Viral Video: ಚಿಕನ್‌ ಬಿರಿಯಾನಿ ತಂದ ಆಪತ್ತು, ಗಂಟಲಲ್ಲಿ ಚಿಕನ್‌ ಪೀಸ್‌ ಸಿಲುಕಿ  ಉಸಿರುಗಟ್ಟಿ  ವ್ಯಕ್ತಿ ಸಾವು 

ಹೈದರಬಾದ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಬಹುತೇಕರ ಫೇವರೇಟ್‌ ಆಗಿರುವ ಚಿಕನ್‌ ಬಿರಿಯಾನಿ ವ್ಯಕ್ತಿಯೊಬ್ಬರ ಪ್ರಾಣವನ್ನೇ ಕಸಿದುಕೊಂಡಿದೆ. ಹೌದು ಇಲ್ಲಿನ ವ್ಯಕ್ತಿಯೊಬ್ಬರು ಬಿರಿಯಾನಿ ತಿನ್ನುವಾಗ ಗಂಟಲಿನಲ್ಲಿ ಚಿಕನ್‌ ಪೀಸ್‌ ಸಿಲುಕಿ ಉಟಿರುಗಟ್ಟಿ ಸಾವನ್ನಪ್ಪಿದ್ದಾರೆ.  ಈ ಕುರಿತ ಸುದ್ದಿಯೊಂದು ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

Viral Video: ಚಿಕನ್‌ ಬಿರಿಯಾನಿ ತಂದ ಆಪತ್ತು, ಗಂಟಲಲ್ಲಿ ಚಿಕನ್‌ ಪೀಸ್‌ ಸಿಲುಕಿ  ಉಸಿರುಗಟ್ಟಿ  ವ್ಯಕ್ತಿ ಸಾವು 
ವೈರಲ್​ ನ್ಯೂಸ್
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 24, 2024 | 2:08 PM

ಊಟ ಮಾಡುವಾಗ ಅಥವಾ ಏನಾದ್ರೂ ತಿನ್ನುವಾಗ ಆಹಾರ ಗಂಟಲಲ್ಲಿ ಸಿಲುಕಿದರೆ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಅದಕ್ಕಾಗಿಯೇ ನಿಧಾನವಾಗಿ ಊಟ ಮಾಡಬೇಕು, ಆಹಾರವನ್ನು ಸರಿಯಾಗಿ ಜಗಿದು ತಿನ್ನಬೇಕು ಎಂದು ಹೇಳುತ್ತಿರುತ್ತಾರೆ. ಆಹಾರ ಗಂಟಲಲ್ಲಿ ಸಿಲುಕಿದರೆ ಅದು ಕೆಲವೊಮ್ಮೆ ನಮ್ಮ ಪ್ರಾಣಕ್ಕೆಯೇ ಕುತ್ತು ತರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಚಿಕನ್‌ ಬಿರಿಯಾನಿ ತಿನ್ನುವಾಗ ಚಿಕನ್‌ ಪೀಸ್‌ ಗಂಟಲಲ್ಲಿ  ಸಿಲುಕಿ ವ್ಯಕ್ತಿಯೊಬ್ಬರು ಉಸಿರುಗಟ್ಟಿ  ಸಾವನ್ನಪ್ಪಿದ್ದಾರೆ.

ಈ ಘಟನೆ ಹೈದರಬಾದ್‌ನ ಶಾದ್‌ ನಗರದಲ್ಲಿ ನಡೆದಿದ್ದು, ಬಿರಿಯಾನಿ ತಿನ್ನುವಾಗ ಗಂಟಲಲ್ಲಿ ಚಿಕನ್‌ ಪೀಸ್‌ ಸಿಲುಕಿದ ಪರಿಣಾಮ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇಲ್ಲಿನ ಅಣ್ಣಾರಾಮ್‌ ಗ್ರಾಮದ ನಿವಾಸಿ ಶ್ರೀಕಾಂತ್‌ (39 ವರ್ಷ) ಎಂಬ ವ್ಯಕ್ತಿ ತನ್ನ ಸಹೋದರಿಯನ್ನು ಭೇಟಿ ಮಾಡಲೆಂದು ಹೈದರಬಾದಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಅಲ್ಲೇ ಒಂದು ಬಾರ್‌ಗೆ ಹೋಗಿ ಮದ್ಯ ಮತ್ತು ಚಿಕನ್‌ ಬಿರಿಯಾನಿ ಸೇವನೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅವರಿಗೆ ಉಸಿರುಗಟ್ಟಿದಂತಾಗಿ  ತಕ್ಷಣ ಬಾರ್‌ನಿಂದ ಹೊರಬರುತ್ತಾರೆ. ತೀವ್ರ ಉಸಿರಾಟದ ತೊಂದರೆಯುಂಟಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ. ಆ ತಕ್ಷಣ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಶ್ರೀಕಾಂತ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದುರಾದೃಷ್ಟವಶಾತ್‌ ಚಿಕಿತ್ಸೆಗೂ ಮುನ್ನವೇ ಅವರು ಸಾವನ್ನಪ್ಪಿದ್ದಾರೆ.  ಮೊದಲಿಗೆ ಅತಿಯಾದ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಸಂಶಯಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ  ಗಂಟಲಲ್ಲಿ ಮಾಂಸದ ತುಂಡು ಸಿಕ್ಕಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಪತ್ತೆಯಾಗಿದೆ.

@TeluguScribe  ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಚಿಕನ್‌ ಬಿರಿಯಾನಿ ತಿನ್ನುವಾಗ ಗಂಟಲಲ್ಲಿ ಚಿಕನ್‌ ಪೀಸ್‌ ಸಿಲುಕಿದ ಪರಿಣಾಮ ಉಸಿರಾಟದ ತೊಂದರೆ ಉಂಟಾಗಿ ಉಸಿರುಗಟ್ಟಿ ಬೀದಿಯಲ್ಲಿ ಕುಸಿದು ಬಿದ್ದಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಎರಡು ತಿಂಗಳಿಗೆ ಬರೋಬ್ಬರಿ 45 ಸಾವಿರ ರೂ. ಕರೆಂಟ್ ಬಿಲ್ ಇನ್ನು ಮುಂದೆ ಕ್ಯಾಂಡಲ್ ಬಳಕೆಯೇ ಸೂಕ್ತ

ಜೂನ್‌ 23 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಘಟನೆ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ