AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೃಹತ್‌ ಗಾಳಿಪಟದೊಂದಿಗೆ ಆಕಾಶಕ್ಕೆ ಹಾರಿದ ಮೂರು ವರ್ಷದ ಮಗು

ಆಘಾತಕಾರಿ ಘಟನೆಯ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಗಾಳಿಪಟ ಉತ್ಸವದಲ್ಲಿ ನೆರೆದಿದ್ದ ಜನರೆಲ್ಲರೂ ಬಹಳ ಸಂತೋಷದಿಂದ ಗಾಳಿಪಟ ಹಾರಿಸುತ್ತಿದ್ದ ವೇಳೆ, ಮೂರು ವರ್ಷ ವಯಸ್ಸಿನ ಹೆಣ್ಣು ಮಗುವೊಂದು ದೈತ್ಯ ಗಾಳಿಪಟದೊಂದಿಗೆ ಗಾಳಿಯಲ್ಲಿ ಹಾರಿ ಹೋಗಿದೆ. ಅದೃಷ್ಟವಶಾತ್‌ ಮಗುವನ್ನು ರಕ್ಷಿಸಲಾಗಿದ್ದು, ಈ ದೃಶ್ಯಾವಳಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral Video: ಬೃಹತ್‌ ಗಾಳಿಪಟದೊಂದಿಗೆ ಆಕಾಶಕ್ಕೆ ಹಾರಿದ ಮೂರು ವರ್ಷದ ಮಗು
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 24, 2024 | 4:34 PM

Share

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವು ವಿಡಿಯೋಗಳು ಮನಸ್ಸಿಗೆ ಮುದ ನೀಡಿದರೆ, ಕೆಲವು ದೃಶ್ಯಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಅದರಲ್ಲೂ ಇನ್ನೂ ಕೆಲವು ದೃಶ್ಯಗಳು ಹೀಗೂ ನಡೆಯಲು ಸಾಧ್ಯವೇ ಎಂದು ನಮ್ಮಲ್ಲಿ ಅಚ್ಚರಿಯನ್ನು ಮೂಡಿಸುತ್ತವೆ. ಜೊತೆಜೊತೆಗೆ ಭಯವನ್ನೂ ಹುಟ್ಟಿಸುತ್ತದೆ. ಸದ್ಯ ಅಂತಹದೇ ಆಘಾತಕಾರಿ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಬೃಹತ್‌ ಗಾಳಿಪಟದೊಂದಿಗೆ ಮೂರು ವರ್ಷದ ಮಗು ಗಾಳಿಯಲ್ಲಿ ಹಾರಿ ಹೋಗಿದೆ. ಈ ದೃಶ್ಯ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.

ಈ ಘಟನೆ 2020 ರಲ್ಲಿ ತೈವಾನ್‌ನಲ್ಲಿ ನಡೆದಿದ್ದು, ಇಲ್ಲಿನ ಹ್ಸಿಂಚು ನಗರದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಬೃಹತ್‌ ಗಾತ್ರದ ಗಾಳಿಪಟವನ್ನು ಹಾರಿಸುವ ವೇಳೆ, ಆ ಗಾಳಿಪಟವನ್ನು ಹಿಡಿದು ನಿಂತಿದ್ದ  ಮೂರು ವರ್ಷ ವಯಸ್ಸಿನ ಪುಟ್ಟ ಬಾಲಕಿಯೊಬ್ಬಳು ಅದರೊಂದಿಗೆ ಎತ್ತರಕ್ಕೆ ಹಾರಿ ಹೋಗಿದ್ದಾಳೆ. ನಂತರ ಕೆಲವು ಸೆಕೆಂಡುಗಳ ಬಳಿಕ ಮಗು ಸೇಫ್‌ ಆಗಿ ಕೆಳಗೆ ಬಿದ್ದಿದೆ. ಈ ಕುರಿತ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್‌ ಆಗುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

@nagiuscorporation ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದ್ದು, ವೈರಲ್‌ ವಿಡಿಯೋದಲ್ಲಿ ಗಾಳಿಪಟ ಉತ್ಸವದಲ್ಲಿ ನೆರೆದಿದ್ದ ಜನರೆಲ್ಲರೂ ಬೃಹತ್‌ ಗಾಳಿಪಟವನ್ನು ಹಾರಿಸಲು ತಯಾರಿ ನಡೆಸುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಆ ಗಾಳಿಪಟವನ್ನು ಹಾರಿಸುವಾಗ ಆ ಗಾಳಿಪಟದಲ್ಲಿ ಕೈ ಹಿಡಿದುಕೊಂಡಿದ್ದ ಮೂರು ವರ್ಷದ ಮಗುವೊಂದು ಕೂಡಾ ಗಾಳಿಪಟದ ಸಮೇತ ಮೇಲಕ್ಕೆ ಹಾರಿ ಹೋಗಿದೆ. ಮಗು ಆಕಾಶದಲ್ಲಿ ಹಾರುವುದನ್ನು ಕಂಡು ಅಲ್ಲಿ ನೆರೆದಿದ್ದವರೆಲ್ಲಾ ಬೆಚ್ಚಿ ಬಿದ್ದಿದ್ದಾರೆ. ನಂತರ ಗಾಳಿಪಟ ಕೆಳಗೆ ಬಂದಂತೆ ಮಗುವನ್ನು ರಕ್ಷಿಸಲಾಗಿದೆ.

ಇದನ್ನೂ ಓದಿ; ಚಿಕನ್‌ ಬಿರಿಯಾನಿ ತಂದ ಆಪತ್ತು, ಗಂಟಲಲ್ಲಿ ಚಿಕನ್‌ ಪೀಸ್‌ ಸಿಲುಕಿ ಉಸಿರುಗಟ್ಟಿ ವ್ಯಕ್ತಿ ಸಾವು 

ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 22.9 ಮಿಲಿಯನ್‌  ವೀಕ್ಷಣೆಗಳನ್ನು ಹಾಗೂ 1.2 ಮಿಲಿಯನ್‌ ಲೈಕ್ಸ್‌ಗಳನ್ನು ಪಡೆದುಕೊಂಡಿದ್ದು, ಈ ಆಘಾತಕಾರಿ ದೃಶ್ಯವನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ