Viral Video: ಕಳ್ಳನೊಬ್ಬ ಬುರ್ಖಾ ಧರಿಸಿ ಜ್ಯುವೆಲ್ಲರಿ ಶಾಪ್​ನಲ್ಲಿ ದರೋಡೆಗೆ ಯತ್ನ; ಸಿಸಿಟಿವಿ ವಿಡಿಯೋ ವೈರಲ್

ಹೈದರಾಬಾದ್‌ನಲ್ಲಿ ಜ್ಯುವೆಲ್ಲರಿ ಅಂಗಡಿಯನ್ನು ದರೋಡೆ ಮಾಡಲು ಇಬ್ಬರು ಪ್ರಯತ್ನಿಸಿದ್ದಾರೆ. ಈ ವೇಳೆ ಮಾಲೀಕರಿಗೆ ಇರಿದಿದ್ದಾರೆ. ಆದರೆ, ಯಾವುದೇ ಹಣ ಕಳುವಾಗಿಲ್ಲ. ಮಂಗಳವಾರ ಬೆಳಗ್ಗೆ 11.15ರ ಸುಮಾರಿಗೆ ಆರೋಪಿಗಳು ಬೈಕ್‌ನಲ್ಲಿ ಜಗದಾಂಬಾ ಆಭರಣ ಮಳಿಗೆಗೆ ಬಂದಿದ್ದರು. ಆಗ ಈ ಘಟನೆ ನಡೆದಿದೆ.

Viral Video: ಕಳ್ಳನೊಬ್ಬ ಬುರ್ಖಾ ಧರಿಸಿ ಜ್ಯುವೆಲ್ಲರಿ ಶಾಪ್​ನಲ್ಲಿ ದರೋಡೆಗೆ ಯತ್ನ; ಸಿಸಿಟಿವಿ ವಿಡಿಯೋ ವೈರಲ್
ಬುರ್ಖಾ ಧರಿಸಿ ಜ್ಯುವೆಲ್ಲರಿ ಶಾಪ್​ನಲ್ಲಿ ದರೋಡೆಗೆ ಯತ್ನ
Follow us
|

Updated on: Jun 21, 2024 | 5:18 PM

ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನ (Hyderabad) ಉಪನಗರವಾದ ಮೆಡ್ಚಲ್‌ನಲ್ಲಿ ಗುರುವಾರ ಆಭರಣದ ಅಂಗಡಿಯೊಂದರಲ್ಲಿ (Jewellery Shop) ದರೋಡೆಗೆ ಯತ್ನಿಸಿದ ಇಬ್ಬರು ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ. ಒಬ್ಬರು ಬುರ್ಖಾ ಧರಿಸಿ ಮತ್ತು ಇನ್ನೊಬ್ಬರು ಹೆಲ್ಮೆಟ್ ಧರಿಸಿ ಮುಖವನ್ನು ಮುಚ್ಚಿಕೊಂಡಿರುವ ಸಿಸಿಟಿವಿ ದೃಶ್ಯಗಳ ವಿಡಿಯೋ (Video Viral) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬುರ್ಖಾಧಾರಿ ವ್ಯಕ್ತಿ ಈ ವೇಳೆ ಅಂಗಡಿಯ ಮಾಲೀಕನಿಗೆ ಚಾಕುವಿನಿಂದ ಇರಿದಿದ್ದು, ಆಗ ಆತನ ಮಗ ಆ ದರೋಡೆಯ ಯತ್ನವನ್ನು ವಿಫಲಗೊಳಿಸಿದ್ದಾನೆ ಎಂದು ವರದಿಯಾಗಿದೆ. ಬಳಿಕ, ಇಬ್ಬರು ದರೋಡೆಕೋರರು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಹೈದರಾಬಾದ್‌ನ ಮೆಡ್ಚಲ್‌ನ ಕೊಂಪಲ್ಲಿಯಲ್ಲಿರುವ ಜಗದಂಬಾ ಜ್ಯುವೆಲ್ಲರ್ಸ್‌ಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಇಬ್ಬರು ಕಳ್ಳರು ಪ್ರವೇಶಿಸಿದ್ದಾರೆ. ಗ್ರಾಹಕರಂತೆ ಪೋಸ್ ಕೊಟ್ಟು ಅಂಗಡಿ ಪ್ರವೇಶಿಸಿದರು. ಸ್ವಲ್ಪ ಸಮಯದ ನಂತರ, ಆರೋಪಿ ಬುರ್ಖಾದೊಳಗಿದ್ದ ತನ್ನ ಬ್ಯಾಗ್‌ನಲ್ಲಿ ಆಭರಣ ಪೆಟ್ಟಿಗೆಗಳನ್ನು ಇಡುವಂತೆ ಒತ್ತಾಯಿಸಿದನು. ಇದನ್ನು ವಿರೋಧಿಸಿ ಮಾಲೀಕರು ಸಹಾಯಕ್ಕಾಗಿ ಕೂಗಿಕೊಂಡಾಗ ಆರೋಪಿಗಳು ಮಾಲೀಕನ ಕತ್ತಿನ ಕೆಳಗೆ ಚಾಕುವಿನಿಂದ ಇರಿದಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ಬಾರಾಮುಲ್ಲಾ ಎನ್​ಕೌಂಟರ್​​ನಲ್ಲಿ ಹತ್ಯೆಗೀಡಾದ ಉಗ್ರರಿಗೂ ಎಲ್​ಇಟಿಗೂ ನಂಟು

ಬಂದಿದ್ದ ಇಬ್ಬರು ಕಳ್ಳರಲ್ಲಿ ಒಬ್ಬರು ದೊಡ್ಡ ಚಾಕುವನ್ನು ತೋರಿಸಿ ಅಂಗಡಿಯ ಮಾಲೀಕರಿಗೆ ಬೆಲೆಬಾಳುವ ವಸ್ತುಗಳನ್ನು ಕೇಳಿದರು. ಅಂಗಡಿಯಲ್ಲಿದ್ದ ಒಬ್ಬ ಮಾರಾಟಗಾರನು ಹೆಚ್ಚು ಬೆಲೆಬಾಳುವ ವಸ್ತುಗಳನ್ನು ಇರಿಸಿರುವ ಸ್ಥಳಕ್ಕೆ ಓಡಿ ಹೋಗಿ ಲಾಕ್ ಮಾಡಿದನು. ದರೋಡೆಕೋರನು ಚಾಕುವಿನಿಂದ ಭುಜದ ಮೇಲೆ ದಾಳಿ ಮಾಡಿದರೂ ಅಂಗಡಿಯ ಮಾಲೀಕರು ಅಂಗಡಿಯಿಂದ ಓಡಿಹೋಗಿದ್ದಾರೆ. ಅಂಗಡಿಯ ಮಾಲೀಕರು ಹೊರಬಂದು ಅಕ್ಕಪಕ್ಕದ ಜನರನ್ನು ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದಾಗ, ಕಳ್ಳರು ಗಾಬರಿಗೊಂಡು ಓಡಿಹೋಗಿದ್ದಾರೆ.

ಇದನ್ನೂ ಓದಿ: ಕತ್ತು ಸೀಳಿ ಮೂರು ವರ್ಷದ ಬಾಲಕನ ಬರ್ಬರ ಕೊಲೆ; ಆರೋಪಿ ಚಿಕ್ಕಪ್ಪನಿಗಾಗಿ ಪೊಲೀಸರ ಹುಡುಕಾಟ

ಆಗ ಅಂಗಡಿಯಲ್ಲಿದ್ದ ವ್ಯಕ್ತಿ ದರೋಡೆಕೋರನ ಮೇಲೆ ಕುರ್ಚಿಯಿಂದ ಹೊಡೆದಿದ್ದಾನೆ. ಬಳಿಕ ಗಾಬರಿಯಿಂದ ಕಳ್ಳರು ಬೈಕ್​ನಲ್ಲಿ ಪರಾರಿಯಾಗಿದ್ದಾರೆ. ಈ ಇಡೀ ಘಟನೆಯನ್ನು ಅಂಗಡಿಯ ಕ್ಲೋಸ್ಡ್-ಸರ್ಕ್ಯೂಟ್ ಕ್ಯಾಮೆರಾಗಳು ದಾಖಲಿಸಿವೆ. ಪೊಲೀಸರು ದೃಶ್ಯಾವಳಿಗಳನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಕಳ್ಳರ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ