ಎದುರಿನಿಂದ ಬಂದು ಖಾಸಗಿ ಅಂಗ ಮುಟ್ಟಿ ವಿಕೃತಿ: ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡ ಯುವತಿ
ಕೋರಮಂಗಲ 5ನೇ ಬ್ಲಾಕ್ನಲ್ಲಿ ಯುವತಿ ನಡೆದುಕೊಂಡು ಹೋಗುತ್ತಿದ್ದರು. ಎದುರಿನಿಂದ ಬೈಕ್ನಲ್ಲಿ ಬಂದ ಓರ್ವ ಆಸಾಮಿ ಅಸಭ್ಯ ವರ್ತನೆ ಮಾಡಿದ್ದಾನೆ. ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿರುವಂತಹ ಘಟನೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಆಸಾಮಿ ಅಸಭ್ಯ ವರ್ತನೆ ತೋರುತ್ತಿದ್ದಂತೆ ಯುವತಿ ಆತನನ್ನ ಬೈದಿದ್ದಾರೆ ಮತ್ತು ಬೈಕ್ನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಆದರೆ ಆತ ತಪ್ಪಿಸಿಕೊಂಡಿದ್ದಾನೆ.

ಬೆಂಗಳೂರು, ಜೂನ್ 23: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ (girl) ಖಾಸಗಿ ಅಂಗ ಮುಟ್ಟಿ ಓರ್ವ ಆಸಾಮಿ ಅಸಭ್ಯ ವರ್ತನೆ ಆರೋಪ ಮಾಡಲಾಗಿದೆ. ಕೋರಮಂಗಲ (Koramangala) ಪೊಲೀಸ್ ಠಾಣೆ ವ್ಯಾಪ್ತಿಯ 5ನೇ ಬ್ಲಾಕ್ನಲ್ಲಿ ಜೂನ್ 19 ರಂದು ರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಆ ಮೂಲಕ ಬೆಂಗಳೂರು ಕಾಮುಕರ ಅಡ್ಡೆ ಆಗುತ್ತಿದ್ದೆಯಾ ಎಂಬ ಅನುಮಾನಗಳು ಮೂಡಿವೆ.
ಕೋರಮಂಗಲ 5ನೇ ಬ್ಲಾಕ್ನಲ್ಲಿ ಯುವತಿ ನಡೆದುಕೊಂಡು ಹೋಗುತ್ತಿದ್ದರು. ಎದುರಿನಿಂದ ಬೈಕ್ನಲ್ಲಿ ಬಂದ ಓರ್ವ ಆಸಾಮಿ ಅಸಭ್ಯ ವರ್ತನೆ ಮಾಡಿದ್ದಾನೆ. ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿದ್ದಾನೆ. ಘಟನೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಆಸಾಮಿ ಅಸಭ್ಯ ವರ್ತನೆ ತೋರುತ್ತಿದ್ದಂತೆ ಯುವತಿ ಆತನನ್ನ ಬೈದಿದ್ದಾರೆ ಮತ್ತು ಬೈಕ್ನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಆದರೆ ಆತ ತಪ್ಪಿಸಿಕೊಂಡಿದ್ದಾನೆ.
ಇದನ್ನೂ ಓದಿ: ಬೆಂಗಳೂರಲ್ಲಿ ನಮ್ಮ ಮೆಟ್ರೋ ಸಿಬ್ಬಂದಿಯಿಂದಲೇ ಅಸಭ್ಯ ವರ್ತನೆ: ‘ನಾನು ಇಲ್ಲಿ ಸುರಕ್ಷಿತಳಲ್ಲ’ ಎಂದ ಮಹಿಳೆ
ಘಟನೆ ಬಗ್ಗೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು ಜೊತೆಗೆ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಆದರೆ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
ನೂರಾರು ಕನಸು, ಆಕಾಂಕ್ಷೆಗಳನ್ನು ಹೊತ್ತು ತಮ್ಮ ವೃತ್ತಿ ಜೀವನದ ಪ್ರಗತಿಗಾಗಿ ಸಾಕಷ್ಟು ಯುವ ಸಮೂಹ ಸಿಲಿಕಾನ್ ವ್ಯಾಲಿ ಬೆಂಗಳೂರಿಗೆ ಬರುತ್ತಾರೆ. ಅದರಲ್ಲಿ ಯುವತಿಯರು ಸೇರಿದ್ದಾರೆ. ಆದರೆ ಹಾಗೆ ಬರುವ ಯುವತಿಯರಿಗೆ ಅಥವಾ ಮಹಿಳೆಯರಿಗೆ ಸಿಲಿಕಾನ್ ಸಿಟಿ ಎಷ್ಟು ಸುರಕ್ಷಿತ ಎಂಬ ಮಾತುಗಳು ಪದೇ ಪದೇ ಕೇಳಿ ಬರುತ್ತಿವೆ.
ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲೇ ಯುವತಿ ಎದುರಿಗೆ ಯುವಕನ ಅಸಭ್ಯ ವರ್ತನೆ
ಸರ್ಕಾರ ಮಹಿಳೆಯರ ರಕ್ಷಣೆಗಾಗಿ ಸಾಕಷ್ಟು ಯೋಜನೆಗಳನ್ನು ಹೊರತಂದಿದೆ. ಆದರೂ ಅವರ ಮೇಲೆ ಹಲ್ಲೆ, ಕೊಲೆ, ಲೈಂಗಿಕ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಇದು ನಗರದಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ಅಥವಾ ಯುವತಿಯರಿಗೆ ನಾವು ಸುರಕ್ಷಿತವಲ್ಲ ಎಂಬ ಭಾವನೆ ಮೂಡಿದೆ.
ಇನ್ನು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಆಗಾಗ ಪ್ರಕರಣಗಳು ನಡೆಯುತ್ತಿವೆ. ಇತ್ತೀಚೆಗೆ ಮಹಿಳೆ ಮುಂದೆ ತನ್ನ ಖಾಸಗಿ ಅಂಗ ಸ್ಪರ್ಶಿಸಿಕೊಂಡು ನಮ್ಮ ಮೆಟ್ರೋ ಸಿಬ್ಬಂದಿಯಿಂದಲೇ ಅಸಭ್ಯ ವರ್ತನೆ ತೋರಿರುವಂತಹ ಘಟನೆ ನಡೆದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:24 pm, Sun, 23 June 24