಇಂದು ಮುಂಜಾನೆ 5 ಗಂಟೆಯ ಸುಮಾರಿಗೆ ಕುಸಿದು ಬಿದ್ದಿದೆ.
“ಸೇತುವೆ ಕುಸಿತವಾದ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಇದು ತುಂಬಾ ಹಳೆಯ ಸೇತುವೆಯಾಗಿದ್ದು, ಮೇಲ್ನೋಟಕ್ಕೆ ಕಾಲುವೆಯ ಮೂಲಕ ನೀರು ಬಿಡುವಾಗ ಸೇತುವೆಯ ಪಿಲ್ಲರ್‌ಗಳು ಕುಸಿದಿವೆ. ಅದನ್ನು ಪುನಃಸ್ಥಾಪಿಸುವವರೆಗೆ ಪೀಡಿತ ಹಳ್ಳಿಗಳ ನಿವಾಸಿಗಳು ಸಾಧ್ಯವಾದಷ್ಟು ಕಡಿಮೆ ಅನಾನುಕೂಲತೆಯನ್ನು ಎದುರಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಕುಲ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಇದನ್ನೂ ಓದಿ: Viral Video: ಕಳ್ಳನೊಬ್ಬ ಬುರ್ಖಾ ಧರಿಸಿ ಜ್ಯುವೆಲ್ಲರಿ ಶಾಪ್ನಲ್ಲಿ ದರೋಡೆಗೆ ಯತ್ನ; ಸಿಸಿಟಿವಿ ವಿಡಿಯೋ ವೈರಲ್
ಸೇತುವೆಯು ನೋಡನೋಡುತ್ತಿದ್ದಂತೆ ಎರಡಾಗಿ ಮುರಿದು ಬಿದ್ದಿರುವ ಕ್ಷಣಗಳ ವಿಡಿಯೋ ವೈರಲ್ ಆಗಿದೆ. 1991ರಲ್ಲಿ ಆ ಸಮಯದಲ್ಲಿ ಮಹಾರಾಜ್‌ಗಂಜ್ ಶಾಸಕರಾಗಿದ್ದ ಉಮಾ ಶಂಕರ್ ಸಿಂಗ್ ಅವರ ಕೊಡುಗೆಯೊಂದಿಗೆ ಈ ಸೇತುವೆಯನ್ನು ನಿರ್ಮಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
A 40 years old bridge collapsed in Siwan, Bihar. The collapse of the bridge over the Gandak canal occurred with a loud noise that was heard till the neighbouring Ramgarh in Darbhanga district. The bridge, which connected the markets of Patedhi Bazar in Maharajganj district with… pic.twitter.com/lTGuqvavQO
— SK Chakraborty (@sanjoychakra) June 22, 2024
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಬಳಸಿಕೊಂಡು 20 ಅಡಿ ಉದ್ದದ ಸೇತುವೆಯನ್ನು ನಿರ್ಮಿಸಲಾಗಿದೆ ಎಂದು ಮಹಾರಾಜ್‌ಗಂಜ್‌ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅನಿಲ್ ಕುಮಾರ್ ತಿಳಿಸಿದ್ದಾರೆ. ಇತ್ತೀಚಿನ ಸೇತುವೆ ಕುಸಿತದ ಘಟನೆಯ ನಂತರ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಬಿಹಾರ ಸರ್ಕಾರದ ಮೇಲೆ ತೀವ್ರ ಟೀಕಾಪ್ರಹಾರ ನಡೆಸಿದೆ.
“ಡಬಲ್ ಇಂಜಿನ್ ಸರ್ಕಾರದ ಶೋಷಣೆ ನೋಡಿ! ಪ್ರತಿ ವಾರ ಯಾವುದಾದರೂ ಸೇತುವೆ ಕುಸಿಯುವುದು ಶೇ. 100ರಷ್ಟು ಖಚಿತ! ಕಮಿಷನ್ ತೆಗೆದುಕೊಳ್ಳುವುದು, ಅಧಿಕಾರಶಾಹಿ ಮತ್ತು ಭ್ರಷ್ಟಾಚಾರದ ಇಂತಹ ಅಪರೂಪದ ಪ್ರದರ್ಶನ ಜಗತ್ತಿನಲ್ಲಿ ಬೇರೆಲ್ಲಿಯೂ ಕಾಣುವುದಿಲ್ಲ” ಎಂದು ಆರ್ಜೆಡಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: Nana Patole: ಕಾಂಗ್ರೆಸ್ ಕಾರ್ಯಕರ್ತ ನಾನಾ ಪಟೋಲೆಯ ಪಾದ ತೊಳೆಯುತ್ತಿರುವ ವಿಡಿಯೋ ವೈರಲ್; ಬಿಜೆಪಿ ಟೀಕೆ
ಒಂದು ವಾರದಲ್ಲಿ ಎರಡನೇ ಸೇತುವೆ ಕುಸಿತ:
ಬಿಹಾರದ ಅರಾರಿಯಾದಲ್ಲಿ ಹೊಸದಾಗಿ ನಿರ್ಮಿಸಲಾದ ಸೇತುವೆ ಕುಸಿದ 4 ದಿನಗಳ ನಂತರ ಇಂದಿನ ಈ ಘಟನೆ ನಡೆದಿತ್ತು. ಸೇತುವೆಯ ಸಮೀಪ ರಸ್ತೆಗಳು ಇನ್ನೂ ನಿರ್ಮಾಣವಾಗದ ಕಾರಣ ಸೇತುವೆಯನ್ನು ಸಾರ್ವಜನಿಕರಿಗೆ ತೆರೆದಿರಲಿಲ್ಲ. ಈ ಸೇತುವೆಯು ಕುರ್ಸಾ ಕಾಂತಾ ಮತ್ತು ಅರಾರಿಯಾ ಜಿಲ್ಲೆಯ ಸಿಕ್ಟಿ ಪ್ರದೇಶಗಳನ್ನು ಸಂಪರ್ಕಿಸುತ್ತದೆ.
ಅರಾರಿಯಾ ಸೇತುವೆ ಕುಸಿತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಗ್ರಾಮೀಣ ಕಾಮಗಾರಿ ಇಲಾಖೆ ಕ್ರಮಕ್ಕೆ ಮುಂದಾಗಿದೆ. 183 ಮೀಟರ್ ಉದ್ದದ ಸೇತುವೆ ಕುಸಿತವು ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಇದು 2023ರಿಂದ ಬಿಹಾರದಲ್ಲಿ 7ನೇ ಸೇತುವೆ ಕುಸಿತವಾಗಿದೆ. ಈ ವರ್ಷ ಕುಸಿತವಾದ ಎರಡನೇ ಸೇತುವೆಯಾಗಿದೆ. 12 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿತ್ತು.
ಮಾರ್ಚ್‌ನಲ್ಲಿ ಸುಪೌಲ್ ಜಿಲ್ಲೆಯ ಕೋಸಿ ನದಿಯ ಮೇಲೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು, ಒಬ್ಬ ಸಾವನ್ನಪ್ಪಿದ್ದ. ಇದರಲ್ಲಿ 10 ಮಂದಿ ಗಾಯಗೊಂಡಿದ್ದರು. ಕಳೆದ ವರ್ಷ, ಪುರ್ನಿಯಾದ ಬೈಸಿ ಬ್ಲಾಕ್‌ನಲ್ಲಿ ದುಮುಹ್ನಿ ನದಿಯ ಮೇಲೆ 20.1 ಮೀಟರ್ ನಿರ್ಮಾಣ ಹಂತದ ಸೇತುವೆಯು ಕಾಂಕ್ರೀಟ್ ಕೆಲಸ ಮುಗಿದ ಕೆಲವೇ ದಿನಗಳಲ್ಲಿ ಕುಸಿದಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ