Viral Video: ಸಾಕಿದ ಮಾಲಿಕನಿಗೆ ಯಮನಾದ ಗಜ; ಮಾವುತನನ್ನು ತುಳಿದು ಸಾಯಿಸಿದ ಆನೆ

ಮಾವುತನನ್ನು ಆನೆಯೊಂದು ಭೀಕರವಾಗಿ ತುಳಿದು ಸಾಯಿಸಿರುವ ಘಟನೆ ಕೇರಳದಲ್ಲಿ ಸಂಭವಿಸಿದೆ. ಬಲಿಯಾದ ಮಾವುತ ನೀಲೇಶ್ವರಂನ ಬಾಲಕೃಷ್ಣನ್ (62) ಎಂದು ಗುರುತಿಸಲಾಗಿದ್ದು, ಬಾಲಕೃಷ್ಣನ್ ಅಡಿಮಲಿ ಸಮೀಪದ ಕಲ್ಲರ್‌ನಲ್ಲಿರುವ ಖಾಸಗಿ ಸಫಾರಿ ಕೇಂದ್ರದಲ್ಲಿ ಕಳೆದ ಹಲವು ವರ್ಷಗಳಿಂದ ಮಾವುತನಾಗಿ ಕೆಲಸನಿರ್ವಹಿಸುತ್ತಿದ್ದರು.

Viral Video: ಸಾಕಿದ ಮಾಲಿಕನಿಗೆ ಯಮನಾದ ಗಜ; ಮಾವುತನನ್ನು ತುಳಿದು ಸಾಯಿಸಿದ ಆನೆ
Follow us
|

Updated on:Jun 22, 2024 | 5:37 PM

ಕೇರಳ: ಮಾವುತನನ್ನು ಆನೆಯೊಂದು ಭೀಕರವಾಗಿ ತುಳಿದು ಸಾಯಿಸಿರುವ ಘಟನೆ ಕೇರಳದ ಇಡುಕ್ಕಿಯಲ್ಲಿ ಸಂಭವಿಸಿದೆ. ಜೂನ್ 20 ರಂದು ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಾವುತನನ್ನೇ ಭೀಕರವಾಗಿ ಕೊಂದಿರುವುದು ಈ ವಿಡಿಯೋ ನಿಮ್ಮ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ. ದೇಹದ ಪ್ರತಿಯೊಂದು ಮೂಳೆಯು ಪುಡಿಯಾಗುವಂತೆ ಆನೆ ಮಾವುತನನ್ನು ತುಳಿದು ಬಿಸಾಕಿದೆ.

ಬಲಿಯಾದ ಮಾವುತ ನೀಲೇಶ್ವರಂನ 62 ವರ್ಷದ ಬಾಲಕೃಷ್ಣನ್ ಎಂದು ಗುರುತಿಸಲಾಗಿದ್ದು, ಅಡಿಮಲಿ ಸಮೀಪದ ಕಲ್ಲರ್‌ನಲ್ಲಿರುವ ಖಾಸಗಿ ಸಫಾರಿ ಕೇಂದ್ರವಾದ ಕೇರಳ ಫಾರ್ಮ್‌ನಲ್ಲಿ ಸಂಜೆ 6:30 ರ ಸುಮಾರಿಗೆ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಆನೆ ದಾಳಿ ಮಾಡಿದಾಗ ಬಾಲಕೃಷ್ಣನ್ ಪ್ರವಾಸಿಗರನ್ನು ಸಫಾರಿಗೆ ಕರೆದೊಯ್ಯಲು ಕಾಯುತ್ತಿದ್ದ ಎಂದು ತಿಳಿದುಬಂದಿದೆ. ಪ್ರವಾಸಿಗರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮಾವುತನ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಲೋನ್‌ಗೆಂದು ಹೋಗಿ ಬ್ಯಾಂಕ್ ಸಿಇಒನನ್ನೇ ತನ್ನ ಬಲೆಗೆ ಬೀಳಿಸಿ 4 ಕೋಟಿ ರೂ. ದೋಚಿದ ಮಹಿಳೆ

@ManyFaces_Death ಎಂಬ ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಇಂದು (ಜೂ.22)ರಂದು ವಿಡಿಯೋ ಹಂಚಿಕೊಳ್ಳಲಾಗಿದ್ದು, ಕೆಲವೇ ಗಂಟೆಗಳಲ್ಲಿ 3.3 ಮಿಲಿಯನ್​​ ಅಂದರೆ 30 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ವಿಡಿಯೋ ಒಂದು ಲಕ್ಷ ನಿಮ್ಮನ್ನು ಬೆಚ್ಚಿ ಬೀಳಿಸುವುದಂತೂ ಖಂಡಿತಾ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Sat, 22 June 24

ತಾಜಾ ಸುದ್ದಿ