AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರ್ವಜನಿಕ ಸ್ಥಳದಲ್ಲೇ ಯುವತಿ ಎದುರಿಗೆ ಯುವಕನ ಅಸಭ್ಯ ವರ್ತನೆ

ಜನವರಿ 5 ರಂದು ರಾತ್ರಿ 8:40 ರ ಸುಮಾರಿಗೆ ಓರ್ವ ಯುವತಿ ಮಹದೇವಪುರದ ಪಾರ್ಕ್​ನ ಸರ್ವಿಸ್​​​​ ರಸ್ತೆಯಲ್ಲಿ ಕಾರ್ ಪಾರ್ಕ್​ ಮಾಡಿ ಕಾರಿನಲ್ಲೇ ಕುಳಿತುಕೊಂಡಿದ್ದಳು. ಈ ವೇಳೆ ಕಾರಿನ ಮುಂಭಾಗದಲ್ಲಿ ಓರ್ವ ಯುವಕ ನಿಂತಿದ್ದನು. ಮುಂದೇನಾಯ್ತು ಈ ಸ್ಟೋರಿ ಓದಿ..

ಸಾರ್ವಜನಿಕ ಸ್ಥಳದಲ್ಲೇ ಯುವತಿ ಎದುರಿಗೆ ಯುವಕನ ಅಸಭ್ಯ ವರ್ತನೆ
ಯುವಕನ ಅಸಭ್ಯ ವರ್ತನೆ
Jagadisha B
| Edited By: |

Updated on: Jan 09, 2024 | 9:43 AM

Share

ಬೆಂಗಳೂರು, ಜನವರಿ 09: ಸಾರ್ವಜನಿಕ ಸ್ಥಳದಲ್ಲೇ ಯುವತಿ (Young Girl) ಎದುರಿಗೆ ಯುವಕನ (Boy) ಅಸಭ್ಯವಾಗಿ ವರ್ತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜನವರಿ 5 ರಂದು ರಾತ್ರಿ 8:40 ರ ಸುಮಾರಿಗೆ ಓರ್ವ ಯುವತಿ ಮಹದೇವಪುರದ (Mahadevpura) ಪಾರ್ಕ್​ನ ಸರ್ವಿಸ್​​​​ ರಸ್ತೆಯಲ್ಲಿ ಕಾರ್ ಪಾರ್ಕ್​ ಮಾಡಿ ಕಾರಿನಲ್ಲೇ ಕುಳಿತುಕೊಂಡಿದ್ದಳು. ಈ ವೇಳೆ ಕಾರಿನ ಮುಂಭಾಗದಲ್ಲಿ ನಿಂತಿದ್ದ ಯುವಕ ಯುವತಿಯನ್ನು ನೋಡುತ್ತಲೇ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದಾರೆ. ಆಗ ಯುವತಿ ಹೆದರಿಕೆಯಿಂದ ಕಾರ್ ಡೋರ್ ಲಾಕ್ ಮಾಡಿಕೊಂಡಿದ್ದಾಳೆ.

ಬಳಿಕ ಯುವತಿ ಕಾರು ಸಮೇತ ಅಲ್ಲಿಂದ ತೆರಳಬೇಕು ಎಂದುಕೊಂಡಳು. ಆದರೆ ಆಕೆಯ ಕಾರ್​ ಪಕ್ಕ ಮತ್ತು ಹಿಂದೆ ಮತ್ತೊಂದು ಕಾರ್​ ನಿಂತಿದ್ದರಿಂದ ಹೋಗಲು ಸಾಧ್ಯವಾಗಲಿಲ್ಲ. ಕಲೆ ಸಮಯದ ಬಳಿಕ ಯುವಕ ಈಕೆಯ ಕಾರ್​ ಬಳಿ ಬಂದಿದ್ದಾನೆ. ನಂತರ ಕಾರನ್ನು ಸುತ್ತು ಹಾಕಿದ್ದಾನೆ. ನಂತರ ಚಾಲಕನ ಪಕ್ಕದ ಕಿಟಕಿ ಬಳಿ ಬಂದು, ಬೆದರಿಕೆಯ ಸನ್ನೆ ಮಾಡಿದ್ದಾನೆ.

ಇದನ್ನೂ ಓದಿ: ಹೊಸವರ್ಷಾಚರಣೆ ನಡುವೆ ಕೆಲವೆಡೆ ಅವಾಂತರ, ಅಸಭ್ಯ ವರ್ತನೆ ತೋರಿದ ಯುವಕನ ಕೆನ್ನೆಗೆ ಬಾರಿಸಿದ ಪೊಲೀಸ್

ಇದರಿಂದ ಭಯಗೊಂಡ ಯುವತಿ ಸ್ಟೇರಿಂಗ್ ಕೆಳಗೆ ಅವಿತುಕೊಂಡ ಕೆಳಗೆ ಅವಿತುಕೊಂಡಿದ್ದಾಳೆ. ಸುಮಾರು 10 ನಿಮಿಷಗಳ ನಂತರ, ಯುವತಿಯ ಸ್ನೇಹಿತರೊಬ್ಬರು ಕಾರಿನ ಬಳಿ ಬಂದರು. ಬಳಿಕ ಯುವತಿ ಕಾರಿನಿಂದ ಕೆಳಗೆ ಇಳಿದು, ಸ್ನೇಹಿತನೊಂದಿಗೆ ಸೇರಿ ಯುವಕನನ್ನು ಹುಡುಕಾಡಿದ್ದಾರೆ. ಆದರೆ ಆತ ಕಾಣೆಯಾಗಿದ್ದ ಎಂದು ನೊಂದ ಯುವತಿ ಎಕ್ಸ್​ (ಟ್ವಿಟರ್​) ನಲ್ಲಿ ಪೋಸ್ಟ್​ ಹಾಕಿದ್ದಾಳೆ. ಈ ಬಗ್ಗೆ ಮಹದೇವಪುರ ಪೊಲೀಸರು ತನಿಖೆ ನಡೆಸುವಂತೆ ಯುವತಿ ಮನವಿ ಮಾಡಿಕೊಂಡಿದ್ದಾಳೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ