ಹುಟ್ಟುಹಬ್ಬದಂದು ಬಾಯ್​ಫ್ರೆಂಡ್ ಎದುರು ಸ್ನೇಹಿತನಿಗೆ ಮೊದಲು ಕೇಕ್ ತಿನ್ನಿಸಿದ ಯುವತಿ, ಆಮೇಲೇನಾಯ್ತು ನೋಡಿ

ಹುಟ್ಟುಹಬ್ಬದಂದು ಮೊದಲ ಮೊದಲು ಖುಷಿಯಿಂದಲೇ ಓಡಾಡಿಕೊಂಡಿದ್ದ ಗೆಳೆಯ ಏಕಾಏಕಿ ಕೋಪಗೊಳ್ಳುತ್ತಾನೆ. ಅಲ್ಲಿದ್ದುದೆಲ್ಲವನ್ನೂ ನೆಲಕ್ಕೆ ಎಸೆದು ಕೋಪ ವ್ಯಕ್ತಪಡಿಸುತ್ತಾನೆ. ಇದೆಲ್ಲಕ್ಕೂ ಕಾರಣ ಆತನ ಪ್ರೇಯಸಿ.ಯುವತಿ ತನ್ನ ಪಕ್ಕದಲ್ಲಿ ನಿಂತಿದ್ದ ಗೆಳೆಯನಿಗೆ ಕೇಕ್ ಮೊದಲು ತಿನ್ನಿಸಿದ ಪರಿಣಾಮ ಆಕೆಯ ಬಾಯ್​ಫ್ರೆಂಡ್ ಕೋಪಗೊಂಡು ಗೆಳೆತಿ ಮುಂದೆ ರೇಗಾಡಿದ್ದಾನೆ.

ಹುಟ್ಟುಹಬ್ಬದಂದು ಬಾಯ್​ಫ್ರೆಂಡ್ ಎದುರು ಸ್ನೇಹಿತನಿಗೆ ಮೊದಲು ಕೇಕ್ ತಿನ್ನಿಸಿದ ಯುವತಿ, ಆಮೇಲೇನಾಯ್ತು ನೋಡಿ
ಗಲಾಟೆ

Updated on: Dec 26, 2025 | 10:28 AM

ಹುಬ್ಬಹಬ್ಬ ರಣರಂಗವಾಗಿ ಮಾರ್ಪಟ್ಟಿತ್ತು , ಬಾಯ್​ಫ್ರೆಂಡ್ ಎದುರು ತನ್ನ ಆತ್ಮೀಯ ಸ್ನೇಹಿತನಿಗೆ ಯುವತಿ ಮೊದಲು ಕೇಕ್(Cake) ತಿನ್ನಿಸಿದ್ದಕ್ಕೆ ದೊಡ್ಡ ಜಗಳವೇ ನಡೆದುಹೋಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಗೆಳೆಯನೊಬ್ಬ ತನ್ನ ಗೆಳತಿಯ ಹುಟ್ಟುಹಬ್ಬವನ್ನು ಎಂದೂ ಮರೆಯದ ರೀತಿ ಆಚರಿಸಲು ಹಲವು ಬಗೆಯ ಅಲಂಕಾರವನ್ನು ಮಾಡಿದ್ದ,ಎಲ್ಲೆಲ್ಲೂ ದೀಪಗಳು, ಕೇಕ್​ಗಳು ರಾರಾಜಿಸುತ್ತಿದ್ದವು. ಆದರೆ ಆ ಸಂತೋಷ ಕೆಲವೇ ಕೆಲವು ನಿಮಿಷಗಳಿಗೆ ಸೀಮಿತವಾಗಿತ್ತು.

ಯುವತಿ ತನ್ನ ಪಕ್ಕದಲ್ಲಿ ನಿಂತಿದ್ದ ಗೆಳೆಯನಿಗೆ ಕೇಕ್ ಮೊದಲು ತಿನ್ನಿಸಿದ ಪರಿಣಾಮ ಆಕೆಯ ಬಾಯ್​ಫ್ರೆಂಡ್ ಕೋಪಗೊಂಡು ಗೆಳೆತಿ ಮುಂದೆ ರೇಗಾಡಿದ್ದಾನೆ. ಆಕೆ ತನಗೆ ಮೊದಲು ಕೇಕ್ ತಿನ್ನಿಸಬೇಕೆಂದು ಆತ ಬಯಸಿದ್ದ. ಆದರೆ ಗೆಳತಿ ನಡೆದುಕೊಂಡಿದ್ದನ್ನು ಕಂಡು ಆತನಿಗೆ ಬೇಸರಗೊಂಡು. ಅಲ್ಲಿದ್ದ ಕೇಕ್, ಅಲಂಕಾರಿಕ ವಸ್ತುಗಳೆಲ್ಲವನ್ನೂ ನಾಶಪಡಿಸಿದ್ದಾರೆ. ವೀಕ್ಷಕರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಅನೇಕರು ಗೆಳೆಯನ ನಡವಳಿಕೆಯನ್ನು ಟೀಕಿಸಿದ್ದಾರೆ. ಈ ಸಂಬಂಧ ಹೆಚ್ಚು ದಿನ ಬಾಳುವುದಿಲ್ಲ ಎಂದು ಹೇಳಿದ್ದಾರೆ. ಕೆಲವೊಂದು ಸಂಬಂಧಗಳು ಹಾಗೆ ಹೆಣ್ಣಾಗಲಿ, ಗಂಡಾಗಲೀ ತಮ್ಮ ಗೆಳೆಯ ಅಥವಾ ಗೆಳತಿ ತಮಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕೆಂದು ಬಯಸುತ್ತಾರೆ. ಆದರೆ ಅದು ಸಾಧ್ಯವಾಗದಿದ್ದಾಗ, ತಾವು ಕೊಟ್ಟಿರುವ ಪ್ರೀತಿ ಸಾಲಲಿಲ್ಲವೇ ಎಂದು ಬೇಸರ ಪಡುತ್ತಾ, ದ್ವೇಷ ಬೆಳೆಸಿಕೊಳ್ಳುತ್ತಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ